ಯುವನಿಧಿ ಯೋಜನೆ ಕಾರ್ಯಕ್ರಮದಲ್ಲಿ ಶಾಸಕ ಚನ್ನಬಸಪ್ಪ ಮತ್ತು ಸಿಎಂ ಸಿದ್ದರಾಮಯ್ಯರ ಜುಗಲ್ ಬಂದಿ!

ಹಂಚಿಕೊಳ್ಳಿ
WhatsApp Facebook X Telegram

SHIVAMOGGA |  Jan 12, 2024  |   ಶಿವಮೊಗ್ಗ  ನಗರದ ಫ್ರೀಡಂಪಾರ್ಕ್​ನಲ್ಲಿ ಯುವನಿಧಿ ಯೋಜನೆ ಕಾರ್ಯಕ್ರಮ ಆರಂಭವಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಂ ಡಿಕೆ ಶಿವಕುಮಾರ್ ರವರ ಆಗಮನದೊಂದಿಗೆ ಕಾರ್ಯಕ್ರಮ ಆರಂಭವಾಗಿದೆ. ಸಾವಿರಾರು ಜನರು ವಿದ್ಯಾರ್ಥಿಗಳು ಯುವಕರು ಫ್ರೀಡಂಪಾರ್ಕ್​ನಲ್ಲಿ ಜಮಾಯಿಸಿದ್ದು, ಯುವನಿಧಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. 

ಯುವನಿಧಿ ಕಾರ್ಯಕ್ರಮ ಸಿಎಂ ಸಿದ್ದರಾಮಯ್ಯ

ಶಾಸಕ ಚನ್ನಬಸಪ್ಪರ ಬೆನ್ನುತಟ್ಟಿದ ಸಿದ್ದರಾಮಯ್ಯ

ಶಾಸಕ ಚೆನ್ನಬಸಪ್ಪರವರು ಈ ಹಿಂದೆ ಸಿದ್ದರಾಮಯ್ಯರವರನ್ನ ಟೀಕಿಸಿದ ವಿಚಾರಕ್ಕೆ ಸುದ್ದಿಯಾದವರು. ಸದ್ಯ ಅವರು ಶಿವಮೊಗ್ಗ ನಗರದ ಶಾಸಕರಾಗಿದ್ದಾರೆ.

ಯುವನಿಧಿ ಕಾರ್ಯಕ್ರಮ ಸಿಎಂ ಸಿದ್ದರಾಮಯ್ಯ

ವಿಶೇಷ ಅಂದರೆ, ಫ್ರೀಡಂಪಾರ್ಕ್​ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯರವರನ್ನ ಬಿಜೆಪಿ ಜನಪ್ರತಿನಿಧಿಗಳು ಮಾತನಾಡಿಸಿ ಸನ್ಮಾನಿಸಿದರು. ಈ ವೇಳೆ ಶಾಸಕ ಚನ್ನಬಸಪ್ಪರವರ ಕುಶಲೋಪರಿ ವಿಚಾರಿಸಿದ ಸಿದ್ದರಾಮಯ್ಯರವರು ಆತ್ಮೀಯವಾಗಿ ಮಾತನಾಡಿಸಿದರು. 

ಯುವನಿಧಿ ಕಾರ್ಯಕ್ರಮ ಸಿಎಂ ಸಿದ್ದರಾಮಯ್ಯ

ಇಷ್ಟೆ ಅಲ್ಲದೆ ಕಾರ್ಯಕ್ರಮದ ಉದ್ಘಾಟನೆಯ ಸಂದರ್ಭದಲ್ಲಿ ಒಂದು ತೆಂಗಿನ ಹಿಂಗಾರವನ್ನು ಬಿಡಿಸಿದ ಸಿಎಂ ಸಿದ್ದರಾಮಯ್ಯರವರು ಬಳಿಕ ಅಲ್ಲೆ ಚನ್ನಬಸಪ್ಪರವರಿಗೆ ಇನ್ನೊಂದು ಹಿಂಗಾರವನ್ನು ಬಿಡಿಸುವಂತೆ ಸೂಚಿಸಿದರು.

ಯುವನಿಧಿ ಕಾರ್ಯಕ್ರಮ ಸಿಎಂ ಸಿದ್ದರಾಮಯ್ಯ

 ಗಡಿಬಿಡಿಯಲ್ಲಿ ಹಿಂಗಾರದ ಬುಡ ಮುರಿಯಿತು. ಅದನ್ನ ಗಮನಿಸಿದ ಸಿಎಂ ಸಿದ್ದರಾಮಯ್ಯ ಚನ್ನಬಸಪ್ಪರವರ ಹೆಗಲಿಗೆ ಕೈ ಹಾಕಿ ತಮ್ಮತ್ತ ಸೆಳೆದುಕೊಂಡು ಭುಜವನ್ನ ತಟ್ಟಿದರು. ಅಲ್ಲದೆ ಖುಷಿಯಿಂದ ಹಾಸ್ಯ ಮಾಡಿದರು. 

ಯುವನಿಧಿ ಕಾರ್ಯಕ್ರಮ ಸಿಎಂ ಸಿದ್ದರಾಮಯ್ಯ

ಇವತ್ತಿನ ಕಾರ್ಯಕ್ರಮ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯಾದರೂ ಸಹ ಸಿಎಂ ಸಿದ್ದರಾಮಯ್ಯರವರು ವೇದಿಕೆಯಲ್ಲಿ ಬಿಜೆಪಿ ಜನಪ್ರತಿನಿಧಿಗಳನ್ನು ಆತ್ಮೀಯವಾಗಿ ಗೌರವಿಸಿದ್ದು ವಿಶೇಷವಾಗಿತ್ತು.

ಯುವನಿಧಿ ಕಾರ್ಯಕ್ರಮ ಸಿಎಂ ಸಿದ್ದರಾಮಯ್ಯ

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor