ಶಿವಮೊಗ್ಗ ವಿಮಾನ ನಿಲ್ದಾಣ: ನೈಟ್ ಲ್ಯಾಂಡಿಂಗ್ ಕಾಮಗಾರಿ ವಿಳಂಬದ ಬಗ್ಗೆ ಸಂಸದರು ಏನಂದ್ರು

ಹಂಚಿಕೊಳ್ಳಿ
WhatsApp Facebook X Telegram
MP Raghavendra
MP Raghavendra

MP Raghavendra ಶಿವಮೊಗ್ಗ: ನಗರದ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ವಿಮಾನಗಳ ಹಾರಾಟಕ್ಕೆ ಪೂರಕವಾದ ನೈಟ್ ಲ್ಯಾಂಡಿಂಗ್’ (Night Landing) ವ್ಯವಸ್ಥೆ ಜಾರಿಯಾಗದಿರುವ ಬಗ್ಗೆ ಸಂಸದ ಬಿ.ವೈ. ರಾಘವೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ ₹6 ಕೋಟಿ ಅನುದಾನ ಬಿಡುಗಡೆ ಮಾಡಿದ್ದರೂ, ಆಡಳಿತಾತ್ಮಕ ವಿಳಂಬದಿಂದಾಗಿ ಕೆಲಸ ಕುಂಠಿತಗೊಂಡಿದೆ ಎಂದು ಅವರು ದೂರಿದ್ದಾರೆ. 

ಶಿವಮೊಗ್ಗ ಮಾರಿಕಾಂಬಾ ಜಾತ್ರೆ ಆರಂಭ: ಭಕ್ತಸಮೂಹಕ್ಕೆ ಮಾರವ್ವನ ಮೊದಲ ದರ್ಶನ

ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ನೈಟ್ ಲ್ಯಾಂಡಿಂಗ್ ಉಪಕರಣಗಳು ಬಂದು ಆರು ತಿಂಗಳು ಕಳೆದಿದ್ದರೂ, ಕೇವಲ ಟೆಂಡರ್ ಪ್ರಕ್ರಿಯೆಗಾಗಿಯೇ ಆರು ತಿಂಗಳ ಕಾಲಹರಣ ಮಾಡಲಾಗಿದೆ. ತುರ್ತು ಕಾಮಗಾರಿ ಎಂಬ ನೆಲೆಯಲ್ಲಿ ಇದನ್ನು ನಿರ್ಮಿತಿ ಕೇಂದ್ರದಂತಹ ಸಂಸ್ಥೆಗಳಿಗೆ ವಹಿಸಿ ಶೀಘ್ರವಾಗಿ ಮುಗಿಸಬಹುದಿತ್ತು. ಆದರೆ, ಸರ್ಕಾರದ ವಿಳಂಬ ನೀತಿಯಿಂದಾಗಿ ಈಗ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಗುತ್ತಿಗೆದಾರರು ಕಾಮಗಾರಿ ಆರಂಭಿಸಲು ಹಿಂಜರಿಯುತ್ತಿದ್ದಾರೆ ಎಂದು ಆರೋಪಿಸಿದರು. 

ಮುಂಬರುವ ಮಳೆಗಾಲದ ವೇಳೆಗೆ ಈ ತಾಂತ್ರಿಕ ವ್ಯವಸ್ಥೆ ಪೂರ್ಣಗೊಂಡರೆ ಮಾತ್ರ ವಿಮಾನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ನಿರ್ದೇಶಕರೊಂದಿಗೆ ಮಾತನಾಡಿ , ಕೇವಲ ಹಗಲು ಮಾತ್ರವಲ್ಲದೆ, ಹಗಲು-ರಾತ್ರಿ ನಿರಂತರವಾಗಿ ಕೆಲಸ ನಿರ್ವಹಿಸುವ ಮೂಲಕ ಮಳೆಗಾಲದ ಮುನ್ನ ಲೋಕಾರ್ಪಣೆ ಮಾಡಬೇಕು ಎಂದು ಸೂಚಿಸಿದ್ದೇವೆ ಎಂದರು. 

MP Raghavendra Slams Night Landing Delay

MP Raghavendra
MP Raghavendra
shivamogga car decor sun control house
shivamogga car decor sun control house
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor