SHIVAMOGGA NEWS TODAY

ಸುಳ್ಳು ಸುದ್ದಿಗೆ ಎಐ ಬ್ರೇಕ್, ದ್ವೇಷಪೂರಿತ ಪೋಸ್ಟ್ ತಡೆಯಲು ರಾಜ್ಯ ಸರ್ಕಾರದ ಬಿಗ್ ಪ್ಲಾನ್

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳು ಹಾಗೂ ಸಮಾಜದ ಶಾಂತಿ ಕದಡುವ ದ್ವೇಷಪೂರಿತ ಪೋಸ್ಟ್​​ಗಳಿಗೆ ಕಡಿವಾಣ ಹಾಕಲು ಕರ್ನಾಟಕ ರಾಜ್ಯ ಸರ್ಕಾರ ಈಗ ಹೈಟೆಕ್ ಮೊರೆ ಹೋಗಿದೆ. ಇದಕ್ಕಾಗಿ ಸುಮಾರು 67.26 ಕೋಟಿ ವೆಚ್ಚದಲ್ಲಿ ಸುಧಾರಿತ ಕೃತಕ ಬುದ್ಧಿಮತ್ತೆ (AI) ತಂತ್ರಾಂಶವನ್ನು ಖರೀದಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಅನುಮೋದನೆ ನೀಡಲಾಗಿದೆ.

ಶಿವಮೊಗ್ಗದ ಈ ಭಾಗಗಳಲ್ಲಿ ಫೆಬ್ರವರಿ 7 ರಂದು ಕರೆಂಟ್ ಇರಲ್ಲ

ಸರ್ಕಾರವು 50 ಕೋಟಿ ವೆಚ್ಚದಲ್ಲಿ ಸೋಷಿಯಲ್ ಮೀಡಿಯಾ ಅನಾಲಿಟಿಕಲ್ ಸಲ್ಯೂಷನ್ ಸಾಫ್ಟ್‌ವೇರ್ ಖರೀದಿಸಲಿದ್ದು, 7 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸರ್ವರ್ ಕೇಂದ್ರಗಳನ್ನು ಸ್ಥಾಪಿಸಲಿದೆ. ಈ ಯೋಜನೆಯ ಒಟ್ಟು ಮೊತ್ತದಲ್ಲಿ 10.26 ಕೋಟಿ ಜಿಎಸ್‌ಟಿ ಪಾವತಿಗೆ ಮೀಸಲಿಡಲಾಗಿದೆ ಎಂದು ಕಾನೂನು ಸಚಿವರು ಮಾಹಿತಿ ನೀಡಿದ್ದಾರೆ 

Karnataka Govt ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ,

ಈ ಎಐ ಆಧಾರಿತ ತಂತ್ರಾಂಶವು ಸಾಮಾಜಿಕ ಜಾಲತಾಣ ಹಾಗೂ ನ್ಯೂಸ್ ಪೋರ್ಟಲ್‌ಗಳಲ್ಲಿ ಅಪ್‌ಲೋಡ್ ಆಗುವ ಪೋಸ್ಟ್‌ಗಳನ್ನು ಸ್ವಯಂಚಾಲಿತವಾಗಿ ಸ್ಕ್ಯಾನ್ ಮಾಡಲಿದೆ. ಒಂದು ವೇಳೆ ಪೋಸ್ಟ್‌ನಲ್ಲಿ ದ್ವೇಷಪೂರಿತ ಅಂಶಗಳು ಅಥವಾ ತಿರುಚಿದ ಮಾಹಿತಿ ಕಂಡುಬಂದರೆ, ಅದು ತಕ್ಷಣವೇ ಸಂಬಂಧಪಟ್ಟ ಜಿಲ್ಲಾ ಘಟಕಗಳಿಗೆ ಅಲರ್ಟ್ ಕಳುಹಿಸಲಿದೆ.

ಗೃಹ ಇಲಾಖೆಯ ಉಸ್ತುವಾರಿಯಲ್ಲಿ ಈ ಹೈಟೆಕ್ ಘಟಕವು ಕಾರ್ಯನಿರ್ವಹಿಸಲಿದ್ದು, ತಪ್ಪು ಮಾಹಿತಿ ಹರಡುವವರ ವಿರುದ್ಧ ಪ್ರಚಲಿತ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುತ್ತದೆ. ಈ ಹಿಂದೆ ಅಸ್ತಿತ್ವದಲ್ಲಿದ್ದ ಫ್ಯಾಕ್ಟ್ ಚೆಕ್ ಘಟಕಗಳ ಮಿತಿಯನ್ನು ಮೀರಿ, ಹೊಸ ತಲೆಮಾರಿನ ಎಐ ತಂತ್ರಜ್ಞಾನದ ಮೂಲಕ ಸುಳ್ಳು ಸುದ್ದಿಗಳನ್ನು ಬುಡಸಮೇತ ಕಿತ್ತೆಸೆಯುವುದು ಸರ್ಕಾರದ ಗುರಿಯಾಗಿದೆ.

Karnataka Govt to Buy AI Software to Track Fake News

Karnataka Govt to Buy AI Software to Track Fake News
Karnataka Govt to Buy AI Software to Track Fake News
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.