ಹೊಳಲೂರಿನಲ್ಲಿ ನಡೆಯಬೇಕಿದ್ದ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಮುಂದೂಡಿಕೆ…

ಹಂಚಿಕೊಳ್ಳಿ
WhatsApp Facebook X Telegram

 ಶಿವಮೊಗ್ಗ ತಾಲ್ಲೂಕಿನ ಹೊಳಲೂರಿನಲ್ಲಿ ಕಂದಾಯ ಸಚಿವರಾದ ಆರ್.ಅಶೋಕ್  ಅಧ್ಯಕ್ಷತೆಯಲ್ಲಿ ನಾಳೆ ಏರ್ಪಡಿಸಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ-ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ..

ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಗಳನ್ನು ಜಿಲ್ಲಾಡಳಿತ ಆಯೋಜಿಸಲಾಗಿತ್ತು, ಕಾರಣಾಂತರಗಳಿಂದ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ..

ಶಿವಮೊಗ್ಗ ತಾಲೂಕಿನ‌ ಹೊಳಲೂರು ಗ್ರಾಮದ ಮಾರುತಿ ಫ್ರೌಡಶಾಲೆಯ ಅವರಣದಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ತಾಲೂಕಿಲು ಕಚೇರಿ ವ್ಯಾಪ್ತಿಯ 41 ಇಲಾಖೆಗಳಿಗೆ ಸಿದ್ದತೆ ಕುರಿತು ಹಾಗೂ ಫಲಾನುಭವಿ ಪಟ್ಟಿ ತಯಾರಿಸಿ ಸೂಕ್ತ ಆಸನ ವ್ಯವಸ್ಥೆ, ಆದೇಶಗಳ ಸುಗಮ‌ ವಿತರಣೆಗೆ ಸೂಕ್ತ ಸಿದ್ದತೆ ಮಾಡಿಕೊಳ್ಳಲು ತಹಶಿಲ್ದಾರ ಡಾ.ನಾಗರಾಜ್  ಅಧಿಕಾರಿಗಳಿಗೆ ಸೂಚನೆ ನೀಡಿದ್ದರು,

ಇನ್ನು ಸಚಿವರು ಹೊಳಲೂರಿನಲ್ಲಿ ವಾಸ್ತವ್ಯ ಮಾಡುತ್ತಾರೆ ಅಲ್ಲಿ ತಮ್ಮ‌ಗ್ರಾಮಗಳ ಕುಂದುಕೊರತೆಗಳನ್ನು ಹೇಳಿಕೊಳ್ಳಲು‌ ಕಾಯುತ್ತಿದ್ದ ಹೊಳಲೂರು ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳ ಗ್ರಾಮಸ್ಥರಿಗೆ ನಿರಾಸೆಯಾಗಿದೆ..

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor