ಆರಗ ಜ್ಞಾನೇಂದ್ರರಿಂದ ದೈವಕ್ಕೆ ಅವಮಾನವಾಯ್ತಾ? ತೀರ್ಥಹಳ್ಳಿಯಲ್ಲಿ ‘ಗುಳಿಗ’ ದೈವದ ವಿಚಾರದಲ್ಲಿ ನಡೆಯುತ್ತಿರೋದು ಏನು? ಸಚಿವರು, ಮಾಜಿ ಸಚಿವರು ಕೊಟ್ಟ ಉತ್ತರ-ಪ್ರತ್ಯುತ್ತರವೇನು?

This Article Written by / Malenadu Today / ಮಾರ್ಚ್ 16, 2023

MALENADUTODAY.COM  |SHIVAMOGGA| #KANNADANEWSWEB

ರಾಜ್ಯ ರಾಜಕಾರಣದಲ್ಲಿ ತೀರ್ಥಹಳ್ಳಿ ಮತಕ್ಷೇತ್ರ ಬೇರೆ ಬೇರೆ ರೀತಿಯಲ್ಲಿ ಸದ್ದು ಮಾಡುತ್ತಿದೆ. ಅದರಲ್ಲಿಯು ವಿಶೇಷವಾಗಿ ತೀರ್ಥಹಳ್ಳಿಯಲ್ಲಿ ನಾಟಕದ ರಾಜಕಾರಣ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ  ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾಂಗಣದಲ್ಲಿ ತುಳು ನಾಟಕ ರಂಗದಲ್ಲಿ ಹೊಸ ಅಲೆ ಎಬ್ಬಿಸಿರುವ ವಿಜಯಕುಮಾರ್‌ ಕೋಡಿಯಾಲಬೈಲು ನಿರ್ದೇಶನದ ಶಿವದೂತೆ ಗುಳಿಗೆ ಎಂಬ ತುಳು ನಾಟಕ ಪ್ರದರ್ಶನಗೊಂಡಿತ್ತು. 

READ |ಇಲ್ಲಿದೆ ನೋಡಿ ವಿಷಯ!! ಡಬ್ಬಲ್ ಮರ್ಡರ್ ಅಟ್ಯಾಕ್! ಮಧು ಬದುಕಿದ್ದು ಹೇಗೆ? ಶಿವಮೊಗ್ಗ ಸಿಟಿಯಲ್ಲಿಯೇ ನಡೆಯುತ್ತಿತ್ತಾ ಕೃತ್ಯ

Malenadu Today Shivamogga

ಈ ನಾಟಕ ಮಾಜಿ ಸಚಿವ ಕಿಮ್ಮನೆ ರತ್ನಾಕರ್​ರವರ ನೇತೃತ್ವದಲ್ಲಿ ನಡೆದಿತ್ತು, ಅಲ್ಲದೆ ಆರ್​ಎಂ ಮಂಜುನಾಥ್ ಗೌಡರು ಸೇರಿದಂತೆ ಕಾಂಗ್ರೆಸ್ ನಾಯಕರು ನಾಟಕದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇನ್ನೂ ಕಾರ್ಯಕ್ರಮಕ್ಕೆ ಸೇರಿದ್ದ ಜನಸ್ತೋಮದಿಂದಲೇ ಇದೀಗ ನಾಟಕ ದೊಡ್ಡಮಟ್ಟಿಗೆ ಚರ್ಚೆಗೆ ಕಾರಣವಾಗಿದೆ. ಈ ಮಧ್ಯೆ ಸಚಿವ ಆರಗ ಜ್ಞಾನೇಂದ್ರರವರು ನಿನ್ನೆ ತೀರ್ಥಹಳ್ಳಿಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡುತ್ತಾ ಗುಳಿಗ ನಾಟಕದ ಬಗ್ಗೆ ಮಾತನಾಡಿದ್ರು. ಅವರು ಆಡಿದ ಮಾತು, ಇದೀಗ ದೈವಕ್ಕೆ ಅವಮಾನ ಎಂದು ಟೀಕೆಗೆ ಒಳಗಾಗಿದ್ದು. 

ಕಾರ್ಯಕ್ರಮದಲ್ಲಿ ಮಾತನಾಡಿದ್ದ ಆರಗ ಜ್ಞಾನೇಂದ್ರ ನಿನ್ನೆ ನಾನು ನೋಡಿದೆ ಇವತ್ತು ನಿನ್ನೆಯಿಂದ ಎಂತದೋ ಗುಳಿಗೆ ಗುಳಿಗೆ ಅಂತ ಹಾಕಿದ್ದಾರಪ್ಪ wall poster ನಲ್ಲಿ ನಿನ್ನೆ ರಾತ್ರಿ  ಎಂಥದ್ದೋ ನಾಟಕ ಬಹಳ ಅಪಾಯ ಇವರು ಯಾವ ಗುಳಿಗೆ ಕೊಡುತ್ತಾರೆ ಗೊತ್ತಿಲ್ಲ  ಜಾಪಾಳ್​ ಮಾತ್ರೆಯ ಗುಳಿಗೆ ಕೊಟ್ಟರು ಕೊಡಬಹುದು ಹೇಳೋಕಾಗೋದಿಲ್ಲ ಯಾಕಂದ್ರೆ ಹೊಸ ಹೊಸ ನಾಟಕಗಳನ್ನ ಪ್ರಾರಂಭ ಮಾಡಿದ್ದಾರೆ ಇವ್ರು  ಎಂದಿದ್ದರು. ಅವರ ಮಾತು ಇದೀಗ ದೈವಕ್ಕೆ ಮಾಡಿದ ಅವಮಾನ ಎಂಬಂತೆ ಟೀಕೆಗೊಳಗಾಗುತ್ತಿದೆ. ಅಲ್ಲದೆ ತೀರ್ಥಹಳ್ಳಿಯಲ್ಲಿ ನೆಲೆಸಿರುವ ಅವಿಭಜಿತ ದಕ್ಷಿಣ ಕನ್ನಡ ಸಮುದಾಯದವರನ್ನು ಈ ಮೂಲಕ ಪರೋಕ್ಷವಾಗಿ ನಿಂದಿಸಿದ್ರು ಎಂಬ ವಾದ ಕೇಳಿಬಂದಿದೆ. 

Malenadu Today Shivamogga

READ |ಸೇಮ್ ಅಟ್ಯಾಕ್​ !? ಚೀಲೂರಿನ ಗೋವಿನ ಕೋವಿಯಲ್ಲಿ ನಡೆದಿದ್ದೇನು? ಆಂಜನೇಯ ಸಾವು! ಮಧು ಗಂಭೀರ

ಈ ಸಂಬಂಧ ಶಿವಮೊಗ್ಗದಲ್ಲಿ ಕುರುವಳ್ಳಿ ಗ್ರಾಮ ಪಂಚಾಯಿತಿ ವಿಚಾರದಲ್ಲಿ ಪ್ರತಿಭಟನೆ ನಡೆಸಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಪ್ರತಿಕ್ರಿಯಿಸಿದ್ದಾರೆ. ಅವರನ್ನು ದೈವವೇ ನೋಡಿಕೊಳ್ಳಲಿದೆ ಎಂದು ಕಿಮ್ಮನೆ ರತ್ನಾಕರ್ ಅಭಿಪ್ರಾಯ ಪಟ್ಟಿದ್ದಾರೆ. 

Malenadu Today Shivamogga

READ |BIG BREAKING NEWS | ಹಂದಿ ಅಣ್ಣಿ ಕೊಲೆ ಆರೋಪಿಗಳಿಬ್ಬರ ಮೇಲೆ ಮಾರಣಾಂತಿಕ ದಾಳಿ! ಓರ್ವ ಸಾವು! ಇನ್ನೊಬ್ಬ ಗಂಭೀರ! ರಿವೆಂಜ್​ ?

ಇನ್ನೂ ತಮ್ಮ ಮಾತು ವಿರೋಧಕ್ಕೆ ಗುರಿಯಾದ ಬೆನ್ನಲ್ಲೆ ಸ್ಪಷ್ಟನೆ ನೀಡಿರುವ ಆರಗ ಜ್ಞಾನೇಂದ್ರರವರು, ನಾನು ದೈವಕ್ಕೆ ಅವಮಾನ ಮಾಡಿಲ್ಲ. ಗುಳಿಗ ದೈವವನ್ನು ಆಧರಿಸಿ ರಚಿಸಿರುವ ನಾಟಕದ ಬಗ್ಗೆ ಮೆಚ್ಚುಗೆ ಇದೆ. ಹಾಗೂ ದೈವದ ಬಗ್ಗೆ ಗೌರವವನ್ನು ಸಹ ಹೊಂದಿದ್ದೇನೆ ಎಂದಿರುವ ಸಚಿವರು, ತೀರ್ಥಹಳ್ಳಿ ಕಾಂಗ್ರೆಸ್ ನಾಯಕರು ರಾಜಕೀಯ ದುರುದ್ದೇಶದಿಂದ  ನಾಟಕ ಪ್ರದರ್ಶನದಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಅದನ್ನ ನನ್ನ ಮಾತಲ್ಲಿ ಪ್ರಸ್ತಾಪಿಸಿದ್ದೇನೆ ಅಷ್ಟೆ. ನಾಟಕದ ಬಗ್ಗೆಯಾಗಲಿ ದೈವದ ವಿರುದ್ಧವಾಗಲಿ ಮಾತನಾಡಿಲ್ಲ. ನನ್ನ ಮಾತನ್ನು ಅಪಾರ್ಥ ಬರುವಂತೆ ಮೂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ ಎಂದು ದೂರಿದ್ದಾರೆ. 

ಇನ್ನೂ ಆರಗ ಜ್ಞಾನೇಂದ್ರರವರು ದೈವಭಕ್ತರು ಅನ್ನುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಕೋಣಂದೂರಿನಲ್ಲಿ ನಡೆದ ಕೋಲಾದಲ್ಲಿ ಪಾಲ್ಗೊಮಡಿದ್ದ ಸಚಿವರು, ದೈವದ ಆಶೀರ್ವಾದ ಪಡೆದಿದ್ದಾರೆ. ಅದರ ಫೋಟೋ ಸಹ ವೈರಲ್ ಆಗುತ್ತಿದ್ದು, ಈ ಬಗ್ಗೆ ಬಿಜೆಪಿ ಹಾಗೂ ಆರಗರವರ ಬೆಂಬಲಿಗರು, ಜನರ ದಿಕ್ಕು ತಪ್ಪಿಸುವವರಿಗೆ ಈ ಫೋಟೋ ಉತ್ತರವಾಗಿದೆ ಎನ್ನುತ್ತಿದ್ದಾರೆ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga shivamogg

#ShimogaNews,BJP Karnataka,Congress,thirthahalli

ಮುಂದಿನ ಸುದ್ದಿ ಒದಿ

Leave a Comment