ಹೆಣ್ಣು ಮಕ್ಕಳ ಕೊಲೆ ಆಗಿದೆ ಅಂತ 112 ಪೊಲೀಸರಿಗೆ ಬಂತು ಪೋನ್​, ಸ್ಥಳಕ್ಕೆ ಹೋದಾಗ ಏನಾಯ್ತು ಗೊತ್ತಾ?

ಹಂಚಿಕೊಳ್ಳಿ
WhatsApp Facebook X Telegram
Shivamogga Murder Alert on 112 Emergency Line
Shivamogga Murder Alert on 112 Emergency Line

Shivamogga ಶಿವಮೊಗ್ಗ: ತುಂಗಾ ನಗರ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಹೆಣ್ಣು ಮಕ್ಕಳ ಕೊಲೆಯಾಗಿದೆ ತಕ್ಷಣ ಸ್ಥಳಕ್ಕೆ ಬನ್ನಿ ಎಂದು 112 ಪೊಲೀಸರಿಗೆ ಸುಳ್ಳು ದೂರು ಬಂದಿರುವ ಘಟನೆ ನಡೆದಿದೆ.

ಹೌದು, ತಂಗಾ ನಗರ ಪೊಲೀಸ್​​ ಠಾಣಾ ವ್ಯಾಪ್ತಿಯಿಂದ ದೂರುದಾರರೊಬ್ಬರು 112 ಪೊಲೀಸರಿಗೆ ಪೋನ್ ಮಾಡಿದ್ದಾರೆ. ಕಾಲ್​ ರಿಸೀವ್​ ಮಾಡಿದಾಗ ದೂರುದಾರರು ಇಲ್ಲಿ ಹೆಣ್ಣು ಮಕ್ಕಳ ಕೊಲೆಯಾಗಿದೆ, ಕೂಡಲೇ ಸ್ಥಳಕ್ಕೆ ಬನ್ನಿ ಎಂದು ಹೇಳಿದ್ದಾರೆ. ಪ್ರಕರಣದ ಗಂಭೀರತೆಯನ್ನು ಅರಿತ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿದ್ದಾರೆ.

ಸ್ಥಳಕ್ಕೆ ತೆರಳಿ ಅಲ್ಲಿನ ಗ್ರಾಮಸ್ಥರಲ್ಲಿ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಸತ್ಯ ತಿಳಿದಿದೆ. ಊರಿನಲ್ಲಿ ಅಂತಹ ಯಾವುದೇ ಕೃತ್ಯ ನಡೆದಿಲ್ಲ ಹಾಗೂ ಇದೊಂದು ಸುಳ್ಳು ಸುದ್ದಿ ಎಂದು ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದಾರೆ.

ಈ ಸಂಬಂಧ 112 ಪೊಲೀಸರಿಗೆ ಸುಳ್ಳು ಸುದ್ದಿ ನೀಡಿ ದಾರಿ ತಪ್ಪಿಸಿದ ಕುರಿತು ಸಿಬ್ಬಂದಿಗಳು ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತದನಂತರ ಸ್ಥಳಕ್ಕೆ ಧಾವಿಸಿದ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಪೊಲೀಸರ ಸಮಯ ವ್ಯರ್ಥ ಮಾಡಿದ ವ್ಯಕ್ತಿಯನ್ನು  ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor