Tragedy in Soraba / ಒಣಗಿಸಿದ್ದ ಬಟ್ಟೆ ತೆಗೆಯುವ ವೇಳೆ ಶಾಕ್/ ದಂಪತಿ ಸಾವು/ ಹೇಗಾಯ್ತು ಘಟನೆ?

Tragedy in Soraba Couple Electrocuted Death 27 ಶಿವಮೊಗ್ಗ: ಸೊರಬದಲ್ಲಿ ವಿದ್ಯುತ್ ಶಾಕ್‌ನಿಂದ ದಂಪತಿ ಸಾವು, ಮೂವರು ಮಕ್ಕಳು ಅನಾಥ

ಶಿವಮೊಗ್ಗ, [ಜೂನ್ 27, 2025]: ಜಿಲ್ಲೆಯ ಸೊರಬ ತಾಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ವಿದ್ಯುತ್ ಶಾಕ್‌ಗೆ ಒಳಗಾಗಿ ದಂಪತಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ಕಪ್ಪಗಳಲೆ ಗ್ರಾಮದ ಕೃಷ್ಣಪ್ಪ (55) ಮತ್ತು ಅವರ ಪತ್ನಿ ವಿನೋದ (42) ಮೃತ ದುರ್ದೈವಿಗಳು. ನಿನ್ನೆ ರಾತ್ರಿ ಸುಮಾರು 9 ಗಂಟೆ ವೇಳೆಗೆ ಈ ಘಟನೆ ಸಂಭವಿಸಿದೆ.

Shivamogga breaking news june 24 / 
Shivamogga breaking news june 24 /

Tragedy in Soraba Couple Electrocuted Death 27

ಘಟನೆ ವಿವರ: ಮೃತ ದಂಪತಿ ತಮ್ಮ ಮನೆಯ ಮುಂದೆ ಬಟ್ಟೆ ಒಣಗಿಸಲು ಕಟ್ಟಿದ್ದ ಕಬ್ಬಿಣದ ತಂತಿಗೆ ವಿದ್ಯುತ್ ಶಾಕ್ ತಗುಲಿದ ಪರಿಣಾಮ ಸಾವನ್ನಪ್ಪಿದ್ದಾರೆ. ಮನೆಯ ವಿದ್ಯುತ್ ಸಂಪರ್ಕಕ್ಕಾಗಿ ಹಲವು ವೈರ್‌ಗಳು ಇಲ್ಲಿತ್ತು. ಆ ಪೈಕಿ ಮೋಟಾರ್​ ಲಿಂಕ್ ಆಗಿದ್ದ ಕರೆಂಟ್​ ವೈಯರ್ ಸ್ಕಿನ್​ ಆಗಿದ್ದು, ಅದು ಬಟ್ಟೆ ಒಣಗಿಸುವ ತಂತಿಗೆ ತಾಗಿ ವಿದ್ಯುತ್​ ಪ್ರವಹಿಸಿತ್ತು.

ಇದು ಗೊತ್ತಿರದೆ ಬಟ್ಟೆಗಳನ್ನು ತೆಗೆಯಲು ವಿನೋದಾ ನ್ಯಾಲಿಗೆ ಕೈ ಹಾಕಿದಾಗ, ಅವರಿಗೆ ವಿದ್ಯುತ್ ಶಾಕ್ ಹೊಡೆದಿದೆ. ಪತ್ನಿ ಒದ್ದಾಡುವುದನ್ನು ನೋಡಿದ ಪತಿ ಕೃಷ್ಣಪ್ಪ ಅವರನ್ನು ರಕ್ಷಿಸಲು ಮುಂದಾದರು. ಈ ವೇಳೆ ಅವರಿಗೂ ವಿದ್ಯುತ್ ತಗುಲಿದ್ದು, ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ ಇದ್ದು, ಇದೀಗ ಅವರು ಅನಾಥರಾಗಿದ್ದಾರೆ. ಮೃತದೇಹಗಳನ್ನು ಸೊರಬದ ಶವಾಗಾರಕ್ಕೆ ರವಾನಿಸಲಾಗಿದೆ. ಈ ದುರಂತ ಘಟನೆ ಗ್ರಾಮದಲ್ಲಿ ಆಘಾತ ಮೂಡಿಸಿದೆ.

Tragedy in Soraba: Couple Electrocuted to Death, Three Children Orphaned in Shivamogga

Leave a Comment