SHIVAMOGGA NEWS TODAY

ಆವರಣದ ಎಲ್ಲಾ ಗೇಟ್​ಗಳನ್ನು ಕ್ಲೋಸ್ ಮಾಡಿ, ಕುವೆಂಪು ವಿವಿಯಲ್ಲಿ ವಿಸಿಯನ್ನು ತಳ್ಳಾಡಿದ್ರಾ!? ಇಷ್ಟಕ್ಕೂ ನಡೆದಿದ್ದೇನು?

[email protected] ನವೀಕರಣ: 29 ಏಪ್ರಿಲ್ 2026, 5:44 ಅಪರಾಹ್ನ ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಕುವೆಂಪು ವಿವಿಯಲ್ಲಿ NSUI ಬೃಹತ್ ಪ್ರತಿಭಟನೆ: ಕುಲಪತಿ ಕಚೇರಿ ವಸ್ತುಗಳು ಧ್ವಂಸ, ಘೇರಾವ್

ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಆಡಳಿತಾತ್ಮಕ ವೈಫಲ್ಯಗಳನ್ನು ವಿರೋಧಿಸಿ ಇಂದು ಎನ್.ಎಸ್.ಯು.ಐ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ಏಕಾಏಕಿ ವಿಶ್ವವಿದ್ಯಾಲಯದ ಆವರಣದೊಳಗೆ ನುಗ್ಗಿದ ಪ್ರತಿಭಟನಾಕಾರರು, ಅಲ್ಲಿದ್ದ ಹೂವಿನ ಕುಂಡಗಳು ಹಾಗೂ ಕುರ್ಚಿಗಳನ್ನು ಧ್ವಂಸಗೊಳಿಸಿದರು. ನಂತರ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರ ಕಚೇರಿ ಮುಂದೆ ಜಮಾಯಿಸಿ, ‘ಬೇಕು ಬೇಕು ನ್ಯಾಯ ಬೇಕು’ ಎಂದು ಘೋಷಣೆಗಳನ್ನು ಕೂಗುತ್ತಾ ಕುಲಪತಿಗಳಿಗೆ ಘೇರಾವ್ ಹಾಕಿದರು.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಕುಲಪತಿಗಳು, ತಕ್ಷಣವೇ ವಿಶ್ವವಿದ್ಯಾಲಯದ ಎಲ್ಲಾ ಪ್ರವೇಶ ದ್ವಾರಗಳನ್ನು ಮುಚ್ಚುವಂತೆ ಸಿಬ್ಬಂದಿಗೆ ಸೂಚಿಸಿದರು. ಅಷ್ಟೇ ಅಲ್ಲದೆ, ಈ ಕೃತ್ಯದಲ್ಲಿ ಭಾಗಿಯಾದ ಎಲ್ಲರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು.

#KuvempuUniversity, #NSUIProtest, #Shivamogga, #Shankaraghatta, #StudentProtest, #Vandalism, #UniversityCrisis, #EducationNews, #KarnatakaNews, #VCSharathAnanthamurthy, #JusticeForStudents, #MalnadToday, #UniversityAdministration, #BreakingNewsShivamogga

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು: