ಶಾಪಿಂಗ್​ ಮುಗಿಸಿ ಸ್ಕೂಟಿಯಲ್ಲಿ ಬರುತ್ತಿದ್ದ ಮಹಿಳೆಗೆ ಕಾದಿತ್ತು ಶಾಕ್​

ಕೊನೆಯ ನವೀಕರಣ: 28 ನವೆಂಬರ್ 2025, 4:12 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
Shimoga Chain Snatching SHIMOGA CHAIN SNATCHING  crime news Shivamogga Chain Snatching Shoes and Slippers theft Shivamogga crime news Shivamogga news today
SHIMOGA CHAIN SNATCHING  crime news Shivamogga Chain Snatching Shoes and Slippers theft Shivamogga crime news Shivamogga news today

ಶಿವಮೊಗ್ಗದ  ಸ್ವಾಮಿ ವಿವೇಕಾನಂದ ಬಡವಾಣೆಯ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಎದುರು ಮಹಿಳೆಯೊಬ್ಬರು ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಕಳ್ಳರು ಮಹಿಳೆಯ ಸರವನ್ನು ಕದ್ದು ಪರಾರಿಯಾಗಿದ್ದಾರೆ. ಈ ಹಿನ್ನೆಲೆ ತುಂಗಾನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ : ಗೋಪಾಳ ಚಾನೆಲ್‌ಗೆ ಹಾರಿದ್ದ ಯುವಕನನ್ನು ಕಾಪಾಡಿದ ಅಯ್ಯಪ್ಪ ಮಾಲಾದಾರಿಗಳು, ಅಗ್ನಿಶಾಮಕ ಸಿಬ್ಬಂದಿ

ಗೋಪಾಲ ಸ್ವಾಮಿ ವಿವೇಕಾನಂದ ಬಡಾವಣೆಯ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜ್ ಎದುರು ರಸ್ತೆಯಲ್ಲಿ  ಮಹಿಳೆ ಶಾಪಿಂಗ್ ಮುಗಿಸಿ ಸ್ಕೂಟಿಯಲ್ಲಿ ಮನೆಗೆ ವಾಪಸ್ ಬರುತ್ತಿದ್ದರು. ಈ ವೇಳೆ, ಹಿಂಬದಿಯಿಂದ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬರು ಏಕಾಏಕಿ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರವನ್ನು ಕೀಳಲು ಪ್ರಯತ್ನಿಸಿದ್ದಾನೆ. ಎಚ್ಚೆತ್ತ ಮಹಿಳೆ ತಕ್ಷಣ ಕೈಯಲ್ಲಿ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಮಹಿಳೆ ಸರ  ಹಿಡಿದಿದ್ದ ಕಾರಣಕ್ಕೆ ಸರವು ಅರ್ಧಕ್ಕೆ ತುಂಡಾಗಿದೆ. ಸುಮಾರು 6 ಗ್ರಾಂ ತೂಕದ ಸರ ಮಹಿಳೆಯ ಕೈಯಲ್ಲಿ ಉಳಿದಿದ್ದರೆ, ಉಳಿದ ಅಂದಾಜು 4 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳ ಕಿತ್ತುಕೊಂಡು ಪರಾರಿಯಾಗಿದ್ದಾನೆ  ಎಂದು ಆರೋಪಿಸಲಾಗಿದೆ . ಕಳುವಾದ ಸರದ ಮೌಲ್ಯ ಸುಮಾರು 25,000 ರೂ. ಎಂದು ಅಂದಾಜಿಸಲಾಗಿದೆ.  ಈ ಸಂದರ್ಭದಲ್ಲಿ  ಮಹಿಳೆ ಸ್ಕೂಟಿ ಸಮೇತ ರಸ್ತೆಗೆ ಬಿದ್ದಿದ್ದಾರೆ. ಪರಿಣಾಮವಾಗಿ, ಅವರ ಬಲಗಾಲು ಮತ್ತು ಕುತ್ತಿಗೆಯ ಬಳಿ ಪೆಟ್ಟಾಗಿದೆ.

Shimoga Chain Snatching Woman Injured

Shimoga Chain Snatching

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor