SHIVAMOGGA NEWS TODAY

ಮಣ್ಣು ತೆಗೆದ್ವಿ, ಜೋರಾಗಿ ಕೂಗಿದ್ವಿ, ಆದ್ರೆ ಏನೂ ಪ್ರಯೋಜನವಾಗಲಿಲ್ಲ: ಹುಲಿಕಲ್ ಘಾಟ್ ದುರಂತದ ಕಣ್ಣಾರೆ ಕಂಡ ಸಾಕ್ಷಿ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಹೊಸನಗರ : ನಾವು ಮಣ್ಣನ್ನೆಲ್ಲಾ ತೆಗೆದ್ವಿ, ಜೋರಾಗಿ ಕೂಗುದ್ವಿ, ಹುಡುಕುವ ಎಲ್ಲಾ ಪ್ರಯತ್ನಗಳನ್ನು ಮಾಡ್ವಿದ್ವಿ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.ಇವು ಏಪ್ರಿಲ್ 09ರ ರಾತ್ರಿ ಹೊಸನಗರ ತಾಲೂಕಿನ ಹುಲಿಕಲ್ ಘಾಟಿಯ ಹೇರ್‌ಪಿನ್ ತಿರುವಿನಲ್ಲಿ ಸಂಭವಿಸಿದ ಭೂಕುಸಿತದ ಮಣ್ಣಿನಡಿ ಸಿಲುಕಿ, ಪ್ರಾಣಾಪಾಯದಿಂದ ಪಾರಾಗಿ ಮೇಲೆ ಬಂದ ಕಾರ್ಮಿಕ ಅಶೋಕ್ ಅವರ ಕರುಣಾಜನಕ ಮಾತುಗಳು. 

ಶಿವಮೊಗ್ಗ: ನೇಣು ಬಿಗಿದುಕೊಂಡು ಆತ್ಮಹ*ತ್ಯೆಗೆ ಶರಣಾದ ಬಾಲಕಿ

ಕಾರ್ಮಿಕ ಅಶೋಕ್ ಅವರು ಧರೆ ಕುಸಿತದ ಆ ಭೀಕರ ಸಂದರ್ಭವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಾವು ಅಲ್ಲಿ ಸಿಮೆಂಟ್ ಬೆಡ್ ಹಾಕುವ ಕೆಲಸ ಮಾಡುತ್ತಿದ್ದೆವು. ಕೆಲಸ ಮುಗಿಸಿ ಕೆಳಗಿನಿಂದ ಮೇಲೆ ನೋಡುವಷ್ಟರಲ್ಲಿ ಧರೆ ಅದಾಗಲೇ ಕುಸಿದು ಬಿದ್ದಿತ್ತು. ನಾವು ಬದಿಯಲ್ಲಿದ್ದ ಕಾರಣ ಹೇಗೋ ಒಂದು ಕಡೆಗೆ ಬಂದೆವು. ಆದರೂ ನಮ್ಮ ಕಾಲುಗಳು ಮಣ್ಣಿನಡಿ ಸಿಲುಕಿಕೊಂಡಿದ್ದವು. ಆದರೆ ನಮ್ಮ ಮಧ್ಯದಲ್ಲಿದ್ದವರ ಮೇಲೆ ಮಣ್ಣು ಬಿದ್ದು ಸಂಪೂರ್ಣವಾಗಿ ಮುಚ್ಚಿಹೋಗಿದ್ದರು. ನಾವು ಮಣ್ಣನ್ನು ಸರಿಸುವ ಪ್ರಯತ್ನ ಪಟ್ಟೆವು, ಜೀವ ಉಳಿಸಲು ಕಿರುಚಾಡಿದೆವು. ಆದರೆ ನಮ್ಮ ಕಣ್ಣೆದುರೇ ನಡೆದ ಆ ದುರಂತಕ್ಕೆ ನಾವೇನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ನೋವು ತೋಡಿಕೊಂಡಿದ್ದಾರೆ. 

ಮತ್ತೊಬ್ಬ ಕಾರ್ಮಿಕ ಸಚಿನ್ ಮಾತನಾಡಿ, ಸಂಜೆ 6 ಗಂಟೆಗೆ ಕೆಲಸ ನಿಲ್ಲಿಸಿದ್ದೆವು. ಕೆಳಗಡೆ ಇದ್ದ ಸಾಮಗ್ರಿಗಳನ್ನು ತೆಗೆದುಕೊಳ್ಳಬೇಕಿತ್ತು. ಬೆಡ್ ಹಾಕುತ್ತಿದ್ದ ನಾವಿಬ್ಬರು ಅದೃಷ್ಟವಶಾತ್ ತಪ್ಪಿಸಿಕೊಂಡಿದ್ದೇವೆ. ಅಲ್ಲಿ ಒಟ್ಟು 7 ಜನರಿದ್ದೆವು. ನಾವು ಸೈಡ್‌ನಲ್ಲಿದ್ದ ಕಾರಣ ಬಚಾವಾದೆವು. ಮೇಲ್ಗಡೆ ರಸ್ತೆಯಲ್ಲಿ ವಾಹನಗಳು ಓಡಾಡುತ್ತಿದ್ದ ಕಾರಣ ಉಂಟಾದ ವೈಬ್ರೇಷನ್‌ಗೆ ಮಣ್ಣು ಕುಸಿದು ಇಷ್ಟೆಲ್ಲಾ ಅವಾಂತರವಾಯಿತು” ಎಂದು ಘಟನೆಯ ಹಿಂದಿನ ಕಾರಣವನ್ನು ವಿವರಿಸಿದ್ದಾರೆ.

Hulikal Ghat Landslide Survivors Heartbreaking Story

Hulikal Ghat Landslide Survivors Heartbreaking Story
Hulikal Ghat Landslide Survivors Heartbreaking Story
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.