SHIVAMOGGA NEWS TODAY

ಶಿವಮೊಗ್ಗ: JNNCE ಹಾಸ್ಟೆಲ್ ರೂಮ್‌ಗೆ ನುಗ್ಗಿದ ಕಳ್ಳರು, ಕದ್ದಿದ್ದೇನು ಗೊತ್ತಾ? 

Prathapa thirthahalli ನವೀಕರಣ: 20 ಏಪ್ರಿಲ್ 2026, 12:41 ಅಪರಾಹ್ನ ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ: ನಗರದ ಪ್ರತಿಷ್ಠಿತ ಜೆ.ಎನ್.ಎನ್.ಸಿ.ಇ (JNNCE) ಕಾಲೇಜಿನ ಹಾಸ್ಟೆಲ್ ರೂಮ್‌ಗೆ ನುಗ್ಗಿದ ಖದೀಮರು ವಿದ್ಯಾರ್ಥಿಯೊಬ್ಬನ ಬೆಲೆಬಾಳುವ ಲ್ಯಾಪ್‌ಟಾಪ್ ಹಾಗೂ ಚಾರ್ಜರ್ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಾಗಿದೆ.

ಶಿವಮೊಗ್ಗ: ಏಪ್ರಿಲ್ 20 ರಂದು ಬಸವ ಜಯಂತಿ, ಭವ್ಯ ರಾಜಬೀದಿ ಉತ್ಸವ, ಸಾಂಸ್ಕೃತಿಕ ವೈಭವ

ಕಾಲೇಜಿನಲ್ಲಿ ಮೆಕ್ಯಾನಿಕಲ್ ವಿಭಾಗದ 4ನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಯೊಬ್ಬರು ತುಂಗಾ ಹಾಸ್ಟೆಲ್‌ನ ರೂಮ್ ನಂಬರ್ 14ರಲ್ಲಿ ವಾಸವಾಗಿದ್ದರು. ಏಪ್ರಿಲ್ 14ರಂದು ಮಧ್ಯಾಹ್ನ 12:50ರ ಸುಮಾರಿಗೆ ಅವರು ಊಟಕ್ಕೆ ತೆರಳುವಾಗ ರೂಮಿನ ಚಿಲಕವನ್ನು ಮಾತ್ರ ಹಾಕಿದ್ದರು. ಆದರೆ, ರೂಮಿಗೆ ಬೀಗ ಹಾಕಿರಲಿಲ್ಲ. ಇದನ್ನೇ ಸರಿಯಾದ ಸಮಯವೆಂದು ಭಾವಿಸಿದ ಕಳ್ಳರು ಒಳಗೆ ನುಗ್ಗಿ ಸುಮಾರು 76,591 ರೂ. ಮೌಲ್ಯದ ಲ್ಯಾಪ್‌ಟಾಪ್ ಮತ್ತು ಅದರ ಚಾರ್ಜರ್ ಅನ್ನು ಹೊತ್ತೊಯ್ದಿದ್ದಾರೆ.

JNNCE Hostel Laptop Worth ₹76k Stolen

JNNCE Hostel  Student Arrested i Construction House Robbery Missing Passenger Auto Case Filed After One Year Delay Theft at Vinobanagar Shivamogga Burglary Shivamogga auto Driver Shivamogga news Family Attacked After Birthday Celebration in apmc shivamogga
JNNCE Hostel
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.