SHIVAMOGGA NEWS TODAY

ನಾಳೆಯಿಂದ ಲವ್ ವೀಕ್ ಶುರು, ಯಾವ ದಿನ ಯಾವ ‘ಡೇ’? ಸಿಂಗಲ್ಸ್ ಮತ್ತು ಜೋಡಿಗಳಿಗಾಗಿ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ : ಫೆಬ್ರವರಿ ಎಂದರೆ ಪ್ರೇಮಿಗಳ ಪಾಲಿಗೆ ಅತ್ಯಂತ ಖುಷಿಯ ತಿಂಗಳು. ಪ್ರೀತಿ ಚಿಗುರಲು ಪೂರ್ವ ತಯಾರಿ, ಮೊದಲ ಪ್ರೀತಿಯ ನೆನಪು ಹೀಗೆ ಹಲವು ಮಧುರ ಕ್ಷಣಗಳನ್ನು ಈ ಮಾಸ ಹೊತ್ತು ತರುತ್ತದೆ. ನಾಳೆಯಿಂದ ಒಂದು ವಾರಗಳ ಕಾಲ ಪ್ರೀತಿಯನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುವ ವ್ಯಾಲೆಂಟೈನ್ಸ್ ವೀಕ್ ಆರಂಭವಾಗುತ್ತಿದೆ. ಆದರೆ, ಲವರ್ ಇಲ್ಲದ ಸಿಂಗಲ್ಸ್‌ಗಳಿಗೆ ಈ 7 ದಿನಗಳ ವಿಶೇಷತೆ ಏನು ಎಂಬ ಮಾಹಿತಿ ಇರುವುದಿಲ್ಲ. ಹಾಗೆಯೇ ಪ್ರೇಮಿಗಳಿಗೆ ಈ ಬಾರಿ ರಜೆಗಳ ಅನುಕೂಲ ಹೇಗಿದೆ ಎಂಬ ಕುತೂಹಲವಿರುತ್ತದೆ. ಅದಕ್ಕಾಗಿಯೇ ಈ ವಿಶೇಷ ಲೇಖನ 

Valentine’s Week 2026 ಈ ಬಾರಿಯ ವ್ಯಾಲೆಂಟೈನ್ಸ್ ವೀಕ್ ಶನಿವಾರದಿಂದ ಆರಂಭವಾಗುತ್ತಿರುವುದು ಪ್ರೇಮಿಗಳಿಗೆ ದೊಡ್ಡ ಪ್ಲಸ್ ಪಾಯಿಂಟ್. ಫೆಬ್ರವರಿ 7ರ ಶನಿವಾರದಂದು Rose Day ನಡೆಯಲಿದೆ. ಶನಿವಾರ ರಜೆ ಇರುವವರಿಗೆ ಕೇವಲ ಹೂವು ಕೊಡುವುದು ಅಷ್ಟೇ ಅಲ್ಲದೆ, ಒಂದು ಸುಂದರ ಟ್ರಿಪ್​​ ಅಥವಾ ಡೇಟ್ ಪ್ಲಾನ್ ಮಾಡಲು ಉತ್ತಮ ಅವಕಾಶವಿದೆ. ಅದರ ಮರುದಿನವೇ ಅಂದರೆ ಫೆಬ್ರವರಿ 8ರ ಭಾನುವಾರ Propose Day ಬರಲಿದ್ದು, ರಜಾ ದಿನವಾದ್ದರಿಂದ ಮನದ ಮಾತನ್ನು ಹೇಳಿಕೊಳ್ಳಲು ಅಥವಾ ಸಂಗಾತಿಗೆ ವಿಶೇಷ ಉಡುಗೊರೆ ನೀಡಲು ಪೂರ್ಣ ದಿನ ಸಿಗಲಿದೆ 

ವಾರದ ಆರಂಭದಲ್ಲಿ ಅಂದರೆ ಫೆಬ್ರವರಿ 9ರ ಸೋಮವಾರ ಚಾಕೊಲೇಟ್ ಡೇ ಇದ್ದರೆ  ಮಂಗಳವಾರ ಫೆ. 10 ರಂದು ಟೆಡ್ಡಿ ಡೇ ಬರಲಿದೆ. ಕೆಲಸದ ಪ್ರೆಸರ್​​  ನಡುವೆಯೂ ಸಣ್ಣ ಸಿಹಿ ಅಥವಾ ಮುದ್ದಾದ ಆಟಿಕೆಯ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಲು ಈ ದಿನಗಳು ಉತ್ತಮವಾಗಿವೆ . ಬುಧವಾರ ಫೆ. 11 ರಂದು ಪ್ರಾಮಿಸ್ ಡೇ ಇದ್ದು  ಸಂಬಂಧದಲ್ಲಿ ನಂಬಿಕೆಯನ್ನು ಗಟ್ಟಿಗೊಳಿಸಿದರೆ, ಗುರುವಾರ (ಫೆ. 12) ‘ಅಪ್ಪುಗೆಯ ದಿನ ಮತ್ತು ಶುಕ್ರವಾರ (ಫೆ. 13) ‘ಕಿಸ್ ಡೇ’ ಪ್ರೇಮಿಗಳ ನಡುವಿನ ಆತ್ಮೀಯತೆಯನ್ನು ಹೆಚ್ಚಿಸಲಿವೆ.

ಈ ಎಲ್ಲಾ ಸಂಭ್ರಮಗಳ ಅಂತಿಮ ಘಟ್ಟವೇ ಫೆಬ್ರವರಿ 14ರ ಶನಿವಾರದ ‘ಪ್ರೇಮಿಗಳ ದಿನ’. ಈ ವರ್ಷದ ವ್ಯಾಲೆಂಟೈನ್ಸ್ ಡೇ ಶನಿವಾರ ಬಂದಿರುವುದು ವಿಶೇಷವಾಗಿದ್ದು, ದಂಪತಿಗಳು ಅಥವಾ ಜೋಡಿಗಳು ವಾರಾಂತ್ಯದ ಪ್ರವಾಸ ಅಥವಾ ಕ್ಯಾಂಡಲ್ ಲೈಟ್ ಡಿನ್ನರ್‌ಗೆ ತೆರಳಲು ಇದು ಅತ್ಯುತ್ತಮ ಸಮಯ. ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಲ್ಲಿ ಜನದಟ್ಟಣೆ ಹೆಚ್ಚಿರುವ ಸಾಧ್ಯತೆ ಇರುವುದರಿಂದ ಮುಂಚಿತವಾಗಿ ಬುಕಿಂಗ್ ಮಾಡಿಕೊಳ್ಳುವುದು ಉತ್ತಮ ಎನ್ನಲಾಗಿದೆ.

Valentine’s Week 2026 Daily List & Weekend Guid

Valentine's Week 2026 Daily List & Weekend Guid
Valentine’s Week 2026 Daily List & Weekend Guid
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.