ಶಿವಮೊಗ್ಗ / ಜಿಲ್ಲೆಯ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಕೋರ್ಟ್ಗೆ ಹಾಜರಾಗದ ವ್ಯಕ್ತಿಗಳನ್ನು ಹುಡುಕಿ ಹುಡುಕಿ ಕೋರ್ಟ್ ಮುಂದೆ ಪ್ರಸಂಟ್ ಮಾಡ್ತಿದ್ದಾರೆ. ಈ ಸಂಬಂಧ ಒಂದೇ ದಿನ ಮೂರು ಪ್ರಕರಣಗಳು ವರದಿಯಾಗಿದೆ.

ಹೌದು, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಕೋಟೆ ಪೊಲೀಸ್ ಠಾಣೆ, ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್ ಹಾಗೂ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿದ್ದ ತೀವ್ರಗಾಯ ಪ್ರಕರಣದಲ್ಲಿ 33 ವರ್ಷಗಳಿಂದ ಆರೋಪಿಯೊಬ್ಬ ತಲೆಮರೆಸಿಕೊಂಡಿದ್ದ . ಈತನ ವಿರುದ್ಧ 1989ರಲ್ಲಿ ಕೇಸ್ ದಾಖಲಾಗಿತ್ತು. ಸೆಕ್ಷನ್ 324, 326 ಸಹಿತ 34 ಐಪಿಸಿ ಪ್ರಕರಣದ ಆರೋಪಿಯಾಗಿದ್ದ ಈತ ಬೆಂಗಳೂರಿನ ಇಟ್ಟಮಡು ನಿವಾಸಿಯಾಗಿದ್ದ . 62 ವರ್ಷದ ಈತನ ವಿರುದ್ಧ ಪಿಸಿಜೆ ಮತ್ತು ಸಿಜೆಎಂ ನ್ಯಾಯಾಲಯ ದಸ್ತಗಿರಿ ವಾರಂಟ್ ಹೊರಡಿಸಿತ್ತು. ಕೋಟೆ ಠಾಣೆಯ ಪಿಐ ಹರೀಶ್ ಕೆ ಪಟೇಲ್ ರವರ ನೇತೃತ್ವದಲ್ಲಿ, ಪಿಎಸ್ಐ ಸಂತೋಷ್ ಭಾಗೋಜಿ, ಹೆಚ್ ಸಿ ಧನಂಜಯ್ ಹಾಗೂ ಹೆಚ್ ಸಿ ಚಂದ್ರುಆರೋಪಿಯನ್ನು ಪತ್ತೆ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ.
ಪೇಪರ್ ಟೌನ್ ಪೊಲೀಸ್ ಸ್ಟೇಷನ್ ಕೇಸ್ /ಶಿವಮೊಗ್ಗ ಪೊಲೀಸ್
ಮತ್ತೊಂದು ಕಾರ್ಯಾಚರಣೆಯಲ್ಲಿ ಪೇಪರ್ ಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳವು ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಲಂ 457, 380 ಐಪಿಸಿ ಪ್ರಕರಣದ ಆರೋಪಿ ಭದ್ರಾವತಿ ನಿವಾಸಿ 13 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಅರೆಸ್ಟ್ ವಾರಂಟ್ ಇತ್ತು ಹೀಗಾಗಿ ಪೇಪರ್ ಟೌನ್ ಠಾಣೆಯ ಪಿಐ ಕುಮಾರ್ ಎನ್ ರವರ ನೇತೃತ್ವದಲ್ಲಿ, ಎಎಸ್ಐ ಕುಮಾರ್, ಹೆಚ್ ಸಿ ಯಲ್ಲಪ್ಪ ಹಾಗೂ ಹೆಚ್ ಸಿ ವಾಸುದೇವ್ ಆರೋಪಿಯನ್ನ ಪತ್ತೆ ಮಾಡಿ ಕೋರ್ಟ್ಗೆ ಪ್ರೊಡ್ಯೂಸ್ ಮಾಡಿದ್ದಾರೆ.
ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್ ಕೇಸ್
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳವು ಪ್ರಕರಣದ ಆರೋಪಿಯನ್ನು ಸಹ ಕಾರ್ಯಾಚರಣ ನಡೆಸಿ ಪತ್ತೆಹಚ್ಚಲಾಗಿದೆ. ತೀರ್ಥಹಳ್ಳಿ ನಿವಾಸಿ ಕಳೆದ 05 ವರ್ಷಗಳಿಂದ ಘನ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಭದ್ರಾವತಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ ಸಿ ನ್ಯಾಯಾಲಯ ಆರೋಪಿಯ ವಿರುದ್ಧ ದಸ್ತಗಿರಿ ವಾರಂಟ್ ಹೊರಡಿಸಿತ್ತು. ಭದ್ರಾವತಿ ಗ್ರಾಮಾಂತರ ಠಾಣೆಯ ಪಿಐ ಚಿದಾನಂದ ರವರ ನೇತೃತ್ವದಲ್ಲಿ, ಹೆಚ್ ಸಿ ರವಿಕುಮಾರ್ ಹಾಗೂ ಹೆಚ್ ಸಿ ಕುಮಾರನಾಯ್ಕ ಆರೋಪಿಯನ್ನು ಪತ್ತೆ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯ ಕೋಟೆ, ಭದ್ರಾವತಿ ಗ್ರಾಮಾಂತರ ಮತ್ತು ಪೇಪರ್ ಟೌನ್ ಪೊಲೀಸರು ಪತ್ತೆಹಚ್ಚಿ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.: Three Absconding Accused Arrested After 33, 13, and 5 Years in Shivamogga ಶಿವಮೊಗ್ಗ ಪೊಲೀಸ್
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.