ಮಾಡಾಳ್ ವಿರೂಪಾಕ್ಷಪ್ಪರ ಮಗನ ಮನೆ, ಕಚೇರಿಯಲ್ಲಿ ಏಳು ಕೋಟಿ ದುಡ್ಡು ಪತ್ತೆ! ಗೃಹ ಸಚಿವ ಆರಗ ಜ್ಞಾನೇಂದ್ರರವರ ಪ್ರತಿಕ್ರಿಯೆ ಏನು ಗೊತ್ತಾ?

MALENADUTODAY.COM  |SHIVAMOGGA| #KANNADANEWSWEB

ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಪುತ್ರನ ಮೇಲೆ ನಡೆದ ಲೋಕಾಯುಕ್ತ ದಾಳಿಯಲ್ಲಿ ಏಳು ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ. ಆದರೆ ಅವರು ಯಾವ ಹಣ ಇಟ್ಟುಕೊಂಡಿದ್ದರು ಅನ್ನೋದು ನನಗೆ ಗೊತ್ತಿಲ್ಲ, ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. 

READ |  BREAKING NEWS : ನಾಳೆ ನಾಡಿದ್ದು ಶಿವಮೊಗ್ಗ ನಗರದ ಬಹುಪಾಲು ಪ್ರದೇಶಗಳಲ್ಲಿ ವಿದ್ಯುತ್​ ಇರೋದಿಲ್ಲ! ಎಲ್ಲೆಲ್ಲಿ ಎಂಬ ವಿವರ ಇಲ್ಲಿದೆ ಓದಿ

ಶಿವಮೊಗ್ಗದಲ್ಲಿ ಮಾತನಾಡಿದ ಅವರು,  ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ ವಿಚಾರ ಮಾದ್ಯಮಗಳ ಮೂಲಕ ನನಗೆ ತಿಳಿದಿದೆ. ಈ ವಿಚಾರ ಈಗ ವಿಚಾರಣೆ ಹಂತದಲ್ಲಿದೆ. ಈ ಬಗ್ಗೆ ನಾನು ಈಗಲೇ ಪ್ರತಿಕ್ರಿಯಿಸುವುದಿಲ್ಲ. ನಾಲ್ಕೈದು ಜನರನ್ನು ಅರೆಸ್ಟ್ ಮಾಡಿದ್ದಾರೆ. ಯಾವ ಹಣ ಅವರು ಇಟ್ಟುಕೊಂಡಿದ್ದರು ಎಂದು ತಿಳಿದಿಲ್ಲ. ವಿಚಾರಣೆ ಬಳಿಕ ಈ ಬಗ್ಗೆ ತಿಳಿಯಲಿದೆ ಎಂದಿದ್ದಾರೆ. ಇನ್ನೂ  ಸಿದ್ಧರಾಮಯ್ಯನವರು 500 ರೂ.ನೋಟು ನೀಡುವ ಹೇಳಿಕೆ ವಿಡಿಯೋ ವಿಚಾರದ ಬಗ್ಗೆ ಮಾತನಾಡಿದ ಆರಗ ಜ್ಞಾನೇಂದ್ರವರು, ಕೆಲವೊಮ್ಮ ಸಿದ್ದರಾಮಯ್ಯ ಸತ್ಯ ಹೇಳುತ್ತಾರೆ. ಆದರೆ,  ಕಾಂಗ್ರೆಸ್ ನ ಸಮಾವೇಶಕ್ಕೆ ಜನರನ್ನು ಹಣ ನೀಡಿ ಕರೆದುಕೊಂಡು ಬರುವುದು ದುರಂತ ಎಂದಿದ್ದಾರೆ. 

READ | Shivamogga Crime News | ಹೋರಿ ಹಬ್ಬದ ವಿಚಾರಕ್ಕೆ ಪರ ಊರಿನಲ್ಲಿ ಜಗಳ, ಸ್ವಂತಊರಿನಲ್ಲಿ ಹೊಡೆದಾಟ! | ಪತ್ನಿ ಸಹಿ ನಕಲಿ ಮಾಡಿದ ಪತಿ | ಶಿವಮೊಗ್ಗದ ಕ್ರೈಂ ವರದಿಗಳು

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #

Leave a Comment