ಕಡೂರು /ಮಲೆನಾಡು ಟುಡೆ ಸುದ್ದಿ / ಒಮ್ಮೊಮ್ಮೆ ಕೋರ್ಟ್ಗಳು ನೀಡುವ ಶಿಕ್ಷೆ ಕುತೂಹಲ ಮೂಡಿಸುತ್ತವೆ. ಅಲ್ಲದೆ ಸಮಾಜದಲ್ಲಿ ವಿಶೇಷ ಜಾಗೃತಿಗೂ ಕಾರಣವಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಕಡೂರು ಜೆಎಂಎಫ್‌ಸಿ ಕೋರ್ಟ್ ನೀಡಿರುವ ತೀರ್ಪು ಇದೀಗ ಚರ್ಚೆಯಾಗುತ್ತಿದೆ. ಡ್ರಂಕ್ ಆ್ಯಂಡ್ ಡ್ರೈವ್ ಕೇಸ್ನಲ್ಲಿ ವ್ಯಕ್ತಿಯೊಬ್ಬರಿಗೆ ದಂಡ ವಿಧಿಸುವ ಬದಲು, ಕುಡಿದು ವಾಹನ ಚಲಾಯಿಸದಂತೆ ಜಾಗೃತಿ ಮೂಡಿಸುವ ಶಿಕ್ಷೆಯನ್ನು ಕೋರ್ಟ್ ನೀಡಿದೆ.
ಶಿವಮೊಗ್ಗ : ಮೇ 1ರಿಂದ ಇಂಡಿಗೋ ವಿಮಾನ ಸೇವೆ ಸ್ಥಗಿತ ಆಗುತ್ತಾ ?
ಏನಿದು ಪ್ರಕರಣ
ಬಿಸಲೇಹಳ್ಳಿ ಗ್ರಾಮದ ನಿವಾಸಿ ರಂಜಿತ್ ಕುಮಾರ್ ಎಂಬಾತನಿಗೆ ಕಡೂರು ಜೆಎಂಎಫ್‌ಸಿ ಪ್ರಧಾನ ನ್ಯಾಯಾಧೀಶರಾದ ಅಮೀನ್ ಸುಲ್ತಾನಾ ವಿನೂತನ ಶಿಕ್ಷೆ ಪ್ರಕಟಿಸಿದ್ದಾರೆ. ಮಾರ್ಚ್ 11ರಂದು ಕಡೂರು ಪಟ್ಟಣದಲ್ಲಿ ರಂಜಿತ್ ಮದ್ಯಪಾನ ಮಾಡಿದ್ದರು. ಕುಡಿದು ಅಶೋಕ್ ಲೇಲ್ಯಾಂಡ್ ಸರಕು ಸಾಗಣೆ ವಾಹನ ಚಲಾಯಿಸುತ್ತಿದ್ದರು. ಈ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದರಿಂದ ಕೇಸ್ ದಾಖಲಾಗಿತ್ತು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಹಾಗೂ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ನ್ಯಾಯಾಲಯದ ಮುಂದೆ ಹಾಜರಾಗಿದ್ದ ರಂಜಿತ್ ತಪ್ಪನ್ನು ಒಪ್ಪಿಕೊಂಡಿದ್ದರು.

ಸೈಬರ್ ಬುಲ್ಲಿಯಿಂಗ್ ಬಗ್ಗೆ ಶಿವಮೊಗ್ಗ ಎಸ್ಪಿ ಪೋಸ್ಟ್! ಡಿಜಿಟಲ್ ಕಿರುಕುಳದ ಬಗ್ಗೆ ನಿಮಗೆ ಗೊತ್ತಾ!
ಕಡೂರು ಕೋರ್ಟ್ ತೀರ್ಪು/Kadur JMFC court order
ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು, ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಡೂರು ಪಟ್ಟಣದ ಮಲ್ಲೇಶ್ವರ-ಮರವಂಜಿ ವೃತ್ತದಲ್ಲಿ ಸಂಚಾರ ನಿಯಮಗಳ ಕುರಿತಾದ ಘೋಷಣೆಗಳುಳ್ಳ ಪ್ಲಕಾರ್ಡ್ ಅನ್ನು ಹಿಡಿದುಕೊಂಡು ನಿಲ್ಲುವಂತೆ ಆದೇಶ ನೀಡಿದ್ದರು. ಅಲ್ಲದೆ, ಆತನು ಈ ಸಮುದಾಯ ಸೇವೆಯನ್ನು ಸರಿಯಾಗಿ ನಿರ್ವಹಿಸುತ್ತಿದ್ದಾನೆಯೇ ಎಂಬುದನ್ನು ಪರಿಶೀಲಿಸಲು ಓರ್ವ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆಯೂ ಸೂಚಿಸಿದ್ದರು.
ಮಲ್ಲೇಶ್ವರ ವೃತ್ತದಲ್ಲಿ ಜಾಗೃತಿ
ನ್ಯಾಯಾಲಯದ ಆದೇಶದ ಅನ್ವಯ, ರಂಜಿತ್ ಕುಮಾರ್ ಸಂಚಾರ ನಿಯಮಗಳ ಜಾಗೃತಿ ಮೂಡಿಸುವ ಪ್ಲಕಾರ್ಡ್ ನೀಡಿ ಪಟ್ಟಣದ ಮಲ್ಲೇಶ್ವರ ವೃತ್ತದಲ್ಲಿ ನಿಂತಿದ್ದರು. ಇದರ ಉಸ್ತುವಾರಿ ಪೊಲೀಸ್ ಸಿಬ್ಬಂದಿ ಮಹೇಂದ್ರ ಕುಮಾರ್ ವಹಿಸಿದ್ದರು. ಈ ವೇಳೆ ಹಾಜರಿದ್ದ ಪಿಎಸ್‌ಐ ಸಜಿತ್ ಕುಮಾರ್ ಅವರು, ಸಾರ್ವಜನಿಕರು ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.

ಹವಾಮಾನ ಮುನ್ಸೂಚನೆ! ಶಿವಮೊಗ್ಗ : ಇನ್ನೈದು ದಿನ ಗುಡುಗು, ಗಾಳಿ, ಮಳೆ!
ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
Why did the Kadur JMFC court order an offender from Bisalehalli to stand at the Malleshwara circle from 10 AM to 5 PM holding a traffic awareness placard, and how will this unique community service impact road safety?
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.