KARNATAKA NEWS/ ONLINE / Malenadu today/ Aug 18, 2023 SHIVAMOGGA NEWS
ಶಿವಮೊಗ್ಗ ಪೊಲೀಸರು ಗಾಂಜಾ ಮಾಫಿಯಾದ ಬೆನ್ನುಬಿದ್ದಿರುವ ಬೆನ್ನಲ್ಲೆ ಸಾಲು ಸಾಲು ಪ್ರಕರಣಗಳು ದಾಖಲಾಗುತ್ತಿವೆ. ಇದಕ್ಕೆ ಪೂರಕವಾಗಿ ಭದ್ರಾವತಿಯಲ್ಲಿ ಹಳೆಬಾರಂದೂರು ಕಡೆಯಿಂದ, ಭದ್ರಾವತಿ ಕಡೆಗೆ ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.
ಈ ವೇಳೆ ಆರೋಪಿ 1)ಇಬ್ರಾಹಿಂ @ ಇಬ್ಬು ಮೀರಾ @ ಟಕ್ಕರ್, 21 ವರ್ಷ, ವೀರಾಪುರ ಭದ್ರಾವತಿ ಮತ್ತು 2) ಸಂತೋಷ್ ಕುಮಾರ್, 30 ವರ್ಷ, ಕಡದಕಟ್ಟೆ ಭದ್ರಾವತಿ ರನ್ನ ಬಂಧಿಸಿರುವ ಪೊಲೀಸರು ಅಂದಾಜು ಮೌಲ್ಯ 10,000/- ರೂಗಳ ಒಟ್ಟು 161 ಗ್ರಾಂ ತೂಕದ ಒಣ ಗಾಂಜಾವನ್ನು ವಶಕ್ಕೆ ಪಡೆದಿದ್ದಾಋಎ. ಈ ಸಂಬಂಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಕಲಂ 8(C), 20(B) (ii)(A) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿದೆ
ತೀರ್ಥಹಳ್ಳಿಯಲ್ಲಿ ಗಾಂಜಾ ಜಪ್ತಿ
ಇನ್ನು ನಿನ್ನೆ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಎಡೆಹಳ್ಳಿ ಕರೆ ಸರ್ಕಲ್ ಹತ್ತಿರ ಗಾಂಜಾ ಮಾರುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲದೆ 1) ಸಂಜಯ್ @ ಪೋತ, 25 ವರ್ಷ, ಶಿವರಾಜಪುರ ತೀರ್ಥಹಳ್ಳಿ ಮತ್ತು 2) ಸುದೀಪ್. ಪಿ. ಎಸ್, 21 ವರ್ಷ ಕುರುವಳ್ಳಿ ತೀರ್ಥಹಳ್ಳಿ ಯವರನ್ನ ಬಂಧಿಸಿ ಅಂದಾಜು ಮೌಲ್ಯ 9,000/- ರೂಗಳ 190 ಗ್ರಾಂ ತೂಕದ ಒಣ ಗಾಂಜಾವನ್ನು ಅಮಾನತ್ತು ಪಡಿಸಿಕೊಂಡು ಆರೋಪಿತರ ವಿರುದ್ದ ಗುನ್ನೆ ಸಂಖ್ಯೆ 0153/2023 ಕಲಂ 20(B)(II)(A) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿದ್ಧಾರೆ.
ಸಿಟಿ ರೌಂಡ್ಸ್ ಜೊತೆ ಸರ್ಕಲ್ನಲ್ಲಿ ಎಸ್ಪಿ ಕಾರ್ಯಾಚರಣೆ ! ನೋಡುತ್ತಾ ನಿಂತ ಜನ!
ಕೆಲದಿನಗಳಿಂದ ಹಾಫ್ ಹೆಲ್ಮೆಟ್ ವಿರುದ್ದ ಶಿವಮೊಗ್ಗ ಪೊಲೀಸ್ ಇಲಾಖೆ ಅಭಿಯಾನ ನಡೆಸ್ತಿದ್ದು, ಹಾಫ್ ಹೆಲ್ಮೆಟ್ ಹಾಕಿ ಬೈಕ್ ಸವಾರಿ ಮಾಡುವವರಿಗೆ ಎಚ್ಚರಿಕೆ ನೀಡುತ್ತಿತ್ತು ಅಲ್ಲದೆ ಹಾಫ್ ಹೆಲ್ಮೆಟ್ಗಳನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ರು. ನಿನ್ನೆ ಅಂದರೆ, ದಿನಾಂಕಃ 18-08-2023 ರಂದು ಸ್ವತಃ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್ ರವರು ಹಾಫ್ ಹೆಲ್ಮೆಟ್ ವಿಚಾರವಾಗಿ ಫೀಲ್ಡ್ಗೆ ಇಳಿದಿದ್ದರು.
ಶಿವಮೊಗ್ಗ ನಗರದ ಪ್ರಮುಖ ವೃತ್ತಗಳಲ್ಲಿ ವಿಶೇಷ ಕಾರ್ಯಾಚರಣೆಯನ್ನು ನಡೆಸಿ ಐಎಸ್ಐ ಪ್ರಮಾಣಿತವಲ್ಲದ Half Helmet ಧರಿಸಿ ದ್ವಿ ಚಕ್ರ ವಾಹನ ಚಲಾಯಿಸುತ್ತಿದ್ದ ವಾಹನ ಸವಾರರನ್ನು ತಡೆದು, ಒಟ್ಟು 500 ಕ್ಕೂ ಹೆಚ್ಚು ಐಎಸ್ಐ ಪ್ರಮಾಣಿತವಲ್ಲದ Half Helmet ಗಳನ್ನು ವಶಪಡಿಸಿಕೊಂಡು, ವಾಹನ ಸವಾರರಿಗೆ ಐಎಸ್ಐ ಪ್ರಮಾಣಿತವಲ್ಲದ Half Helmet ಧರಿಸುವದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಐಎಸ್ಐ ಪ್ರಮಾಣಿತ ಹೆಲ್ಮೆಟ್ ಗಳನ್ನು ಧರಿಸುವುದರಿಂದಾಗುವ ಉಪಯೋಗಗಳ ಕುರಿತಂತೆ ಜಾಗೃತಿ ಮೂಡಿಸಿದರು.
ಶಿರಾಳಕೊಪ್ಪದ ಬಳಿ ನಿಯಂತ್ರಣ ತಪ್ಪಿದ ಕಾರು! ಸ್ಥಳದಲ್ಲಿಯೇ ಓರ್ವನ ಸಾವು!
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದ ಸಮೀಪ ಆಕ್ಸಿಡೆಂಟ್ ಸಂಭವಿಸಿದ್ದು ಓರ್ವರು ಮೃತಪಟ್ಟಿದ್ದಾರೆ. ದಿ:18.08.2023 ರಂದು ಶಿರಾಳಕೊಪ್ಪದ ಉಡುಗಣಿ ಹತ್ತಿರ ಈ ಅಪಘಾತ ಸಂಭವಿಸಿದೆ. ಈ ಮಾರ್ಗವಾಗಿ ತೆರಳುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಆಕ್ಸಿಡೆಂಟ್ ಆಗಿದೆ. ಪರಿಣಾಮ ಕಾರಿನಲ್ಲಿದ್ದ ಓರ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೂ ಮೂವರಿಗೆ ಗಾಯಗಳಾಗಿದ್ದು, ಅವರನ್ನು ಶಿಕಾರಿಪುರ ಆಸ್ಙತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನೂ ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಕಾರನ್ನು ತೆರವುಗೊಳಿಸಿ ಪ್ರಕರಣ ದಾಖಲಿಸಿದ್ದಾರೆ..
ಪ್ರಧಾನಿ ಮೋದಿ ವಿಚಾರದಲ್ಲಿ ವಕೀಲ ನಾಗರಾಜ್ ಕುಡುಪಲಿ ವಿರುದ್ಧ ವಕೀಲರಿಂದ ದಾಖಲಾಯ್ತು ದೂರು!
ಇನ್ನಷ್ಟು ಸುದ್ದಿಗಳು
ಶಿವಮೊಗ್ಗ-ಭದ್ರಾವತಿ ಪೊಲೀಸರ ದಿಢೀರ್ ನೈಟ್ ಆಪರೇಷನ್! ಕೆಲವೇ ಗಂಟೆಗಳಲ್ಲಿ 105 ಮಂದಿ ವಿರುದ್ಧ ಕೇಸ್
ಶಿವಮೊಗ್ಗ ಜಿಲ್ಲೆಯ ವಿವಿದೆಡೆ ಇಂದು ಪವರ್ ಕಟ್ ಜಾರಿ! ಎಲ್ಲೆಲ್ಲಿ? ಪೂರ್ತಿ ವಿವರ ಇಲ್ಲಿದೆ!