ತುಂಗಾ, ಲಿಂಗನಮಕ್ಕಿ, ಭದ್ರಾ ಡ್ಯಾಂಗಳ ಇಂದಿನ ನೀರಿನ ಮಟ್ಟ ಎಷ್ಟಿದೆ ?

ಹಂಚಿಕೊಳ್ಳಿ
WhatsApp Facebook X Telegram
Shivamogga Dam Tunga Dam Water Level Today
Shivamogga Dam Tunga Dam Water Level Today

Shivamogga Dam ಶಿವಮೊಗ್ಗ : ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಾದ ತುಂಗಾ, ಲಿಂಗನಮಕ್ಕಿ ಹಾಗೂ ಭದ್ರಾ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಾಗಿದೆ. 

ಶಿವಮೊಗ್ಗ: ಸೈಬರ್ ವಂಚನೆಗೆ ಒಳಗಾಗಿದ್ದ ಶಿಕಾರಿಪುರದ ಯುವಕನಿಗೆ 5.23 ಲಕ್ಷ ವಾಪಸ್ ಕೊಡಿಸಿದ ಪೊಲೀಸರು

ಇಂದು (ಆಗಸ್ಟ್ 1) ಬೆಳಗಿನ ವರದಿಯಂತೆ ಶಿವಮೊಗ್ಗದ ಗಾಜನೂರಿನಲ್ಲಿರುವ ತುಂಗಾ ಜಲಾಶಯದಲ್ಲಿ 588.24 ಮೀಟರ್ ಗರಿಷ್ಠ ಮಟ್ಟದ ಪೈಕಿ ಪ್ರಸ್ತುತ 588.19 ಮೀಟರ್ ತಲುಪಿದೆ. ಜಲಾಶಯದ ಒಟ್ಟು 3.24 ಟಿಎಂಸಿ ಸಾಮರ್ಥ್ಯದಲ್ಲಿ ಈಗ 3.212 ಟಿಎಂಸಿ ನೀರು ಸಂಗ್ರಹವಾಗಿದ್ದು, 26,864 ಕ್ಯೂಸೆಕ್ಸ್ ಒಳಹರಿವು ದಾಖಲಾಗಿದೆ. ಜಲಾಶಯದಿಂದ ನದಿ ಹಾಗೂ ಕಾಲುವೆಗಳಿಗೆ ಒಟ್ಟು 27,119 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. 

ಇನ್ನು ಲಿಂಗನಮಕ್ಕಿ ಮಕ್ಕಿ ಜಲಾಶಯದಲ್ಲಿ ನೋಡುವುದಾದರೆ, 1819 ಅಡಿ ಗರಿಷ್ಠ ಮಟ್ಟದ ಈ ಡ್ಯಾಂನಲ್ಲಿ ಪ್ರಸ್ತುತ 1777.95 ಅಡಿ ನೀರಿದೆ. ಜಲಾಶಯಕ್ಕೆ 38,183 ಕ್ಯೂಸೆಕ್ಸ್ ಒಳಹರಿವಿದ್ದು, ಹೊರಹರಿವು 2,032 ಕ್ಯೂಸೆಕ್ಸ್ ಇದೆ. ಜಲಾಶಯ ಪ್ರದೇಶದಲ್ಲಿ 35.4 ಮಿಮೀ ಮಳೆಯಾಗಿದೆ. ಕಳೆದ ವರ್ಷ 

ಮತ್ತೊಂದೆಡೆ ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೂ ಸಹ ಉತ್ತಮ ಒಳಹರಿವು ದಾಖಲಾಗಿದ್ದು, 186 ಅಡಿ ಗರಿಷ್ಠ ಮಟ್ಟದ ಈ ಡ್ಯಾಂನಲ್ಲಿ ಈಗ 157.03 ಅಡಿ ನೀರಿದೆ. ಜಲಾಶಯದಲ್ಲಿ 12,983 ಕ್ಯೂಸೆಕ್ಸ್ ಒಳಹರಿವು ಹಾಗೂ 182 ಕ್ಯೂಸೆಕ್ಸ್ ಹೊರಹರಿವು ದಾಖಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor