ಶಿವಮೊಗ್ಗಕ್ಕೆ ಓಡಿ ಬಂದ ಉಪಾಧ್ಯಕ್ಷ ಜೋಡಿ! ವಿಚಾರ ಏನು ಗೊತ್ತಾ?

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗಕ್ಕೆ ಓಡಿ ಬಂದ ಉಪಾಧ್ಯಕ್ಷ ಜೋಡಿ! ವಿಚಾರ ಏನು ಗೊತ್ತಾ?

SHIVAMOGGA  |  Jan 19, 2024  | ಶಿವಮೊಗ್ಗಕ್ಕೆ ನಿನ್ನೆ ಉಪಾಧ್ಯಕ್ಷರು ಬಂದಿದ್ದರು. ಶಿವಮೊಗ್ಗ ಪ್ರೆಸ್​ ಟ್ರಸ್ಟ್​ನಲ್ಲಿ ಪ್ರೆಸ್ ಮೀಟ್​ ಸಹ ಮಾಡಿದ್ದರು. ರಿಲೀಸ್​ ಆಗ್ತಿರುವ ಅವರ ಸಿನಿಮಾದ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಜನರು ಸಹ ಉಪಾಧ್ಯಕ್ಷರ ಸೆಲ್ಫಿಗಾಗಿ ಮುಗಿಬಿದ್ರು. 

ಅಧ್ಯಕ್ಷ ಸಿನಿಮಾ ನಟ ಚಿಕ್ಕಣ್ಣರಿಗೆ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ. ಅದೇ ಸಿನಿಮಾದ ಸೀಕ್ವೆಲ್​ನಂತಿರುವ ಉಪಾಧ್ಯಕ್ಷ ಚಿತ್ರದಲ್ಲಿ ಅವರು ಲೀಡ್ ರೋಲ್​ನಲ್ಲಿ ಕಾಣಿಸಿಕೊಳ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೈಲ್ ಸಖತ್ ಕಾಮಿಡಿಯಾಗಿದ್ದು, ತುಂಡು ಹೈಕಳ ಸಂಘದ ಉಪಾಧ್ಯಕ್ಷನ ಅವತಾರಗಳ ಝಲಕ್ ತೋರಿಸಲಾಗಿದೆ.. 

ಸದ್ಯ ಈ ಸಿನಿಮಾನದ ಪ್ರಮೋಶನ್​ನಲ್ಲಿರುವ ಚಿಕ್ಕಣ್ಣ ಆ್ಯಂಡ್ ಟೀಂ ಪ್ರತಿ ಜಿಲ್ಲೆಗೂ ತೆರಳಿ ಸುದ್ದಿಗೋಷ್ಟಿ ನಡೆಸಿ ಚಿತ್ರದ ಬಗ್ಗೆ ಮಾಹಿತಿ ನೀಡುತ್ತಿದದೆ. ಈ ಸಿನಿಮಾ ರಾಜ್ಯಾದ್ಯಂತ 223. 26ರಂದು ತೆರೆಕಾಣಲಿದೆ ಎಂದು ಚಲನಚಿತ್ರ ನಟ ಚಿಕ್ಕಣ್ಣ  ತಿಳಿಸಿದ್ದಾರೆ. 

ಈವರೆಗೆ 250 ಕ್ಕೂ ಹೆಚ್ಚು ಚಿತ್ರ ಗಳಲ್ಲಿ ಅಭಿನಯಿಸಿದ್ದೇನೆ ಎಂದ ಚಿಕ್ಕಣ್ಣ ಚಿತ್ರರಂಗ ನೀಡಿದ ಬದುಕಿನ ಬಗ್ಗೆ ವಿವರಿಸಿದ್ರು ಅಲ್ಲದೆ ಸಿನಿಮಾದ ಬಗ್ಗೆ ಹೆಚ್ಚು ಮಾತನಾಡಿದರು. ಇನ್ನೂ ಉಪಾಧ್ಯಕ್ಷ ಚಿತ್ರದ ನಾಯಕ ನಟಿ ಮಲೈಕಾ  ಟೀಸರ್, ಟ್ರೇಲರ್‌ ಹಾಗೂ ಹಾಡುಗಳು ಜನರ ಮನ ಗೆದ್ದಿವೆ. ಇದು ಪ್ಯಾಮಿಲಿಗೆ ಕನೆಕ್ಟ್ ಆಗೋ ಸಿನಿಮಾ.  ಸಾಧು ಕೋಕಿಲ, ಧರ್ಮಣ್ಣ, ಶಿವರಾಜ್ ಕೆ.ಆ‌ರ್.ಪೇಟೆ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ವಿವರಿಸಿದ್ರು. 


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor