ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಪ್ರಸನ್ನ ಕೃಷ್ಣ ಪಟಗಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ರಾಘವೇಂದ್ರ ರಾವ್ ಅವರನ್ನು ವರ್ಗಾಯಿಸಲಾಗಿದೆ. ರಾಘವೇಂದ್ರ ರಾವ್ರ ವರು ಪ್ರಸ್ತುತ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮನದಲ್ಲಿ ಕೆಲಸ ನಿರ್ವಹಿಸ್ತಿದ್ದಾರೆ.
ಪ್ರಸನ್ನ ಕೃಷ್ಣ ಪಟಗಾರ್ ಅವರನ್ನು ಕೊಡಗಿನಲ್ಲಿರುವ ಅರಣ್ಯ ಸಂಶೋಧನಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಶಿವಮೊಗ್ಗ ವನ್ಯಜೀವಿ ವಿಭಾಗದ ನೂತನ ಡಿಸಿಎಫ್ ಆಗಿ ರಾಘವೇಂದ್ರ ರಾವ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
