ಏಪ್ರಿಲ್ 6ರ ದಿನಭವಿಷ್ಯ: ಈ ರಾಶಿಯವರಿಗೆ ಭೂಮಿ ಮತ್ತು ಗೃಹ ಯೋಗ!

ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಚೌತಿ ತಿಥಿ ಮಧ್ಯಾಹ್ನ 12.01 ರವರೆಗೆ, ತದನಂತರ ಪಂಚಮಿ ತಿಥಿ ಇರಲಿದೆ ಅನುರಾಧ ನಕ್ಷತ್ರ ರಾತ್ರಿ 12.59 ರವರೆಗೆ, ತದನಂತರ ಜ್ಯೇಷ್ಠ ನಕ್ಷತ್ರ ಇರಲಿದ್ದು, ರಾಹುಕಾಲ: ಬೆಳಿಗ್ಗೆ 7.30 ರಿಂದ 9.00 ರವರೆಗೆ, ಯಮಗಂಡ ಕಾಲ: ಬೆಳಿಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಏಪ್ರಿಲ್ 6ರ ದಿನಭವಿಷ್ಯ
ಏಪ್ರಿಲ್ 6ರ ದಿನಭವಿಷ್ಯ

ಏಪ್ರಿಲ್ 6ರ ದಿನಭವಿಷ್ಯ

ಮೇಷ / ಕೆಲಸದಲ್ಲಿ ವಿಳಂಬ, ದಿಢೀರ್ ಪ್ರಯಾಣ , ಸಾಲ ಮಾಡುವ ಪ್ರಯತ್ನ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಯೋಗವಿದ್ದು, ಉದ್ಯೋಗ ಹಾಗೂ ವ್ಯಾಪಾರದಲ್ಲಿ ಈ ದಿನ ಸಾಮಾನ್ಯವಾಗಿರಲಿದೆ.

ವೃಷಭ / ಹೊಸ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಸ್ನೇಹಿತರೊಂದಿಗಿನ ಭಿನ್ನಾಭಿಪ್ರಾಯ ಶಮನವಾಗಲಿದ್ದು, ಹೊಸ ಆಮಂತ್ರಣ ಬರಲಿವೆ. ಮನೆಯ ಒಳಗೆ ಹಾಗೂ ಹೊರಗೆ ಅನುಕೂಲಕರ ವಾತಾವರಣ, ಉದ್ಯೋಗ ಮತ್ತು ವ್ಯಾಪಾರ ಅತ್ಯುತ್ಸಾಹದಿಂದ ಮುಂದುವರಿಯಲಿವೆ.

ಮಿಥುನ / ಹೊಸ ಪರಿಚಯಗಳು ಹೆಚ್ಚಾಗಲಿವೆ. ದೇವಾಲಯಗಳಿಗೆ ಭೇಟಿ, ಔತಣಕೂಟಗಳಲ್ಲಿ ಭಾಗವಹಿಸುವಿರಿ. ವಾಹನ ಖರೀದಿ ಯೋಗವಿದ್ದು, ಆಸ್ತಿ ವಿವಾದಬಗೆಹರಿಯಲಿವೆ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಉತ್ತಮ ಸ್ಥಿತಿ ಇರಲಿದೆ.

ಕರ್ಕಾಟಕ / ಹೊಸದಾಗಿ ಸಾಲ ಮಾಡಲಿದ್ದಾರೆ. ದೂರ ಪ್ರಯಾಣ ಬೆಳೆಸುವಿರಿ. ಮನೆಯಲ್ಲಿ ಮತ್ತು ಹೊರಗಡೆ ಒತ್ತಡ, ಸ್ನೇಹಿತರೊಡನೆ ವಿವಾದ. ಉದ್ಯೋಗ ಮತ್ತು ವ್ಯಾಪಾರ ಮಂದಗತಿಯಲ್ಲಿ ಸಾಗಲಿವೆ.

ಸಿಂಹ / ಕೆಲಸಗಳನ್ನು ಮುಂದೂಡಲಿದ್ದಾರೆ. ದೂರ ಪ್ರಯಾಣದ, ಆರೋಗ್ಯದಲ್ಲಿ ಏರುಪೇರಾಗಬಹುದು. ಕುಟುಂಬದ ಸದಸ್ಯರಿಂದ ಒತ್ತಡ ಎದುರಾಗಲಿದ್ದು, ಆಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಣ್ಣಪುಟ್ಟ ಬದಲಾವಣೆಗಳಾಗಬಹುದು.

ಕನ್ಯಾ /ಹೊಸ ಕೆಲಸ ಯಶಸ್ವಿಯಾಗಿ ಪೂರ್ಣಗೊಳಿಸುವರು. ಸಮಾಜದಲ್ಲಿ ಗೌರವ, ಮನ್ನಣೆ ದೊರೆಯಲಿದ್ದು, ಉನ್ನತ ವ್ಯಾಸಂಗಕ್ಕೆ ಅವಕಾಶ ಒದಗಿಬರಲಿವೆ. ಗಣ್ಯ ವ್ಯಕ್ತಿಗಳ ಪರಿಚಯ, ಜಮೀನು ಮತ್ತು ವಾಹನ ಖರೀದಿಸುವಿರಿ. ವ್ಯಾಪಾರ, ಉದ್ಯೋಗ ತೃಪ್ತಿದಾಯಕವಾಗಿರಲಿದೆ.

ಏಪ್ರಿಲ್ 6ರ ದಿನಭವಿಷ್ಯ

ತುಲಾ / ಬಂಧುಗಳೊಡನೆ ಸಣ್ಣಪುಟ್ಟ ಭಿನ್ನಾಭಿಪ್ರಾಯ. ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳಲಿದ್ದು, ಅಧಿಕ ಶ್ರಮಪಡಬೇಕಾಗುತ್ತದೆ. ಕೆಲಸಗಳಲ್ಲಿ ಆತುರ ತೋರಲಿದ್ದು, ಜವಾಬ್ದಾರಿ ಹೆಚ್ಚಾಗಲಿವೆ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ನಿರಾಸೆ ಆಗಬಹುದು

ವೃಶ್ಚಿಕ / ಸಂದರ್ಶನಗಳಿಗೆ ಕರೆ ಬರಲಿದೆ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಲಭಿಸಲಿದ್ದು, ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ. ಹಳೆಯ ಸಾಲ ವಸೂಲಾಗಲಿದ್ದು, ಜಮೀನು ಹಾಗೂ ಮನೆ ಖರೀದಿಸುವ ಯೋಗವಿದೆ. ಉದ್ಯೋಗ ಮತ್ತು ವ್ಯಾಪಾರ ಸುಗಮವಾಗಿ ನಡೆಯಲಿವೆ.

ಜ್ಯೊತಿಷ್ಯಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಸುದ್ದಿಗಳು ಜ್ಯೋತಿಷ್ಯ

ಧನುಸ್ಸು / ಅನಿರೀಕ್ಷಿತ ಪ್ರಯಾಣ . ಕುಟುಂಬದಲ್ಲಿ ಗೊಂದಲ ಏರ್ಪಡಲಿದ್ದು, ಸಂಬಂಧಿಕರಿಂದ ಒತ್ತಡ ಎದುರಾಗಲಿವೆ. ಆಧ್ಯಾತ್ಮದತ್ತ ಒಲವು ಹೆಚ್ಚಾಗಲಿದ್ದು, ವ್ಯಾಪಾರ ಹಾಗೂ ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿರಲಿದೆ.

ಮಕರ / ಹೊಸ ಉದ್ಯೋಗಾವಕಾಶ. ಮಾತುಕತೆ ಯಶಸ್ವಿಯಾಗಲಿದ್ದು, ಔತಣಕೂಟಗಳಲ್ಲಿ ಪಾಲ್ಗೊಳ್ಳುವಿರಿ. ಶುಭ ಸುದ್ದಿಯನ್ನು ಕೇಳಲಿದ್ದು, ವಿದ್ಯಾರ್ಥಿಗಳಿಗೆ ಸಂತೋಷದ ವಿಷಯ ಕೇಳಿಬರಲಿದೆ. ಉದ್ಯೋಗ ಮತ್ತು ವ್ಯಾಪಾರ ಯಾವುದೇ ಅಡೆತಡೆಯಿಲ್ಲದೆ ಸಾಗಲಿವೆ.

ಕುಂಭ/ ದೂರದ ಸಂಬಂಧಿಕರನ್ನು ಭೇಟಿಯಾಗುವರು. ಭೂಮಿ ಮತ್ತು ವಾಹನ ಖರೀದಿಸುವ ಯೋಗವಿದೆ. ಸಂದರ್ಶನಗಳಲ್ಲಿ ಯಶಸ್ಸು , ವ್ಯಾಪಾರ ಹಾಗೂ ಉದ್ಯೋಗ ಭರವಸೆ ಮೂಡಿಸಲಿವೆ

ಮೀನ / ಆರ್ಥಿಕ ಪರಿಸ್ಥಿತಿಯು ಕೊಂಚ ಕುಸಿಯಲಿದೆ. ದಿಢೀರ್ ಪ್ರಯಾಣ ಕೈಗೊಳ್ಳುವಿರಿ. ಆರೋಗ್ಯದ ಕಡೆ ಗಮನಹರಿಸುವುದು ಸೂಕ್ತ, ಕೆಲಸದ ಹೊರೆ ಹೆಚ್ಚಾಗಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಒತ್ತಡದ ದಿನ

12 ರಾಶಿಗಳ ಆರ್ಥಿಕ, ಔದ್ಯೋಗಿಕ ಹಾಗೂ ಕೌಟುಂಬಿಕ ಸ್ಥಿತಿಗತಿಗಳ ಸಂಪೂರ್ಣ ಜ್ಯೋತಿಷ್ಯ ಮಾಹಿತಿ ಇಲ್ಲಿದೆ.Daily Horoscope April 6 2026: Land and Property Fortune for These Zodiac Signs!

ಏಪ್ರಿಲ್ 6ರ ದಿನಭವಿಷ್ಯ
ಏಪ್ರಿಲ್ 6ರ ದಿನಭವಿಷ್ಯ

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw