KARNATAKA NEWS/ ONLINE / Malenadu today/ Sep 29, 2023 SHIVAMOGGA NEWS’
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಮತ್ತೊಮ್ಮೆ ಆರ್.ಎಂ ಮಂಜುನಾಥ್ ಗೌಡರಿಗೆ ಒಲಿದಿದೆ. ಇವತ್ತು ನಡೆದ ಚುನಾವಣೆಯಲ್ಲಿ ಒಟ್ಟು 16 ನಿರ್ದೇಶಕರನ್ನು ಒಳಗೊಂಡಿದ್ದ ಆಡಳಿತ ಮಂಡಳಿಯಲ್ಲಿ 13 ಮಂದಿ ನಿರ್ದೇಶಕರು ಉಪಸ್ಥಿತರಿದ್ದು ಎಲ್ಲರೂ ಮಂಜುನಾಥ್ ಗೌಡರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
ಇಷ್ಟು ದಿನ ಷಡಾಕ್ಷರಿಯವರು ಪ್ರಭಾರಿ ಅಧ್ಯಕ್ಷರಾಗಿದ್ದರು. ಇನ್ನೂ ಅಧ್ಯಕ್ಷರಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್ ಎಂ ಮಂಜುನಾಥ ಗೌಡ (RM Manjunath Gowda) ಅವರು, ಬ್ಯಾಂಕ್ ನ ನಿರ್ದೇಶಕರು ನನ್ನ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಬ್ಯಾಂಕ್ ನ ಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ. ಇದು ಸಹಕಾರಿ ಕ್ಷೇತ್ರದಲ್ಲಿ ಮಾತ್ರ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಜಿಲ್ಲೆಯ ರೈತರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ರೈತರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುಟ್ಟಿಸುತ್ತೇವೆ. ಪ್ರಾಧಮಿಕ ಸಹಕಾರಿ ಸಂಘ ಹಾಲು ಉತ್ಪಾಧಕ ಸಂಘ ಮತ್ತು ಮಾರ್ಕೇಟ್ ಸೋಸೈಟಿ ಸೇರಿದಂತೆ ಸಹಕಾರಿ ಬ್ಯಾಂಕ್ ಗಳಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದು ಮಂಜುನಾಥ್ ಗೌಡರು ಹೇಳಿದರು.
ನಾನು ಅಧ್ಯಕ್ಷನಾಗಿರುವುದಕ್ಕೆ ರಾಜ್ಯದ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ. ಹಾಗು ಜಿಲ್ಲೆಯ ಶಾಸಕರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆಂದರು.
ನಾನು ಈಗಾಗಲೇ 25 ವರ್ಷಕ್ಕೂ ಹೆಚ್ಚು ಅವಧಿ ಡಿಸಿಸಿ ಬ್ಯಾಂಕ್ ನಲ್ಲಿ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಈ ಬಾರಿ ರಾಜ್ಯದಲ್ಲಿ ದೊಡ್ಡ ಬರ ಎದುರಾಗಿದೆ.ರೈತರು ಧೃತಿಗೆಡುವುದು ಬೇಡ ಡಿಸಿಸಿ ಬ್ಯಾಂಕ್ ನಿಮ್ಮ ಜೊತೆ ಇದೆ ಎಂದು ರೈತರಿಗೆ ವಾಗ್ದಾನ ಮಾಡಿದರು.
ಇನ್ನಷ್ಟು ಸುದ್ದಿಗಳು
ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ! ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನೇಮಕ! ಎಲ್ಲೆಲ್ಲಿಗೆ ಯಾರ್ಯಾರು ಓದಿ
2 ಲಕ್ಷ ಜನ! 3 ಸಾವಿರಕ್ಕೂ ಹೆಚ್ಚು ಪೊಲೀಸ್ ! ನಾಳಿನ ಬಂದೋಬಸ್ತ್ ಬಗ್ಗೆ ಎಸ್ಪಿ ಬ್ರೀಫಿಂಗ್!
ಹಿಂದೂ ಮಹಾಸಭಾದ ಮೊದಲ ಗಣಪತಿ ಪ್ರತಿಷ್ಟಾಪನೆಯಾಗಿದ್ದು ಶಿವಮೊಗ್ಗದಲ್ಲೆ! ಇಲ್ಲಿದೆ ನೋಡಿ ಇತಿಹಾಸದ ವಿನಾಯಕನ ದೃಶ್ಯಗಳು!





