SHIVAMOGGA | Jan 19, 2024 | shivamogga fm radio ಶಿವಮೊಗ್ಗದಲ್ಲಿ ಮತ್ತೆ ಎಫ್ಎಂ ಸದ್ದು ಮಾಡುತ್ತಿದೆ. ಈ ಹಿಂದೆ ಸಂಸದ ಬಿ.ವೈ.ರಾಘವೇಂದ್ರ ರವರು ತಿಳಿಸಿದಂತೆ ಶಿವಮೊಗ್ಗ ನಗರದ ವಿದ್ಯಾನಗರ ದಲ್ಲಿರುವ ದೂರದರ್ಶನದ ಗೋಪುರದ ಮೇಲೆ 10 ಕಿಲೋವ್ಯಾಟ್ ನ ಟ್ರಾನ್ಸ್ಮೀಟರ್ ಅಳವಡಿಸಲಾಗುತ್ತಿದೆ. ಇದರ ಶಿಲಾನ್ಯಾಸ ಕಾರ್ಯಕ್ರಮ ಇವತ್ತು ನಡೆಯಲಿದೆ. ಇಂದು ಸಂಜೆ ಆರು ಗಂಟೆಗೆ ಈ ಟ್ರಾನ್ಸ್ಮೀಟರ್ನ್ನು ಪ್ರಧಾನಿ ನರೇಂದ್ರ ಮೋದಿ ಯವರು ಚೆನ್ನೈ ನಲ್ಲಿ ನಡೆಯಲಿರುವ ಕಾರ್ಯಕ್ರಮ ಮೂಲಕ ಶಿಲಾನ್ಯಾಸ ನಡೆಸಲಿದ್ದಾರೆ
ಆಕಾಶವಾಣಿ ಭದ್ರಾವತಿ
ಆಕಾಶವಾಣಿ ಭದ್ರಾವತಿ ಈ ಮೊದಲಿನಿಂದಲೂ ಕಾರ್ಯ ನಿರ್ವಹಿಸುತ್ತಿದೆ. ಅಲ್ಲಿಯ ಗೋಪುರದಲ್ಲಿ ಈ ಸಂಬಂಧ ಒಂದು ಕಿಲೋವ್ಯಾಟ್ ಟ್ರಾನ್ಸ್ ಮೀಟರ್ ಅಳವಡಿಸಲಾಗಿತ್ತು. ಆದ್ದರಿಂದ ಅದರ ಪ್ರೀಕ್ವೆನ್ಸಿ ಎಲ್ಲ ಕಡೆಗೂ ತಲುಪುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿರುವ ದೂರದರ್ಶನದ ಗೋಪುರದ ಮೇಲೆ 10 ಕಿಲೋವ್ಯಾಟ್ ಸಾಮರ್ಥ್ಯದ ಟ್ರಾನ್ಸ್ಮೀಟರ್ ಅಳವಡಿಸುವ ಸಂಬಂಧ ಸಂಸಧ ಬಿ.ವೈ.ರಾಘವೇಂದ್ರರವರು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು..
ಶಿವಮೊಗ್ಗ ಟಿವಿ ಟವರ್
ಇದಕ್ಕೆ ಪೂರಕವಾದ ಸ್ಯಾಕ್ಷನ್ನ್ನು ಕೇಂದ್ರ ಸರ್ಕಾರ ನೀಡಿತ್ತು. ಅದರ ನಂತರದ ಪ್ರಕ್ರಿಯೆಯಾಗಿ ಶಿವಮೊಗ್ಗದ ಟಿವಿ ಟವರ್ನಲ್ಲಿ ಹತ್ತು ಕಿಲೋವ್ಯಾಟ್ ಸಾಮರ್ಥ್ಯದ ಟ್ರಾನ್ಸ್ ಮೀಟರ್ ಅಳವಡಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಈ ಟ್ರಾನ್ಸ್ ಮೀಟರ್ ಅಳವಡಿಕೆಗೆ ವರ್ಚ್ಯುವಲ್ ವ್ಯವಸ್ಥೆಯಲ್ಲಿ ಅಡಿಗಲ್ಲು ಹಾಕಲಿದ್ಧಾರೆ.
ಶಿವಮೊಗ್ಗ ಎಫ್ ಎಂ ರೇಡಿಯೋ
ಇನ್ನೂ ಶಿವಮೊಗ್ಗದಲ್ಲಿ ಟ್ರಾನ್ಸ್ಮೀಟರ್ ಇದ್ದರೂ ಕೂಡ, ಆಕಾಶವಾಣಿ ಭದ್ರಾವತಿಯ ಪ್ರಸಾರ ಅದೇ ಹೆಸರಿನಲ್ಲಿ ಹಾಗೂ ಭದ್ರಾವತಿ ಕಚೇರಿಯಿಂದಲೇ ಪ್ರಸಾರವಾಗಲಿದೆ. ಈ ಬಗ್ಗೆ ಮೊದಲೇ ಸಂಸದರು ಸ್ಪಷ್ಟಪಡಿಸಿದ್ದರು. ವಿಶೇಷ ಅಂದರೆ. ಕೇವಲ ಭದ್ರಾವತಿಗೆ ಸೀಮಿತ ಎಂಬಂತಿದ್ದ ಆಕಾಶವಾಣಿ ಭವಿಷ್ಯದಲ್ಲಿ ಮಧ್ಯ ಕರ್ನಾಟಕದಾದ್ಯಂತ ಪ್ರಸಾರಗೊಳ್ಳಲಿದೆ.
ಚಿತ್ರದುರ್ಗ-ಮಂಗಳೂರು
ಹೌದು, ಶಿವಮೊಗ್ಗ ನಗರದಲ್ಲಿರುವ ನೂರೈವತ್ತು ಮೀಟರ್ ಎತ್ತರದಲ್ಲಿರುವ ಗೋಪುರದಲ್ಲಿ 10 ಕಿಲೋವ್ಯಾಟ್ನ ಟ್ರಾನ್ಸ್ಮೀಟರ್ ಕೂರಿಸುವುದರಿಂದ ಪ್ರಿಕ್ವೆನ್ಸಿ ವಿಶಾಲವಾಗಿ ಎಲ್ಲೆಡೆ ತಲುಪಲಿದೆ. ಇಡೀ ಮಧ್ಯ ಕರ್ನಾಟಕ ಅಂದರೆ ಶಿವಮೊಗ್ಗ ಚಿಕ್ಕಮಗಳೂರು, ದಾವಣೆಗೆರೆ , ಹಾವೇರಿ, ತುಮಕೂರು, ಚಿತ್ರದುರ್ಗ, ಉಡುಪಿ , ಮಂಗಳೂರು ವರೆಗೂ ಆಕಾಶವಾಣಿ ಕೇಳಲಿದೆ.
ಶಿವಮೊಗ್ಗ ಎಫ್ ಎಂ ರೇಡಿಯೋ
ಇನ್ನೂ ಶಿವಮೊಗ್ಗ ಎಫ್ಎಂ ರೇಡಿಯೋ ಟ್ರಾನ್ಸ್ ಮೀಟರ್ ಅಳವಡಿಕೆ ಸಂಬಂಧ ಸಂಸದ ಬಿ.ವೈ.ರಾಘವೇಂದ್ರವರಿಗೆ ಪ್ರಸಾರ ಭಾರತಿ ಪತ್ರ ಬರೆದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದೆ.
ಪ್ರಸಾರಭಾರತಿ ಪತ್ರ
ಮಾನ್ಯ ಪ್ರಧಾನ ಮಂತ್ರಿಗಳು 19.1.2024 ರಂದು ಸಂಜೆ 6.00 ಗಂಟೆಗೆ ನಿಮ್ಮ ಕ್ಷೇತ್ರದಲ್ಲಿ ವರ್ಚುವಲ್ ಮೋಡ್ ಮೂಲಕ ಶಿವಮೊಗ್ಗದಲ್ಲಿ 10 ಕಿಲೋವ್ಯಾಟ್ ಎಫ್ಎಂ ಟ್ರಾನ್ಸ್ಮೀಟರ್ ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಟ್ರಾನ್ಸ್ಮೀಟರ್ ಎಫ್ಎಂ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತದೆ ಮತ್ತು ಎಫ್ಎಂ ಸೇವೆಯ ಮೂಲಕ ಸಾರ್ವಜನಿಕರಿಗೆ ಮಾಹಿತಿ ಮತ್ತು ಮನರಂಜನೆಯನ್ನು ಒದಗಿಸುತ್ತದೆ.
ಸ್ಥಳೀಯ ಸ್ಥಳದಲ್ಲಿ ನಡೆಯುವ ಈ ಉದ್ಘಾಟನಾ ಕಾರ್ಯಕ್ರಮಕ್ಕೆ ನಿಮ್ಮ ಉಪಸ್ಥಿತಿಯನ್ನು ಪ್ರಸಾರ ಭಾರತಿ ಗೌರವಪೂರ್ವಕವಾಗಿ ವಿನಂತಿಸುತ್ತದೆ. ದಯವಿಟ್ಟು ದೃಢೀಕರಿಸಲು ನಿಮ್ಮನ್ನು ವಿನಂತಿಸಲಾಗಿದೆ ಇದರಿಂದ ಅದಕ್ಕೆ ಅನುಗುಣವಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಬಹುದು ಎಂದು ತಿಳಿಸಿದೆ. ಈ ಸಂಬಂಧ ಸಂಸದ ಬಿ.ವೈ.ರಾಘವೇಂದ್ರರವರು ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.