ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಎಲ್ಲೆಲ್ಲೂ ಎಲೆಕ್ಟ್ರಿಕ್ ವಾಹನಗಳ ಹವಾ ಜೋರಾಗಿದೆ. ಕಡಿಮೆ ನಿರ್ವಹಣಾ ವೆಚ್ಚ ಮತ್ತು ಪರಿಸರ ಸ್ನೇಹಿಯಾಗಿರುವ ಈ ವಾಹನಗಳಿಗೆ ಬೇಡಿಕೆ ದಿನೇ ದಿನೇ ಏರುತ್ತಿದೆ. ಈ ಹಿನ್ನೆಲೆಯಲ್ಲಿ, ವಾಹನ ತಯಾರಿಕಾ ಕಂಪನಿಗಳು ಪೈಪೋಟಿಯಲ್ಲಿ ಹೊಸ ಹೊಸ ಎಲೆಕ್ಟ್ರಿಕ್ ಮಾದರಿಗಳನ್ನು ಬಿಡುಗಡೆ ಮಾಡುತ್ತಿವೆ. ಇದೇ ಸರಣಿಗೆ ಇದೀಗ ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಯಿಂದ XUV.e9S ಎಲೆಕ್ಟ್ರಿಕ್ ಕಾರು ಸೇರಿಕೊಂಡಿದೆ.

Mahindra XEV 9S ಬುಕ್ಕಿಂಗ್ ಮತ್ತು ಬೆಲೆಯ ವಿವರ
ಮಹೀಂದ್ರಾ ಕಂಪನಿ ಮಾರುಕಟ್ಟೆಗೆ ಪರಿಚಯಿಸುತ್ತಿರುವ ಮೊದಲ 7 ಸೀಟರ್ ಎಲೆಕ್ಟ್ರಿಕ್ ಎಸ್‌ಯುವಿ ಇದಾಗಿದೆ ಎಂಬುದು ಈ ಮಾದರಿಯ ಪ್ರಮುಖ ವಿಶೇಷತೆಯಾಗಿದೆ. ಮುಂಬರುವ ವರ್ಷದ ಸಂಕ್ರಾಂತಿ ಹಬ್ಬದಂದು ಈ ಕಾರಿನ ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಕಂಪನಿ ತಿಳಿಸಿದ್ದು,ಈ ಹೊಸ ಎಲೆಕ್ಟ್ರಿಕ್ ಎಸ್‌ಯುವಿಯ ಆರಂಭಿಕ ಎಕ್ಸ್ ಶೋರೂಂ ಬೆಲೆಯನ್ನು ₹19.95 ಲಕ್ಷ ಎಂದು ನಿಗದಿಪಡಿಸಲಾಗಿದೆ. ವಿವಿಧ ವೇರಿಯಂಟ್ ಮತ್ತು ವೈಶಿಷ್ಟ್ಯಗಳನ್ನು ಅವಲಂಬಿಸಿ, ಈ ಕಾರಿನ ಗರಿಷ್ಠ ಬೆಲೆಯು ₹29.45 ಲಕ್ಷದವರೆಗೆ (ಎಕ್ಸ್ ಶೋರೂಂ) ತಲುಪಬಹುದು ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಶಿವಮೊಗ್ಗ ಸರಕು 99999! ಅಡಕೆ ರೇಟು ನೋಡಿದ್ರಾ?! ಎಲ್ಲೆಲ್ಲಿ ಎಷ್ಟಿದೆ ಅಡಿಕೆ ದರ!?
Mahindra XEV 9S ಪ್ಲಾಟ್‌ಫಾರ್ಮ್ ಮತ್ತು ಟೆಸ್ಟ್ ಡ್ರೈವ್ ಪ್ರಾರಂಭ
XUV.e9S ಮಹೀಂದ್ರಾ ಕಂಪನಿಯ EV ಇಂಗ್ಲೋ (INGLO) ಪ್ಲಾಟ್‌ಫಾರ್ಮ್ ಆಧಾರದ ಮೇಲೆ ತಯಾರಾಗಿರುವ ಮೂರನೇ ಎಲೆಕ್ಟ್ರಿಕ್ ಕಾರಾಗಿದೆ. ಈ ಮಾದರಿಗೂ ಮುನ್ನ ಕಂಪನಿಯು XUV.e8 ಮತ್ತು BE.05 ಹೆಸರಿನ ಎರಡು ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ತಂದಿತ್ತು. ಮಹೀಂದ್ರಾ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಹೊಸ XUV.e9S ಕಾರಿನ ಟೆಸ್ಟ್ ಡ್ರೈವ್‌ಗಳು ಡಿಸೆಂಬರ್ 5 ರಿಂದ ಗ್ರಾಹಕರಿಗೆ ಲಭ್ಯವಾಗಲಿವೆ.ಈ 7 ಸೀಟರ್ ಎಲೆಕ್ಟ್ರಿಕ್ ಎಸ್‌ಯುವಿಯು ಮೂರು ವಿಭಿನ್ನ ಬ್ಯಾಟರಿ ಪ್ಯಾಕ್‌ಗಳೊಂದಿಗೆ ಲಭ್ಯವಿರುತ್ತದೆ: 59 kWh, 70 kWh, ಮತ್ತು 79 kWh. ಇದರ ಜೊತೆಗೆ, ವೇಗವಾಗಿ ಚಾರ್ಜಿಂಗ್ ಮಾಡುವ ಸೌಲಭ್ಯವನ್ನು ಸಹ ನೀಡಲಾಗುತ್ತಿದ್ದು, ಇದು 175 ಕಿಲೋವ್ಯಾಟ್‌ಗಳವರೆಗಿನ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ಘೋಷಿಸಿದೆ.
ಮೈಲೇಜ್ ಎಷ್ಟು
ಈ ಎಲೆಕ್ಟ್ರಿಕ್ ಎಸ್‌ಯುವಿಯ ಮೈಲೇಜ್ ಅದರ ವೇರಿಯಂಟ್‌ಗಳನ್ನು ಅವಲಂಬಿಸಿ ವ್ಯತ್ಯಾಸವಾಗುತ್ತದೆ. ಒಂದೇ ಬಾರಿ ಪೂರ್ಣ ಚಾರ್ಜ್ ಮಾಡಿದರೆ ಈ ಕಾರು 521 ಕಿಲೋಮೀಟರ್‌ನಿಂದ ಗರಿಷ್ಠ 679 ಕಿಲೋಮೀಟರ್‌ಗಳವರೆಗೆ ಸಂಚರಿಸುವ ಸಾಮರ್ಥ್ಯ ಹೊಂದಿದೆ ಎಂದು ಮಹೀಂದ್ರಾ ತಿಳಿಸಿದೆ. ಅದರಲ್ಲೂ 79 kWh ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು ಅತ್ಯಧಿಕ ಮೈಲೇಜ್ ನೀಡಲಿದೆ.








