short circuit : ಶಾರ್ಟ್ ಸರ್ಕ್ಯೂಟ್ನಿಂದ ಗೋಪಾಳದ ಮುಖ್ಯ ರಸ್ತೆಯಲ್ಲಿರುವ ದಿ ಬೇಕ್ ಅಂಡ್ ಪ್ಲೇಕ್ ಬೇಕರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದರ ಪರಿಣಾಮ ಬೇಕರಿ ಬಹುತೇಕ ಸುಟ್ಟು ಕರಕಲಾಗಿದೆ. ಈ ಘಟನೆ ಮಂಗಳವಾರ ರಾತ್ರಿ 11;15 ರ ಸುಮಾರಿಗೆ ನಡೆದಿದ್ದು, ಘಟನೆಯಿಂದ 6 ರಿಂದ 7 ಲಕ್ಷ ರೂಪಾಯಿ ವರೆಗೆ ನಷ್ಟು ಉಂಟಾಗಿದೆ ಎಂದು ತಿಳಿದು ಬಂದಿದೆ. ಮಾಲೀಕರು ಬೇಕರಿಯನ್ನು ಮಂಗಳವಾರ ರಾತ್ರಿ ಕ್ಲೋಸ್ ಮಾಡಿಕೊಂಡು ಮನೆಗೆ ತೆರಳಿದ್ದರು. ನಂತರ 11 :15 ರ ಸುಮಾರಿಗೆ ಬೇಕರಿಯ ಮುಂದಿನ ದ್ವಾರದ ಬಾಗಿಲಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆ. ಇದರಿಂದಾಗಿ ಅಂಗಡಿ ಬಹುತೇಕ ಕರಕಲಾಗಿದೆ ಎಂದು ಹೇಳಲಾಗುತ್ತಿದೆ. ಕೆಳ ಅಂತಸ್ಥಿನಲ್ಲಿ ಬೇಕರಿಯಿದ್ದರೆ, ಮೇಲಂತಸ್ಥಿನಲ್ಲಿ ಪಿಜ್ಜಾ, ಬರ್ಗರ್ ಮೊದಲಾದ ವಸ್ತುಗಳನ್ನ ಮಾರಾಟ ಮಾಡುವ ಸೆಲ್ಲಿಂಗ್ ಪಾಯಿಂಟ್ ಇದಾಗಿತ್ತು.