MALENADUTODAY.COM | STATE NEWS
ರಾಜ್ಯದ ಗಡಿಭಾಗದಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಕಾಣಿಸಿಕೊಂಡಿದ್ದು, ಈ ಬಗ್ಗೆ ವರದಿಯಾಗಿದೆ ಮಡಿಕೇರಿ ಕೊಡಗು-ಕೇರಳ ಭಾಗದ ಗ್ರಾಮದಲ್ಲಿ ನಕ್ಸಲರ ತಂಡವೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯವಾಗಿ ಆತಂಕ ಮೂಡಿಸಿದೆ ಹಾಗೂ ಎರಡು ರಾಜ್ಯದ ಪೊಲೀಸರು ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಮಾಡಿದೆ.
ಕೊಡಗು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಆರಳಾಂ ಗ್ರಾಮದ ಭಾಗವೊಂದರಲ್ಲಿ ನಕ್ಸಲರ ತಂಡ ಪ್ರತ್ಯಕ್ಷವಾಗಿದೆ ಎಂಬ ಮಾಹಿತಿಯಿದೆ. ಐವರು ಬಂದೂಕುಧಾರಿನಕ್ಸಲರ ಗುಂಪಿನಲ್ಲಿ ಓರ್ವ ಮಹಿಳೆ ಹಾಗೂ ನಾಲ್ವರು ಪುರುಷರಿದ್ದರು ಎನ್ನಲಾಗುತ್ತಿದೆ. ಸುಮಾರು ಮೂರು ದಿನಗಳ ಹಿಂದೆ ಈ ತಂಡ ರಾತ್ರಿ 7.30ರ ಸುಮಾರಿಗೆ ರಾಜೀವ್ ಎಂಬವರ ಮನೆಗೆ ಬಂದು ಹೋಗಿದ್ದಾರೆ ಎಂದು ಸ್ಥಳೀಯವಾಗಿ ವರದಿಯಾಗಿದೆ. ಅಲ್ಲಿ ಊಟ ಮುಗಿಸಿ ಹೋಗಿದ್ದ ತಂಡ ರಾಜೀವ್ ಮನೆಯಿಂದ ಅಕ್ಕಿ, ಬೇಳೆ, ಉಪ್ಪು, ಸೋಪುಗಳನ್ನು ಒಯ್ದಿದ್ದಾರೆ. ಈ ಸಂಬಂಧ ಕೇರಳದ ಕಣ್ಣೂರು ಜಿಲ್ಲೆಯ ಠಾಣೆಯಲ್ಲಿ ಕೇಸ್ ಸಹ ದಾಖಲಾಗಿದೆ.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com





