KARNATAKA NEWS/ ONLINE / Malenadu today/ May 11, 2023 GOOGLE NEWS
ಶಿವಮೊಗ್ಗ/ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಪೂರ್ಣಗೊಂಡಿದೆ. ಚುನಾವಣೆಯನ್ನ ಯಶಸ್ವಿಯಾಗಿ ಮುಗಿಸಿದ ಸಿಬ್ಬಂದಿ ಹಾಗೂ ಅಭ್ಯರ್ಥಿಗಳು ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಈ ನಡುವೆ ಮತದಾನ ಅಂಕಿಅಂಶಗಳ ಬಗ್ಗೆ ಚರ್ಚೆಯಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ವಿಚಾರದಲ್ಲಿ ಅಂಕಿ ಅಂಶಗಳನ್ನು ಗಮನಿಸುವುದಾದರೆ, ಇದುವರೆಗೂ ಲಭ್ಯವಿರುವ ಅಂಕಿಅಂಶಗಳ ಪ್ರಕಾರ ಕಳೆದ 2018 ಚುನಾವಣೆಗಿಂತಲು ತುಸು ಕಡಿಮೆ ಮತದಾನ ಶಿವಮೊಗ್ಗ ಜಿಲ್ಲೆಯಲ್ಲಿ ಆಗಿದೆ.
ಈ ಸಲದ ಚುನಾವಣೆಯ ವಿಶೇಷಗಳು
2018ರ ಚುನಾವಣೆಗೆ ಹೋಲಿಸಿದರೆ ಈ ಸಲ ಶೇ.0.44ರಷ್ಟು ಇಳಿಕೆಯಾಗಿದೆ. 2018ರಲ್ಲಿ ಶೇ.78.72ರಷ್ಟು ಮತದಾನವಾಗಿತ್ತು. 2023ರಲ್ಲಿ ಶೇ.78.28ರಷ್ಟು ಮತದಾನವಾಗಿದೆ.
ಇನ್ನೂ ತೀರ್ಥಹಳ್ಳಿಯಲ್ಲಿ ಈ ಸಲ ಅತ್ಯದಿಕ ಮತದಾನವಾಗಿದ್ದು, 2018ರ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಶೇ.84.83ರಷ್ಟು ಮತದಾನವಾಗಿತ್ತು. ಈ ಸಲವೂ ಕಳೆದ ಚುನಾವಣೆಯಲ್ಲಿ ಆದಷ್ಟೇ ಮತದಾನವಾಗಿದೆ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಅತಿಹೆಚ್ಚು ಮತದಾನದ ಕ್ಷೇತ್ರಗಳ ಪೈಕಿ ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ 2018 ರ ಚುನಾವಣೆಯಲ್ಲಿ ಶೇಕಡಾ 81.07 ರಷ್ಟು ಮತದಾನವಾಗಿತ್ತು ಈ ಸಲ 83.71 ರಷ್ಟು ಮತದಾನವಾಗಿದೆ.
ಶಿವಮೊಗ್ಗ ನಗರ ಹಾಗೂ ಭದ್ರಾವತಿ ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದ್ದು, 2018 ರಲ್ಲಾದ ಮತದಾನದ ಪ್ರಮಾಣಕ್ಕಿಂತ ಹೆಚ್ಚು ಮತದಾನವಾಗಿದೆ.
ಭದ್ರಾವತಿಯಲ್ಲಿ 2018ರಲ್ಲಿ ಶೇ.73.13ರಷ್ಟು ಮತದಾನವಾಗಿತ್ತು. 2023ರಲ್ಲಿ ಶೇ.68.47ರಷ್ಟು ಮತದಾನವಾಗಿದ್ದು, ಶೇ.4.66ರಷ್ಟು ಇಳಿಕೆಯಾಗಿದೆ.
ಸೊರಬ ಮತಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಶೇ.84.47ರಷ್ಟು ಮತದಾನವಾಗಿತ್ತು. ಈ ಸಲ ಶೇ.82.97ರಷ್ಟಾಗಿದ್ದು, ಶೇ.1.5ರಷ್ಟು ಮತದಾನ ಕಡಿಮೆಯಾಗಿದೆ.
ಶಿಕಾರಿಪುರದಲ್ಲಿ ಶೇ.0.85, ಶಿವಮೊಗ್ಗದಲ್ಲಿ ಶೇ.2.16, ಶಿವಮೊಗ್ಗ ಗ್ರಾಮಾಂತರದಲ್ಲಿ ಶೇ.2.64, ಶಿಕಾರಿಪುರದಲ್ಲಿ ಶೇ.0.92 ಹಾಗೂ ಸಾಗರದಲ್ಲಿ ಶೇ.0.85ರಷ್ಟು ಮತದಾನದಲ್ಲಿ ಹೆಚ್ಚಳವಾಗಿದೆ
ಶಿವಮೊಗ್ಗದ ವಿಧಾನಸಭಾ ಕ್ಷೇತ್ರಗಳ ಅಂಕಿ ಅಂಶಗಳು
ಶಿವಮೊಗ್ಗ ಜಿಲ್ಲೆ | 2018 | 2023 |
ಭದ್ರಾವತಿ | 73.13 | 68.47 |
ಸಾಗರ | 79.35 | 80.2 |
ಶಿಕಾರಿಪುರ | 81.65 | 82.57 |
ಶಿವಮೊಗ್ಗ | 66.58 | 68.74 |
ಶಿವಮೊಗ್ಗ ಗ್ರಾ. | 81.07 | 83.71 |
ಸೊರಬ | 84.47 | 82.97 |
ತೀರ್ಥಹಳ್ಳಿ | 84.83 | 84.83 |
ಒಟ್ಟು | 78.72 | 78.28 |
