JSW Motors ಶಿವಮೊಗ್ಗ : ಭಾರತೀಯ ವಾಹನೋದ್ಯಮದಲ್ಲಿ ಜೆಎಸ್‌ಡಬ್ಲ್ಯೂ ಗ್ರೂಪ್ ಈಗ ಹೊಸ ಕ್ರಾಂತಿ ಮಾಡಲು ಸಜ್ಜಾಗಿದೆ. ಈಗಾಗಲೇ ಎಂಜಿ ಮೋಟಾರ್ ಜೊತೆಗಿನ ಸಹಭಾಗಿತ್ವದಲ್ಲಿ ಯಶಸ್ಸು ಕಂಡಿರುವ ಜೆಎಸ್‌ಡಬ್ಲ್ಯೂ, ಈಗ ತನ್ನ ಅಂಗಸಂಸ್ಥೆಯಾದ ಜೆಎಸ್‌ಡಬ್ಲ್ಯೂ ಮೋಟಾರ್ಸ್’ ಮೂಲಕ ಸ್ವತಂತ್ರವಾಗಿ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ಚೀನಾದ ಹೆಸರಾಂತ ‘ಚೆರಿ ಆಟೋಮೊಬೈಲ್’ನ ಜೆಟೂರ್ ಟಿ2 (Jetour T2) ಕಾರಿನ ರೀ-ಬ್ಯಾಡ್ಜ್ ಆವೃತ್ತಿಯನ್ನು ಜೆಎಸ್‌ಡಬ್ಲ್ಯೂ ಭಾರತದಲ್ಲಿ ಬಿಡುಗಡೆಗೊಳಿಸಲಿದೆ ಎಂಬ ಸುದ್ದಿಯು ಸದ್ಯ ಕಾರು ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಶಿವಮೊಗ್ಗ ಮಾರಿಕಾಂಬಾ ಜಾತ್ರೆ ಆರಂಭ: ಭಕ್ತಸಮೂಹಕ್ಕೆ ಮಾರವ್ವನ ಮೊದಲ ದರ್ಶನ
ಈ ನೂತನ ಎಸ್‌ಯುವಿಯು ಅತ್ಯಂತ ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗುವ ಅಂದಾಜಿದೆ. ಕನಿಷ್ಠ ರೂ. 15 ಲಕ್ಷದಿಂದ ಗರಿಷ್ಠ ರೂ. 30 ಲಕ್ಷದವರೆಗೆ (ಎಕ್ಸ್ ಶೋರೂಂ) ಇದರ ದರ ಇರಬಹುದು ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ಇದೇ ದೀಪಾವಳಿ ಹಬ್ಬದ ಸಂಭ್ರಮದ ವೇಳೆಗೆ ಈ ಕಾರು ಹೊಸ ಹೆಸರಿನೊಂದಿಗೆ ಭಾರತೀಯ ರಸ್ತೆಗಳಿಗೆ ಇಳಿಯುವ ಸಾಧ್ಯತೆಯಿದೆ.
ಜೆಟೂರ್ t2 ಆಧಾರಿತ ಈ ಕಾರು ಅತ್ಯಾಧುನಿಕ ಹಾಗೂ ಬಲಿಷ್ಠ ವಿನ್ಯಾಸವನ್ನು ಹೊಂದಿದೆ. ದೊಡ್ಡದಾದ ಗ್ರಿಲ್, ಬಂಪರ್, ಎಲ್‌ಇಡಿ ಹೆಡ್‌ಲೈಟ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಆಕರ್ಷಕ ಅಲಾಯ್ ವೀಲ್‌ಗಳು ಇದರ ಅಂದವನ್ನು ಹೆಚ್ಚಿಸಲಿವೆ. ಇದು ಸ್ಟೋನ್ ಗ್ರೇ, ಬೋರಾ ಬ್ಲೂ, ಸ್ನೋ ವೈಟ್ ಮತ್ತು ಸಿಲ್ವರ್ ಸ್ನೋ ಎಂಬ ನಾಲ್ಕು ವಿಭಿನ್ನ ಬಣ್ಣಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.
JSW Motors ವಿಶಾಲವಾದ ಒಳಾಂಗಣ ಮತ್ತು ಸಾಮರ್ಥ್ಯ
ಈ ಎಸ್‌ಯುವಿಯು 4,785 ಎಂಎಂ ಉದ್ದ ಮತ್ತು 2,006 ಎಂಎಂ ಅಗಲವಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಸ್ಥಳಾವಕಾಶ ನೀಡಲಿದೆ. 5 ಸೀಟರ್ ವ್ಯವಸ್ಥೆಯನ್ನು ಹೊಂದಿರುವ ಈ ಕಾರಿನಲ್ಲಿ 475 ರಿಂದ 580 ಲೀಟರ್ ಬೂಟ್ ಸ್ಪೇಸ್ ಇರಲಿದ್ದು, ದೂರದ ಪ್ರಯಾಣಕ್ಕೆ ಹೆಚ್ಚಿನ ಲಗೇಜ್ ಕೊಂಡೊಯ್ಯಲು ಅನುಕೂಲಕರವಾಗಿದೆ. ಇದರ 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಕಠಿಣ ರಸ್ತೆಗಳಲ್ಲೂ ಸುಗಮ ಸಂಚಾರಕ್ಕೆ ನೆರವಾಗಲಿದೆ
ಕಾರಿನ ಕಾರ್ಯಕ್ಷಮತೆಯ ವಿಚಾರಕ್ಕೆ ಬಂದರೆ, ಇದು 1.5 ಲೀಟರ್ ಟರ್ಬೊ ಪೆಟ್ರೋಲ್, 1.5 ಲೀಟರ್ ಪ್ಲಗ್-ಇನ್ ಹೈಬ್ರಿಡ್ ಮತ್ತು 2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್ ಹೊಂದಿರುವ ಈ ಎಸ್‌ಯುವಿ ಲೀಟರ್‌ಗೆ 9 ರಿಂದ 19 ಕಿ.ಮೀ ಮೈಲೇಜ್ ನೀಡುವ ಸಾಧ್ಯತೆಯಿದೆ. ಒಳಭಾಗದಲ್ಲಿ 15.6 ಇಂಚಿನ ಬೃಹತ್ ಟಚ್‌ಸ್ಕ್ರೀನ್, ಪನೋರಮಿಕ್ ಸನ್‌ರೂಫ್ ಮತ್ತು ಸೋನಿ ಆಡಿಯೋ ಸಿಸ್ಟಮ್‌ನಂತಹ ಐಷಾರಾಮಿ ಫೀಚರ್‌ಗಳು ಇರಲಿವೆ .
ಇದರಲ್ಲಿ 10 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟಿಪಿಎಂಎಸ್ ಮತ್ತು ಲೆವೆಲ್-2 ಎಡಿಎಎಸ್ (ADAS) ತಂತ್ರಜ್ಞಾನ ಇರಲಿದೆ.
JSW Motors to Launch Jetour T2 Based SUV


