SHIVAMOGGA NEWS TODAY

ಶಿವಮೊಗ್ಗ: ಜಿಲ್ಲೆಯಾದ್ಯಂತ ಎಲ್ಲೆಲ್ಲಿ ಎಷ್ಟೆಷ್ಟಾಗಿದೆ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ? ಇನ್ನೆಷ್ಟು ಬಾಕಿ ಇದೆ?

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Shimoga SIR  ಶಿವಮೊಗ್ಗ : ಭಾರತ ಚುನಾವಣಾ ಆಯೋಗವು ರಾಜ್ಯದಾದ್ಯಂತ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 ಅನ್ನು ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಇದರ ನಡುವೆ, ಶಿವಮೊಗ್ಗ ಜಿಲ್ಲೆಯ ಒಟ್ಟು 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ವಿಶೇಷ ಸಮಗ್ರ ಪರಿಷ್ಕರಣೆ ಎಷ್ಟರಮಟ್ಟಿಗೆ ನಡೆದಿದೆ ಮತ್ತು ಇನ್ನೆಷ್ಟು ಬಾಕಿಯಿದೆ ಎಂಬ ವಿವರಗಳನ್ನು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ತಿಳಿಸಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣಶಿವಮೊಗ್ಗ ಏರ್​ಪೋರ್ಟ್​ ವಿಶ್ವೇಶ್ವರ್​ ಭಟ್​ Facebook post ,ಷೇರ್ ಮಾಡಿ ರಿಪ್ಲೆ ನೀಡಿದ ಸಂಸದ

ಜಿಲ್ಲೆಯ ಒಟ್ಟು 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1,793 ಬಿ.ಎಲ್.ಒ (BLO) ಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 15,19,459 ಮತದಾರರಿದ್ದಾರೆ. ಈ ಪೈಕಿ ಇದುವರೆಗೆ 12,44,670 ಇ-ಫಾರ್ಮ್‌ಗಳನ್ನು (ಅಂದರೆ ಶೇ. 81.92 ರಷ್ಟು) ವಿತರಿಸಲಾಗಿದೆ. ಹಾಗೆಯೇ, 70,540 ಫಾರ್ಮ್‌ಗಳನ್ನು (ಶೇ. 4.64 ರಷ್ಟು) ಡಿಜಿಟಲೀಕರಣಗೊಳಿಸಲಾಗಿದೆ.

Shimoga SIR  ಕ್ಷೇತ್ರವಾರು ಪ್ರಗತಿಯ ವಿವರಗಳು

ಶಿವಮೊಗ್ಗ ಗ್ರಾಮಾಂತರ: ಇಲ್ಲಿ ಒಟ್ಟು 2,20,250 ಮತದಾರರಿದ್ದು, ಈ ಪೈಕಿ 1,93,394 (ಶೇ. 87.81) ಇ-ಫಾರ್ಮ್‌ಗಳನ್ನು ವಿತರಿಸಲಾಗಿದೆ. 18,879 (ಶೇ. 8.57) ಫಾರ್ಮ್‌ಗಳ ಡಿಜಿಟಲೀಕರಣದೊಂದಿಗೆ ಈ ಕ್ಷೇತ್ರವು ಜಿಲ್ಲೆಯಲ್ಲೇ ಮುಂಚೂಣಿಯಲ್ಲಿದೆ.

ಭದ್ರಾವತಿ: ಕ್ಷೇತ್ರದಲ್ಲಿ 2,14,907 ಮತದಾರರಿದ್ದು, 1,62,742 (ಶೇ. 75.73) ಇ-ಫಾರ್ಮ್‌ಗಳನ್ನು ವಿತರಿಸಲಾಗಿದೆ. ಅದರಲ್ಲಿ 8,824 ಫಾರ್ಮ್‌ಗಳು (ಶೇ. 4.12) ಡಿಜಿಟಲೀಕರಣಗೊಂಡಿವೆ.

ಶಿವಮೊಗ್ಗ ನಗರ: ಜಿಲ್ಲೆಯಲ್ಲೇ ಅತಿ ಹೆಚ್ಚು ಅಂದರೆ 2,77,098 ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ, 1,94,410 (ಶೇ. 70.16) ಇ-ಫಾರ್ಮ್‌ಗಳನ್ನು ವಿತರಿಸಲಾಗಿದೆ. ಆದರೆ, ಕೇವಲ 3,486 ಫಾರ್ಮ್‌ಗಳು (ಶೇ. 1.26) ಮಾತ್ರ ಡಿಜಿಟಲೀಕರಣಗೊಂಡಿವೆ.

ತೀರ್ಥಹಳ್ಳಿ: ಕ್ಷೇತ್ರದಲ್ಲಿ 1,92,314 ಮತದಾರರಿದ್ದು, 1,66,822 (ಶೇ. 86.74) ಇ-ಫಾರ್ಮ್‌ಗಳನ್ನು ವಿತರಿಸಲಾಗಿದೆ. ಹಾಗೆಯೇ 11,810 ಫಾರ್ಮ್‌ಗಳು (ಶೇ. 6.14) ಡಿಜಿಟಲೀಕರಣಗೊಂಡಿವೆ.

ಶಿಕಾರಿಪುರ: ಒಟ್ಟು 2,06,415 ಮತದಾರರಿದ್ದು, 1,71,595 (ಶೇ. 83.13) ಇ-ಫಾರ್ಮ್‌ಗಳನ್ನು ವಿತರಿಸಲಾಗಿದೆ. ಪ್ರಸ್ತುತ 9,573 ಫಾರ್ಮ್‌ಗಳ (ಶೇ. 4.64) ಡಿಜಿಟಲೀಕರಣ ಪ್ರಗತಿಯಲ್ಲಿದೆ.

ಸೊರಬ: ಕ್ಷೇತ್ರದಲ್ಲಿ 1,98,955 ಮತದಾರರಿದ್ದು, 1,75,244 (ಶೇ. 88.08) ರಷ್ಟು ಇ-ಫಾರ್ಮ್ ವಿತರಿಸುವ ಮೂಲಕ ಜಿಲ್ಲೆಯಲ್ಲೇ ಅತಿ ಹೆಚ್ಚು ಇ-ಫಾರ್ಮ್ ವಿತರಣೆ ದಾಖಲಿಸಿದೆ. ಇಲ್ಲಿ 9,400 ಫಾರ್ಮ್‌ಗಳನ್ನು (ಶೇ. 4.72) ಡಿಜಿಟಲೈಸ್ ಮಾಡಲಾಗಿದೆ.

ಸಾಗರ: ಒಟ್ಟು 2,09,520 ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ, 1,80,463 (ಶೇ. 86.13) ಇ-ಫಾರ್ಮ್‌ಗಳನ್ನು ವಿತರಿಸಲಾಗಿದ್ದು, 8,568 ಫಾರ್ಮ್‌ಗಳು (ಶೇ. 4.09) ಡಿಜಿಟಲೀಕರಣಗೊಂಡಿವೆ ಎಂದು ಅವರು ತಿಳಿಸಿದ್ದಾರೆ.

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.