ಶಿವಮೊಗ್ಗ: ಏಪ್ರಿಲ್ 19 ರಂದು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಹಂಚಿಕೊಳ್ಳಿ
WhatsApp Facebook X Telegram
Shivamogga Power Cut
Shivamogga Power Cut

ಶಿವಮೊಗ್ಗ: ನಗರದ ವಿದ್ಯುತ್ ಬಳಕೆದಾರರಿಗೆ ಮೆಸ್ಕಾಂ ಪ್ರಮುಖ ಸೂಚನೆಯೊಂದನ್ನು ನೀಡಿದೆ. ಶಿವಮೊಗ್ಗ ನಗರ ಉಪವಿಭಾಗ-1, ಘಟಕ-1ರ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏಪ್ರಿಲ್ 19 ರಂದು ನಗರದ ಪ್ರಮುಖ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. 

5 ದಿನ ಬಿಸಿಗಾಳಿ! ಹಲವೆಡೆ ಯುಲ್ಲೋ ಅಲರ್ಟ್!ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಮಳೆ!

ವಿದ್ಯಾನಗರ ಮಾರ್ಗದಲ್ಲಿ 11 ಕೆವಿ ವಿದ್ಯುತ್ ಲೈನ್‌ಗಳ ನಿರ್ವಹಣೆ ಹಾಗೂ ಕಾಮಗಾರಿ ನಡೆಯಲಿರುವ ಕಾರಣ, ಅಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ. ಈ ಸಮಯದಲ್ಲಿ ಸಾರ್ವಜನಿಕರು ಮೆಸ್ಕಾಂನೊಂದಿಗೆ ಸಹಕರಿಸಬೇಕೆಂದು ಕೋರಲಾಗಿದೆ. 

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:

ವಿದ್ಯಾನಗರ, ಶಾಂತಮ್ಮ ಲೇಔಟ್, ಚಿಕ್ಕಲ್, ಸಿದ್ದೇಶ್ವರನಗರ, ಇಂದಿರಾ ಬಡಾವಣೆ, ಗುರುಪುರ, ಮಂಜುನಾಥ ಬಡಾವಣೆ, ವೆಂಕಟೇಶ್‌ನಗರ, ಪುರಲೆ, ಅಪೂರ್ವ ಲೇಔಟ್, ಕಂಟ್ರಿಕ್ಲಬ್ ರಸ್ತೆ ಹಾಗೂ ಗೋಶಾಲೆ ಸುತ್ತಮುತ್ತಲಿನ ಪ್ರದೇಶಗಳು. ಅಲ್ಲದೆ, ಬಿ.ಹೆಚ್. ರಸ್ತೆ, ಮೀನಾಕ್ಷಿ ಭವನ, ಬಾಪೂಜಿನಗರ, ಟಿಜಿಎನ್ ಲೇಔಟ್, ಜೋಸೆಫ್ ನಗರ, ಚರ್ಚ್ ಕಾಂಪೌಂಡ್, ಕಾನ್ವೆಂಟ್ ರಸ್ತೆ, ಲೂರ್ದ್ ನಗರ, ಸರ್.ಎಂ.ವಿ.ರಸ್ತೆ, ಕುವೆಂಪು ರಂಗಮಂದಿರ, ಗಾಂಧಿಪಾರ್ಕ್, ಮಹಾನಗರ ಪಾಲಿಕೆ, ಪಾರ್ಕ್ ಬಡಾವಣೆ ಹಾಗೂ ದುರ್ಗಿಗುಡಿ ವ್ಯಾಪ್ತಿಯಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದೆ.

Power Cut in Shivamogga on April 19

Power Cut Shimoga Power Cut Power Outage in Shivamogga
Power Cut
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor