ಶಿವಮೊಗ್ಗ :  33 ವರ್ಷಗಳ ಕಾಲ ತಮರೆಸಿಕೊಂಡಿದ್ದ ಆರೋಪಿ ಬಂಧನ

ಶಿವಮೊಗ್ಗ:ಸುಮಾರು 33 ವರ್ಷಗಳಿಂದ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದ ಹಳೆಯ ಪ್ರಕರಣವೊಂದರ ಆರೋಪಿಯನ್ನು ಶಿವಮೊಗ್ಗದ ಕೋಟೆ ಠಾಣೆಯ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

1989ರಲ್ಲಿ ಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಬೆಂಗಳೂರಿನ ಇಟ್ಟಮಡು ನಿವಾಸಿ ವಿಘ್ನೇಶ (62) ಎಂಬಾತ ಪ್ರಮುಖ ಆರೋಪಿಯಾಗಿದ್ದನು. ಈತನ ಮೇಲೆ ಐಪಿಸಿ ಕಲಂ 324, 326 ಮತ್ತು 34ರ ಅಡಿಯಲ್ಲಿ ಗಂಭೀರ ಹಲ್ಲೆ ಪ್ರಕರಣಗಳು ದಾಖಲಾಗಿದ್ದವು. ಅಂದಿನಿಂದ ತಲೆಮರೆಸಿಕೊಂಡಿದ್ದ ಈತ ನ್ಯಾಯಾಲಯದ ಯಾವುದೇ ವಿಚಾರಣೆಗೂ ಹಾಜರಾಗದೆ ತಲೆತಪ್ಪಿಸಿಕೊಂಡು ಓಡಾಡುತ್ತಿದ್ದನು. 

ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಮಾನ್ಯ PCJ ಮತ್ತು CJM ನ್ಯಾಯಾಲಯವು ಆರೋಪಿಯ ವಿರುದ್ಧ ದಸ್ತಗಿರಿ ವಾರೆಂಟ್ ಹೊರಡಿಸಿತ್ತು. ಹಳೆಯ ಕೇಸ್‌ಗಳನ್ನು ಬೆನ್ನತ್ತಿದ ಕೋಟೆ ಠಾಣೆಯ ಇನ್ಸ್‌ಪೆಕ್ಟರ್ ಹರೀಶ್ ಕೆ. ಪಟೇಲ್ ನೇತೃತ್ವದ ತಂಡದಲ್ಲಿ ಪಿಎಸ್‌ಐ ಸಂತೋಷ್ ಭಾಗೋಜಿ, ಹೆಡ್ ಕಾನ್‌ಸ್ಟೆಬಲ್‌ಗಳಾದ ಧನಂಜಯ್ ಮತ್ತು ಚಂದ್ರು ಅವರು ಸತತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

Shimoga Fugitive Arrested After 33 Years

shivamogga car decor sun control house
shivamogga car decor sun control house

Shimoga Fugitive Arrested After 33 Years
Shimoga Fugitive Arrested After 33 Years