two death in ganesha idol shift / ಗಣಪತಿ ಶಿಫ್ಟ್ ಮಾಡುವಾಗ ಆಘಾತ/ 9 ಮಂದಿಯ ಪೈಕಿ ಇಬ್ಬರ ಸಾವು, 6 ಮಂದಿ ಸ್ಥಿತಿ ಗಂಭೀರ / ವಿಡಿಯೋ

Malenadu Today

two death in ganesha idol shift ಕೊರುಟ್ಲಾದಲ್ಲಿ ಗಣೇಶ ಮೂರ್ತಿ ಸಾಗಿಸುವಾಗ ವಿದ್ಯುತ್ ಆಘಾತ; ಇಬ್ಬರು ಯುವಕರ ದುರ್ಮರಣ, ಆರು ಮಂದಿಗೆ ಗಂಭೀರ ಗಾಯ

ತೆಲಂಗಾಣದ Jagtial ಜಿಲ್ಲೆ ಕೊರುಟ್ಲಾದಲ್ಲಿ ನಡೆದ ದುರದೃಷ್ಟಕರ ಘಟನೆಯೊಂದು ಸಂಭವಿಸಿದೆ. ಗಣೇಶನ ಮೂರ್ತಿಯನ್ನು ಶಿಫ್ಟ್​ ಮಾಡುತ್ತಿದ್ದಾಗ ವಿದ್ಯುತ್​ ಶಾಕ್​ ನಿಂದಾಗಿ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಅವಘಡದಲ್ಲಿ ಇತರ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟವರನ್ನು ಬಂಟಿ ಸಾಯಿ ಮತ್ತು ವಿನೋದ್ ಎಂದು ಗುರುತಿಸಲಾಗಿದೆ. ಘಟನೆಯ ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

two death in ganesha idol shift

two death in ganesha idol shift
two death in ganesha idol shift

ಬಾಲಾಜಿ ಕಲಾ ಆರ್ಟ್ಸ್‌ನ ವಿಗ್ರಹ ತಯಾರಕರಾದ ಅಲ್ವಾಲ ವಿನೋದ್ ಮತ್ತು ಬಂಟಿ ಸಾಯಿ ಅವರು ಕೊರುಟ್ಲಾ ಪಟ್ಟಣದ ಹೊರವಲಯದಲ್ಲಿ ವಿನಾಯಕ ವಿಗ್ರಹಗಳನ್ನು ಸಿದ್ಧಪಡಿಸುತ್ತಿದ್ದರು. ನಿನ್ನೆ ದಿನ ಭಾನುವಾರದಂದು, ಮಳೆಯಿಂದಾಗಿ ಶೆಡ್‌ನಲ್ಲಿದ್ದ ವಿಗ್ರಹಗಳು ಒದ್ದೆಯಾಗಿದ್ದರಿಂದ, ಅವುಗಳನ್ನು ಬಿಸಿಲಿನಲ್ಲಿ ಒಣಗಿಸಲು ಪಕ್ಕದ ಮತ್ತೊಂದು ಶೆಡ್‌ಗೆ ಸ್ಥಳಾಂತರಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ, 13 ಅಡಿ ಎತ್ತರದ ವಿನಾಯಕ ವಿಗ್ರಹವು ಕೊಂಡ್ರಿಕರ್ಲಾದಿಂದ ಬರುತ್ತಿದ್ದ 133/11 ಕೆವಿ ವಿದ್ಯುತ್ ತಂತಿಗಳಿಗೆ ಆಕಸ್ಮಿಕವಾಗಿ ತಗುಲಿದೆ. ಇದರ ಪರಿಣಾಮವಾಗಿ, ಸುಮಾರು ಆರರಿಂದ ಒಂಬತ್ತು ಜನರಿಗೆ ವಿದ್ಯುತ್ ಶಾಕ್ ತಗುಲಿದೆ.

ವಿದ್ಯುತ್ ಆಘಾತಕ್ಕೆ ಒಳಗಾದ ಕೂಡಲೇ ಎಲ್ಲರೂ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಅಪಘಾತದ ಅರಿವಾದ ಸ್ಥಳೀಯರು ತಕ್ಷಣ ಕೋಲುಗಳ ಸಹಾಯದಿಂದ ವಿದ್ಯುತ್ ವಯರನ್ನು ಬೇರೆಡೆ ಎಳೆದಿದ್ದಾರೆ. ಆ ಬಳಿಕ ಕರೆಂಟ್​ ತಗುಲಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘಟನೆಯ ವಿಡಿಯೋ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಭೀಕರ ಎನಿಸುತ್ತಿದೆ. 

ಇನ್ನಷ್ಟು ಸುದ್ದಿಗಳಿಗಾಗಿ ಓದಿ : malenadutoday.com

ತೆಲಂಗಾಣದ ಮಾಹಿತಿಗಾಗಿ :Telangana Government

Share This Article