ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಸಿಟಿಯಲ್ಲಿ ಮತ್ತೊಂದು ರೌಡಿ ಶೀಟರ್ ಒಬ್ಬನ ಮೇಲೆ ಹಲ್ಲೆ ಮಾಡಲಾಗಿದೆ. ಕುಳ್ಳಿ ಕಿರಣ ಎಂಬಾತನನ್ನು ರಾಮೇನಕೊಪ್ಪದದಲ್ಲಿ ಅಟೆಂಪ್ಟ್ ಟು ಮರ್ಡರ್ (Ramenakoppa in Shivamogga) ಮಾಡಲಾಗಿದೆ. ಇಸ್ಪೀಟ್ ಆಡುತ್ತಿದ್ದ ಜಾಗದಲ್ಲಿಯೇ ಈತನನ್ನು ಕೊಲೆ ಮಾಡಿದ್ದು ಈ ಸಂಬಂಧ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.
ಶಿವಮೊಗ್ಗ ಸಿಟಿಯಲ್ಲಿ ಮತ್ತೆ ರೌಡಿ ದ್ವೇಷದ ಹಿನ್ನೆಲೆಯಲ್ಲಿ ಕೊಲೆಯೊಂದು ಸಂಭವಿಸಿದೆ. ಇತ್ತೀಚೆಗೆ ಅಷ್ಟೆ ಗಾಂಧಿ ಬಜಾರ್ನಲ್ಲಿ ಕಾಡಾ ಕಾರ್ತಿಯ ಕಡೆಯವನು ಎನ್ನಲಾಗಿದ್ದ ನರಸಿಂಹನನ್ನ ಕೊಚ್ಚಿ ಕೊಲೆಮಾಡಲಾಗಿತ್ತು. ಇದೀಗ ಅದೇ ರೀತಿಯಲ್ಲಿ ಕುಳ್ಳ ಕಿರಣ ಎಂಬಾತನ ಮೇಲೆ ಭೀಕರವಾಗಿ ಹಲ್ಲೆ ಮಾಡಲಾಗಿದೆ. ಸದ್ಯ ಈತನನ್ನ ಎನ್ಎಚ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕಂಡೀಷನ್ ಬಗ್ಗೆ ವೈದ್ಯರು ಯಾವುದೇ ಮಾಹಿತಿ ನೀಡಿಲ್ಲ!
ಮಲೆನಾಡು ಟುಡೆಗೆ ಲಭ್ಯವಾದ ಮಾಹಿತಿ ಪ್ರಕಾರ, ಕುಳ್ಳಿ ಕಿರಣ್, ಗಾಂಧಿ ಬಜಾರ್ ಘಟನೆಯ ಬಳಿ ಕಾರ್ತಿ ಗ್ಯಾಂಗ್ನ ಟಾರ್ಗೆಟ್ ಆಗಿದ್ದ. ಈ ಸಂಬಂಧ ಇವತ್ತು ರಾಮೇನಕೊಪ್ಪದ ಬಳಿಯಲ್ಲಿ ಇಸ್ಪೀಟ್ ಆಡುತ್ತಿದ್ದ ಈತ ಜೊತೆಗೆ ಅದೇ ಸ್ಥಳದಲ್ಲಿದ್ದ ಡಿಯೋ ಉಮೇಶ್ ಎಂಬಾತ ಮತ್ತವನ ಗ್ಯಾಂಗ್ ಅಟ್ಯಾಕ್ ಮಾಡಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕುಳ್ಳಿ ಕಿರಣ್ ನ್ನ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಬರಬೇಕಿದೆ.
