ತೀರ್ಥಹಳ್ಳಿಯಲ್ಲಿಂದು ಕಿಮ್ಮನೆ-ಆರ್​ಎಂ ಮಂಜುನಾಥ್​ ಗೌಡರಿಂದ ಜೋಡಿ ಪ್ರತಿಭಟನೆ! ಕಾರಣವೇನು? ವಿವರ ಇಲ್ಲಿದೆ

MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕಾಂಗ್ರೆಸ್​ ವಲಯದಲ್ಲಿ ಪರಸ್ಪರ ವಿಭಿನ್ನ ದಿಕ್ಕಿನಲ್ಲಿಯೇ ನಿಂತಿರುವ ಆರ್​ಎಂ ಮಂಜುನಾಥ್ ಗೌಡರು ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇದೀಗ ಒಟ್ಟಾಗಿ ಜೋಡೆತ್ತಿನ ರೀತಿಯಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದಕ್ಕೆ ಕಾರಣ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿಯ ವಿವಾಧ

BREAKING : ಮತ್ತೊಂದು ದರೋಡೆ ಯತ್ನವನ್ನು ತಡೆದ ಶಿವಮೊಗ್ಗ ಪೊಲೀಸ್! ನಾಲ್ವರ ಬಂಧನ !

ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರ ಮೇಲೆ ಗೃಹಮಂತ್ರಿಗಳ ಚಿತಾವಣೆಯಿಂದ ಪಿಡಿಒ ದೌಜರ್ನ್ಯ ನಡೆಸ್ತಿದ್ದಾರೆ ಎಂಬುದು ಆರೋಪ. ಇದೇ ವಿಚಾರವಾಗಿ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಆದಾಗ್ಯು ಆಡಳಿತ ಪಕ್ಷದ ಪ್ರಭಾವದಲ್ಲಿ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಸಮಸ್ಯೆ ಎದುರಿಸುವಂತಾಗಿದೆ ಎಂಬುದು ಕಾಂಗ್ರೆಸ್ ಆರೋಪ 

Malenadu Today Shivamogga

ಈ ನಿಟ್ಟಿನಲ್ಲಿ ಇವತ್ತು 21/02/2023ರ ಬೆಳಿಗ್ಗೆ 10 ಗಂಟೆಗೆ ತೀರ್ಥಹಳ್ಳಿಯಿಂದ ಮೇಲಿನ ಕುರುವಳ್ಳಿಯವರೆಗೆ ಬೃಹತ್ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಪಾದಯಾತ್ರೆಯಲ್ಲಿ  ಮಾಜಿ ಸಚಿವರು,ಕೆಪಿಸಿಸಿ ವಕ್ತಾರರು ಆದ ಕಿಮ್ಮನೆ ರತ್ನಾಕರ, ಕೆಪಿಸಿಸಿ ಸಹಕಾರ ಸೆಲ್‌ನ ಸಂಚಾಲಕರಾದ ಅರ್ ಎಮ್‌ ಮಂಜುನಾಥಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕಲಗೋಡು ರತ್ನಾಕರ್  ಸೇರಿದಂತೆ ಹಲವಾರು ಮಂದಿ ಪಾಲ್ಗೊಳ್ಳಲಿದ್ದಾರೆ. 

 ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment