SHIVAMOGGA NEWS TODAY

ಶಿವಮೊಗ್ಗದ ಈ ಭಾಗಗಳಲ್ಲಿ ನಾಳೆ ಪವರ್ ಕಟ್

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ: ಶಿವಮೊಗ್ಗ ನಗರದ ಹಲವು ಬಡಾವಣೆಗಳಲ್ಲಿ ನಾಳೆ (ಫೆಬ್ರವರಿ 07) ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಎಂ.ಆರ್.ಎಸ್ ಉಪಕೇಂದ್ರದಲ್ಲಿ ಹಮ್ಮಿಕೊಂಡಿರುವ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಾಗೂ ಎನ್.ಟಿ. ರಸ್ತೆ ವ್ಯಾಪ್ತಿಯಲ್ಲಿನ ತುರ್ತು ಕಾಮಗಾರಿಗಳ ಹಿನ್ನೆಲೆಯಲ್ಲಿ ಮೆಸ್ಕಾಂ ಈ ಕ್ರಮ ಕೈಗೊಂಡಿದೆ. 

ನಗರದ ಎಂ.ಆರ್.ಎಸ್ ಉಪಕೇಂದ್ರದ ವ್ಯಾಪ್ತಿಗೆ ಬರುವ ಕೋಟೆ ರಸ್ತೆ, ಅಶೋಕ ರಸ್ತೆ, ಗಾಂಧಿಬಜಾರ್, ಓಬಿಎಲ್ ರಸ್ತೆ, ಲಷ್ಕರ್ ಮೊಹಲ್ಲಾ, ಸಾವರ್ಕರ್ ನಗರ, ಬಿ.ಹೆಚ್.ರಸ್ತೆ, ತಿರುಪಳಯ್ಯನ ಕೇರಿ, ಪೆನ್ಷನ್ ಮೊಹಲ್ಲಾ, ನಾಗಪ್ಪ ಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.

ಇದಲ್ಲದೆ, ಉಪ ವಿಭಾಗ-2 ರ ಘಟಕ-5 ರ ವ್ಯಾಪ್ತಿಯ ಎನ್.ಟಿ. ರಸ್ತೆಯಲ್ಲಿ ತುರ್ತು ಕಾಮಗಾರಿ ನಡೆಯಲಿದ್ದು, ಬೆಳಗ್ಗೆ 10.00 ರಿಂದ ಸಂಜೆ 4.00 ರವರೆಗೆ ಭಾರತಿ ಕಾಲೋನಿ, ಪಂಚವಟಿ ಕಾಲೋನಿ, ಬಿ.ಹೆಚ್.ರಸ್ತೆ, ಎನ್.ಟಿ.ರಸ್ತೆ, ಪಿಯರ್‌ಲೈಟ್ ಫ್ಯಾಕ್ಟರಿ, ಮಂಡ್ಲಿ ಬೈಪಾಸ್ ಹಾಗೂ ಮಂಡ್ಲಿ ವೃತ್ತದ ಆಸುಪಾಸಿನ ಜನವಸತಿ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ.

ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಈ ಬದಲಾವಣೆಯನ್ನು ಗಮನಿಸಿ, ವಿದ್ಯುತ್ ವ್ಯತ್ಯಯದ ಅವಧಿಯಲ್ಲಿ ಮೆಸ್ಕಾಂ ಅಧಿಕಾರಿಗಳೊಂದಿಗೆ ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

Shimoga Power Cut Update Feb 7 Areas & Timings

Shimoga Power Cut Update
Shimoga Power Cut Update
shivamogga car decor sun control house
shivamogga car decor sun control house
END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.