ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಳಲೂರು ಗ್ರಾಮದಲ್ಲಿ ನಡೆದಿದ್ದ ಒಣ ಅಡಿಕೆ ಕಳ್ಳತನ (Shivamogga Arecanut Theft Case) ಪ್ರಕರಣವನ್ನು ಭೇದಿಸಿರುವ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ 5 ಆರೋಪಿಗಳನ್ನು ಬಂಧಿಸಿ ಒಟ್ಟು ₹5.75 ಲಕ್ಷ ಮೌಲ್ಯದ ಕಾರು, ಬೈಕ್ ಹಾಗೂ ಒಣ ಅಡಿಕೆಯನ್ನು ವಶಕ್ಕೆ ಪಡೆದಿದ್ದಾರೆ, ಈ ಸಂಬಂಧ ಶಿವಮೊಗ್ಗ ಪೊಲಿಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದು, ಪೂರ್ಣ ಮಾಹಿತಿ ಹೀಗಿದೆ.
ಹೊಳಲೂರು ಗ್ರಾಮದಲ್ಲಿ ಕಳೆ 23-08-2026ರಂದು 4 ಕ್ವಿಂಟಾಲ್ 80 ಕೆ.ಜಿ. ಒಣ ಅಡಿಕೆ ಕಳ್ಳತನವಾಗಿತ್ತು. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಲಂ 305ರ ಅಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ನಿನ್ನೆದಿನ ಅಂದರೆ 02-09-2026ರಂದು ಅಡಿಕೆ ಕಳ್ಳತನ ಪ್ರಕರಣದ ಆರೋಪಿಗಳಾದ ರಾಹುಲ್ (25), ಜಗನ್ನಾಥ್ (23), ಚಂದನ್ (22), ನವೀನ್ (20) ಹಾಗೂ ಸುನೀಲ್ (26) ಅವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಸುಮಾರು ₹3 ಲಕ್ಷ ಮೌಲ್ಯದ ಮಾರುತಿ ಸುಜುಕಿ ಇಕೋ ಕಾರು ಹಾಗೂ ಸುಮಾರು ₹25,000 ಮೌಲ್ಯದ ಹೀರೋ HF ಡಿಲಕ್ಸ್ ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ಕಳ್ಳತನವಾಗಿದ್ದ ಅಡಿಕೆಯಲ್ಲಿ ಸುಮಾರು ₹2.50 ಲಕ್ಷ ಮೌಲ್ಯದ 4 ಕ್ವಿಂಟಾಲ್ 60 ಕೆ.ಜಿ. ಒಣ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ. ಕಾರು, ಬೈಕ್ ಹಾಗೂ ಒಣ ಅಡಿಕೆ ಸೇರಿ ಒಟ್ಟು ₹5.75 ಲಕ್ಷ ಮೌಲ್ಯದ ಮಾಲನ್ನು ಪೊಲೀಸರು ಅಮಾನತ್ತುಪಡಿಸಿಕೊಂಡಿದ್ದಾರೆ.
