ಶಿವಮೊಗ್ಗ : ಡಿಜಿಟಲ್ ವಂಚನೆಗಳಿಗೆ ಬ್ರೇಕ್ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ ಈಗ ಯುಪಿಐ (UPI) ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ. ಇನ್ಮುಂದೆ 10,000 ಕ್ಕಿಂತ ಹೆಚ್ಚಿನ ಮೌಲ್ಯದ ಹಣವನ್ನು ವರ್ಗಾವಣೆ ಮಾಡಿದರೆ, ಅದು ತಕ್ಷಣವೇ ನಾವು ಯಾರ ಖಾತೆಗೆ ಹಣ ಹಾಕಿರುತ್ತಿವೋ ಆ ಖಾತೆಗೆ ಜಮೆಯಾಗುವ ಬದಲು ಅದನ್ನು ಒಂದು ಗಂಟೆ ಕಾಲ ತಡೆಹಿಡಿಯುವ ಹೊಸ ನಿಯಮ ಜಾರಿಗೆ ಬರಲಿದೆ.
ಶಿವಮೊಗ್ಗ : ವಿಮಾನಗಳ ಸಲುವಾಗಿ ಸಂಸದರಿಗೆ ಬಿಗ್ ಮನವಿ!
ಹೇಗೆ ಕೆಲಸ ಮಾಡುತ್ತದೆ ಈ ವ್ಯವಸ್ಥೆ
ಆರ್‌ಬಿಐ ಪ್ರಸ್ತಾಪಿಸಿರುವ ಈ ನಿಯಮದಂತೆ, ನೀವು 10 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಯಾರಿಗಾದರೂ ಕಳುಹಿಸಿದಾಗ ಬ್ಯಾಂಕ್‌ಗಳು ಆ ಮೊತ್ತವನ್ನು ಒಂದು ಗಂಟೆಯವರೆಗೆ ಹೋಲ್ಡ್ ಮಾಡಲಿವೆ. ಈ ಒಂದು ಗಂಟೆಯ ಅವಧಿಯಲ್ಲಿ ಗ್ರಾಹಕರು ತಾವು ಕಳುಹಿಸಿದ ಹಣದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಬಹುದು. ಒಂದು ವೇಳೆ ಆಕಸ್ಮಿಕವಾಗಿ ಅಥವಾ ವಂಚಕರಿಗೆ ಹಣ ವರ್ಗಾವಣೆಯಾಗಿದ್ದರೆ, ಅದನ್ನು ರದ್ದುಗೊಳಿಸಲು (Cancel) ಗ್ರಾಹಕರಿಗೆ ಕಾಲಾವಕಾಶ ಸಿಗಲಿದೆ.
UPI Rule Change ನಿರ್ಧಾರಕ್ಕೆ ಕಾರಣವೇನು?
ಕಳೆದ ವರ್ಷ ದೇಶದಲ್ಲಿ ಬರೊಬ್ಬರಿ 22,931 ಕೋಟಿ ರೂಪಾಯಿಗಳ ಡಿಜಿಟಲ್ ವಂಚನೆ ಪ್ರಕರಣಗಳು ವರದಿಯಾಗಿವೆ. ಅದರಲ್ಲೂ 10 ಸಾವಿರಕ್ಕಿಂತ ಹೆಚ್ಚಿನ ವರ್ಗಾವಣೆಗಳಲ್ಲೇ ಅತಿ ಹೆಚ್ಚು ಅಕ್ರಮಗಳು ನಡೆಯುತ್ತಿರುವುದು ಆರ್‌ಬಿಐ ಗಮನಕ್ಕೆ ಬಂದಿದೆ. ಈ ವಂಚನೆ ಜಾಲವನ್ನು ಭೇದಿಸಲು ಈ ಒಂದು ಗಂಟೆಯ ವಿಂಡೋ ವ್ಯವಸ್ಥೆಯನ್ನು ತರಲಾಗುತ್ತಿದೆ.
ಸಾಮಾನ್ಯ ಪಾವತಿಗಳಿಗೆ ಅಡ್ಡಿಯಿಲ್ಲ
ಈ ಹೊಸ ನಿಯಮವು ನಿಮ್ಮ ದೈನಂದಿನ ಸಣ್ಣಪುಟ್ಟ ಪಾವತಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಂಗಡಿಗಳಲ್ಲಿ ಮಾಡುವ ಖರೀದಿ, ಇಎಂಐ (EMI), ಎಸ್‌ಐಪಿ (SIP), ಎಲ್‌ಐಸಿ ಪ್ರೀಮಿಯಂ ಹಾಗೂ ಸಬ್‌ಸ್ಕ್ರಿಪ್ಶನ್‌ಗಳು ಎಂದಿನಂತೆ ತಕ್ಷಣವೇ ಪೂರ್ಣಗೊಳ್ಳಲಿವೆ. ಕೇವಲ ಅನುಮಾನಾಸ್ಪದ ಅಥವಾ ಹೊಸದಾಗಿ ಹಣ ವರ್ಗಾಯಿಸುವ ಸಂದರ್ಭದಲ್ಲಿ ಮಾತ್ರ ಈ ನಿಯಮ ಅನ್ವಯವಾಗಲಿದೆ ಎಂದು ಮೂಲಗಳು ತಿಳಿಸಿವೆ.
UPI Rule Change 1-Hour Delay for Transfers Above 10k


