Shivamogga Property Tax ಶಿವಮೊಗ್ಗ : ನೀವುಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮನೆ ಅಥವಾ ಸೈಟು ಹೊಂದಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಪ್ರತಿ ವರ್ಷ ಕಟ್ಟುವ ಆಸ್ತಿ ತೆರಿಗೆಯಲ್ಲಿ (Property Tax) ಈ ಬಾರಿ ನೀವು ಸ್ವಲ್ಪ ಹಣ ಉಳಿಸಬಹುದು. ಹೌದು, ನೀವು ಏಪ್ರಿಲ್ 30ರ ಒಳಗಾಗಿ ಮುಂಗಡವಾಗಿ ಟ್ಯಾಕ್ಸ್ ಪಾವತಿಸಿದರೆ, ಪಾಲಿಕೆಯು ನಿಮಗೆ ಶೇಕಡಾ 5ರಷ್ಟು ರಿಯಾಯಿತಿ ನೀಡುತ್ತಿದೆ. ಅಂದರೆ, ನೀವು ಕಟ್ಟಬೇಕಾದ ಒಟ್ಟು ಮೊತ್ತದಲ್ಲಿ ಒಂದಷ್ಟು ಹಣ ನಿಮ್ಮ ಜೇಬಿನಲ್ಲೇ ಉಳಿಯಲಿದೆ.
ಶಿವಮೊಗ್ಗ: ಎನ್.ಟಿ ರಸ್ತೆಯಲ್ಲಿ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ; ಓರ್ವ ಸಾವು,
ಈ ರಿಯಾಯಿತಿ ಪಡೆಯಲು ನೀವು ಪಾಲಿಕೆ ಕಚೇರಿಗೆ ಹೋಗಿ ಕ್ಯೂ ನಿಲ್ಲಬೇಕೆಂದೇನಿಲ್ಲ. ಮನೆಯಲ್ಲೇ ಆರಾಮವಾಗಿ ಕುಳಿತು ನಿಮ್ಮ ಮೊಬೈಲ್ ಮೂಲಕವೇ ಕೆಲಸ ಮುಗಿಸಬಹುದು. ಪಾಲಿಕೆಯ ವೆಬ್ಸೈಟ್ www.shivamoggacitycorp.org ಗೆ ಹೋಗಿ ಅಥವಾ ಪೇಟಿಎಂ (Paytm), ನೆಟ್ ಬ್ಯಾಂಕಿಂಗ್ ಮೂಲಕ ಸುಲಭವಾಗಿ ಪಾವತಿಸಬಹುದು. ಒಂದು ವೇಳೆ ಆನ್ಲೈನ್ ಬರಲ್ಲ ಎನ್ನುವವರು ನಿಮ್ಮ ಹತ್ತಿರದ ಶಿವಮೊಗ್ಗ ಒನ್ ಕೇಂದ್ರಗಳಿಗೆ ಹೋದರೆ ಸಾಕು.
ಇನ್ನೊಂದು ಮುಖ್ಯವಾದ ವಿಷಯ ಎಂದರೆ, ಒಂದು ವೇಳೆ ನೀವು ಏಪ್ರಿಲ್ 30ರ ಡೆಡ್ಲೈನ್ ಮಿಸ್ ಮಾಡಿದರೆ ಏನಾಗುತ್ತದೆ? ಮೇ ಮತ್ತು ಜೂನ್ ತಿಂಗಳಲ್ಲಿ ಟ್ಯಾಕ್ಸ್ ಕಟ್ಟಬಹುದು, ದಂಡವೇನೂ ಇರಲ್ಲ, ಆದರೆ ರಿಯಾಯಿತಿ ಮಾತ್ರ ಸಿಗಲ್ಲ. ಆದರೆ ನೆನಪಿರಲಿ, ಜುಲೈ 1 ದಾಟಿದ ಮೇಲೆ ಟ್ಯಾಕ್ಸ್ ಕಟ್ಟಲು ಹೋದರೆ ಪ್ರತಿ ತಿಂಗಳಿಗೆ ಶೇಕಡಾ 2ರಷ್ಟು ದಂಡ (Penalty) ಬೀಳುತ್ತದೆ. ಅಂದರೆ ಅಸಲಿಗಿಂತ ಬಡ್ಡಿಯೇ ಹೆಚ್ಚಾಗುತ್ತದೆ.
ನೀವು ಪಾವತಿಸಿದ ತಕ್ಷಣ ರಸೀದಿ ಬೇಕೆಂದರೆ ಪಾಲಿಕೆಯಲ್ಲಿ ಇಡಿಎಸ್ (EDS) ಯಂತ್ರದ ಸೌಲಭ್ಯ ಕೂಡ ಇದೆ. ಸುಮ್ಮನೆ ಕೊನೆಯ ದಿನದವರೆಗೂ ಕಾಯ್ದು ದಂಡ ಕಟ್ಟುವ ಬದಲು, ಈಗಲೇ ಟ್ಯಾಕ್ಸ್ ಕಟ್ಟಿ ರಿಯಾಯಿತಿ ಲಾಭ ಪಡೆಯುವುದು ಜಾಣತನ. ನೀವು ಕಟ್ಟುವ ಈ ಹಣ ನಮ್ಮ ಶಿವಮೊಗ್ಗ ನಗರದ ಅಭಿವೃದ್ಧಿ ಕೆಲಸಗಳಿಗೆ ಬಳಕೆಯಾಗುತ್ತದೆ ಎಂದು ಪಾಲಿಕೆಯ ಉಪ ಆಯುಕ್ತರು ತಿಳಿಸಿದ್ದಾರೆ.
Shivamogga Property Tax Pay Before April 30


Shivamogga Property Tax