ಪೆನ್ಸಿಲ್ ಮೊನೆಯಲ್ಲಿ ಕಟೀಲು ಅಮ್ಮನ ಕಲಾಕೃತಿ: ಗಿನ್ನಿಸ್ ದಾಖಲೆಗೆ ಸೇರಿದ ಉಡುಪಿಯ ಸಂಜಯ್ ಕಡೂರು ಸಾಧನೆ

ಹಂಚಿಕೊಳ್ಳಿ
WhatsApp Facebook X Telegram
World Record for Kateel Devi Pencil Micro Art
World Record for Kateel Devi Pencil Micro Art

ಉಡುಪಿ: ಸಾಧನೆ ಎಂಬುದು ಯಾರೋಬ್ಬರ ಸ್ವತ್ತಲ್ಲ, ಕಠಿಣ ಶ್ರಮದೊಂದಿಗೆ ದೃಢ ಮನಸ್ಸಿದ್ದರೆ ಮನುಷ್ಯ ಏನನ್ನಾದರೂ ಸಾಧಿಸಿಯೇ ತೀರುತ್ತಾನೆ ಎಂಬುದಕ್ಕೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಮೂಲದ ಸಂಜಯ್ ಕಾಡೂರು ಎಂಬ 34 ವರ್ಷದ ಯುವಕ ಈಗ ಉತ್ತಮ ನಿದರ್ಶನವಾಗಿದ್ದಾರೆ. 

ಶಿವಮೊಗ್ಗ ವಿಮಾನ ನಿಲ್ದಾಣಶಿವಮೊಗ್ಗ ಏರ್​ಪೋರ್ಟ್​ ವಿಶ್ವೇಶ್ವರ್​ ಭಟ್​ Facebook post ,ಷೇರ್ ಮಾಡಿ ರಿಪ್ಲೆ ನೀಡಿದ ಸಂಸದ

ಮೂಲತಃ ರೈಲ್ವೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಾ ಚಿತ್ರ ನಿರ್ದೇಶನದಲ್ಲೂ ತೊಡಗಿಸಿಕೊಂಡಿರುವ ಸಂಜಯ್ ಅವರಿಗೆ ಕಲೆಯ ಮೇಲೆ ಅಪಾರ ಪ್ರೀತಿ. ಇದೀಗ ಅವರು ತಮ್ಮ ಅದ್ಭುತ ಕಲಾಕೌಶಲದ ಮೂಲಕ ಪೆನ್ಸಿಲ್ ಲೆಡ್‌ನಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಅತೀ ಸಣ್ಣ ಕಲಾಕೃತಿಯನ್ನು ಬಿಡಿಸಿ ಜಾಗತಿಕ ಮಟ್ಟದ ಗಿನ್ನಿಸ್ ದಾಖಲೆಗೆ ತಮ್ಮ ಹೆಸರನ್ನು ಸೇರ್ಪಡೆಗೊಳಿಸಿದ್ದಾರೆ.

ಕೇವಲ 2 ಮಿಲಿ ಮೀಟರ್ ಅಗಲ, 5 ಮಿಲಿ ಮೀಟರ್ ಎತ್ತರ ಹಾಗೂ 1 ಮಿಲಿ ಮೀಟರ್ ದಪ್ಪದ ಅತ್ಯಂತ ಸಣ್ಣದಾದ 4ಬಿ ಡ್ರಾಯಿಂಗ್ ಪೆನ್ಸಿಲ್ ಮೊನೆಯಲ್ಲಿ ಈ ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಪೆನ್ಸಿಲ್ ಲೆಡ್ ಆರ್ಟ್ ಮೂಡಿಬಂದಿದೆ. ಈ ಅಪರೂಪದ ಸಾಧನೆಯು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಪಾಲಾಗಿದ್ದು, ಏಪ್ರಿಲ್ 15 ರಂದು ಅಂತಿಮ ಹಂತದ ಪ್ರಮಾಣೀಕರಣ ಪ್ರಕ್ರಿಯೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಈ ಸಂಬಂಧಿಸಿದ ಅಧಿಕೃತ ಪ್ರಮಾಣಪತ್ರದ ಸಾಫ್ಟ್ ಕಾಪಿ ಈಗಾಗಲೇ ಸಂಜಯ್ ದಯಾನಂದ್ ಅವರ ಕೈಸೇರಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ. ಇಷ್ಟೊಂದು ಸೂಕ್ಷ್ಮ ಜಾಗದಲ್ಲಿ ದೇವಿಯ ಆಕೃತಿಯನ್ನು ಬಿಡಿಸಿದ ಇವರ ಸಾಹಸಕ್ಕೆ ಈಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ,

World Record for Kateel Devi Pencil Micro Art

World Record for Kateel Devi Pencil Micro Art
World Record for Kateel Devi Pencil Micro Art
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor