ಮಾಳೂರು : ಸಿಕೆ ರೋಡ್​ನಲ್ಲಿ ಬೈಕ್​ ನಿಲ್ಲಿಸಿ ಶಿವಮೊಗ್ಗಕ್ಕೆ ತೆರಳಿದ್ದರು, ಸಂಜೆ ಬಂದಾಗ ನಡೆದಿತ್ತು ಈ ಘಟನೆ

Malur ತೀರ್ಥಹಳ್ಳಿ : ತಾಲೂಕಿನ ಮಾಳೂರು ಗ್ರಾಮದ ಸಿ.ಕೆ. ಸರ್ಕಲ್ ಬಳಿ ವ್ಯಕ್ತಿಯೊಬ್ಬರು ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದು ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಳೆ ಆರ್ಭಟಕ್ಕೆ, ಬೆಂಗಳೂರು ಶಿವಮೊಗ್ಗ ಜನಶತಾಬ್ದಿ ಸೇರಿ ಹಲವು ರೈಲು ಸಂಚಾರದಲ್ಲಿ ಏರುಪೇರು!

ಘಟನೆ ವಿವರ

ದೂರುದಾರರು ಮೇ 10ರಂದು ಬೆಳಿಗ್ಗೆ ಸುಮಾರು 9:15ರ ವೇಳೆಗೆ ಬೈಕ್ ಮಾಲೀಕರು ತಮ್ಮ ಸ್ವಂತ ಕೆಲಸದ ನಿಮಿತ್ತ ಶಿವಮೊಗ್ಗಕ್ಕೆ ತೆರಳಲು ಮನೆಯಿಂದ ಹೊರಟಿದ್ದರು. ಬೆಳಿಗ್ಗೆ 10:00 ಗಂಟೆಯ ಸಮಯದಲ್ಲಿ ಮಾಳೂರು ಗ್ರಾಮದ ಸಿ.ಕೆ. ಸರ್ಕಲ್ ಬಳಿಯಿರುವ ಶಾಲಾ ಕ್ರೀಡಾಂಗಣದ ಹತ್ತಿರದ ಮರದ ಕೆಳಗೆ ತಮ್ಮ ಹಿರೋ ಹೊಂಡಾ ಸ್ಪ್ಲೆಂಡರ್ ಬೈಕನ್ನು ನಿಲ್ಲಿಸಿದ್ದರು. ಆ ಬಳಿಕ ಪರಿಚಿತರ ಕಾರೊಂದರಲ್ಲಿ ಶಿವಮೊಗ್ಗಕ್ಕೆ ತೆರಳಿದ್ದರು. 

ಕೆಲಸ ಮುಗಿಸಿಕೊಂಡು ಅದೇ ದಿನ ಸಂಜೆ ಸುಮಾರು 5:00 ಗಂಟೆಯ ವೇಳೆಗೆ ಸಿ.ಕೆ. ಸರ್ಕಲ್‌ಗೆ ವಾಪಸ್ ಬಂದು ನೋಡಿದಾಗ, ಮರದ ಕೆಳಗೆ ನಿಲ್ಲಿಸಿದ್ದ ಬೈಕ್ ನಾಪತ್ತೆಯಾಗಿರುವುದು ಕಂಡುಬಂದಿದೆ. 

ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ವಾಹನ ಪತ್ತೆಯಾಗಿಲ್ಲ. ಕಳ್ಳತನವಾಗಿರುವ ಹಿರೋ ಹೊಂಡಾ ಸ್ಪ್ಲೆಂಡರ್ ಬೈಕ್‌ನ, ಅಂದಾಜು ಮೌಲ್ಯ ಸುಮಾರು 20,000 ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಮೇ 15ರಂದು ಮಾಳೂರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

Malur Hero Honda Splendor Stolen