ಬಡ ಆರೋಪಿಗಳಿಗೆ, ದುಬಾರಿ ಬೇಲ್​ ಹೇಗೆ ಸಿಗುತ್ತೆ? ಶಿವಮೊಗ್ಗ ಪೊಲೀಸರು ಈಗಲಾದರೂ ಕಾಣದ ಕೈಗಳ ದುಡ್ಡಿನ ಮೂಲ ಹುಡುಕುತ್ತಾರಾ!?

Shivamogga Police ಬಡ ಆರೋಪಿಗಳಿಗೆ, ದುಬಾರಿ ಬೇಲ್​ ಹೇಗೆ ಸಿಗುತ್ತೆ? ಎನ್​ಐಎ ಆತಂಕ? ಹರ್ಷ ಮರ್ಡರ್​ ಕೇಸ್​ನಲ್ಲಿ ಟುಡೇ ಸುದ್ದಿ ರಾಜ್ಯಮಟ್ಟದಲ್ಲಿ ಸದ್ದು ಮಾಡ್ತಿದೆ! ಶಿವಮೊಗ್ಗ ಪೊಲೀಸರು ಈಗಲಾದರೂ ಕಾಣದ ಕೈಗಳ ದುಡ್ಡಿನ ಮೂಲ ಹುಡುಕುತ್ತಾರಾ!?

ಟುಡೆ ತಂಡ ವ್ಯಕ್ತಪಡಿಸಿತ್ತು ಆತಂಕ

ಮತೀಯ ಗಲಬೆಗೆ ಕಾರಣವಾಗುವ ಆರೋಪಿಗಳು ಬಂಧನವಾಗಿ ಜಾಮೀನು ಪಡೆಯುವ ತನಕ ಅವರಿಗೆ ದೊಡ್ಡ ಮಟ್ಟದ ಫೈನಾನ್ಸಿಂಗ್ ಮಾಡುತ್ತಿರೋ ಶಕ್ತಿ ಯಾವುದು? ತನ್ನ ಕೋಮಿನ ಕ್ರಿಮಿನಲ್ ಗಳ ಪರವಾಗಿ ಬ್ಯಾಟಿಂಗ್ ಆಡುವ ಆ ಮಧ್ಯವರ್ತಿಯನ್ನು ಪೊಲೀಸರು ದೂರವಿಡದಿದ್ದರೇ ಶಿವಮೊಗ್ಗಕ್ಕೆ ಕಾದಿದೆ ಗಂಡಾಂತರ. ಕೋಮುಗಲಭೆಗೆ ನಿಗೂಢ ರೀತಿಯಲ್ಲಿ ಕಸರತ್ತು ನಡೆಸುತ್ತಿದೆಯಾ ಆ ಶಕ್ತಿ?

ಹೀಗೊಂದು ಪ್ರಶ್ನೆ ಹಾಗೂ ತನಿಖಾ ವರದಿಯನ್ನು ಟುಡೆ ತಂಡದ ಜೆಪಿ ಎಕ್ಸ್ ಕ್ಲ್ಯೂಸಿವ್ ಆಗಿ, ಶಿವಮೊಗ್ಗದ ಜನತೆ ಮುಂದಿಟ್ಟಿದ್ರು. ವಿಷಯ ಏನೆಂದರೆ, ಟುಡೆ ತಂಡದ ವರದಿಯಲ್ಲಿ ವ್ಯಕ್ತವಾದ ಆತಂಕವನ್ನು ಎನ್​ಐಎ ಕೂಡ ವ್ಯಕ್ತಪಡಿಸಿದೆ.

ಎನ್​ಐಎ ವ್ಯಕ್ತಪಡಿಸಿದೆ ಆತಂಕ

ಭಯೋತ್ಪಾದನೆಗೆ ಸಾಥ್ ಕೊಟ್ಟು, ಐಸಿಎಸ್​ ಸಂಘಟನೆಗೆ ಸೇರುವಂತೆ ದುರ್ಬಲ ಮನಸ್ಸಿನ ಯುವಕರನ್ನ ಪ್ರಚೋದಿಸ್ತಿದ್ದ ಹಾಗೂ ದೇಣಿಗೆ ಸಂಗ್ರಹಿಸಿದ್ದ ಆರೋಪದ ಮೇರೆಗೆ ಬಂಧನ ಆಗಿರುವ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ವೇಳೆ ಎನ್​ಐಎ ಪರ ವಕೀಲರು ರಾಜ್ಯ ಹೈಕೋರ್ಟ್​ನ ಎದುರು ಇಂತಹದ್ದೊಂದು ಆತಂಕ ವ್ಯಕ್ತಪಡಿಸಿದ್ದಾರೆ.

ಎನ್​ಐಎ ವಿಶೇಷ ಪ್ರಾಸಿಕ್ಯೂಟರ್​, ಪಿ ಪ್ರಸನ್ನಕುಮಾರ್​, ಯುಎಪಿಎ(ಉಪಾ) ಕಾಯ್ದೆ ಅಡಿಯಲ್ಲಿ ಬಂಧನ ಆದ ಆರೋಪಿಗಳು, ಖುದ್ದು ತಾವು ಬಡವರು ಎಂದು ಜಾಮೀನು ಅರ್ಜಿ ಸಲ್ಲಿಸುವಾಗ ಹೇಳಿರುತ್ತಾರೆ. ಸ್ವಘೋಷಿತವಾಗಿ ಬಡವರು ಎಂದಿರುವ ಆರೋಪಿಗಳಿಗೆ, ಬೇಲ್​ ಕೊಡಿಸಲು ದೊಡ್ಡ ದೊಡ್ಡ ವಕೀಲರನ್ನು ಹಿಡಿಯಲಾಗುತ್ತಿದೆ. ಈ ಮೂಲಕ ದುಬಾರಿ ಶುಲ್ಕವನ್ನು ನೀಡಲು ಆರೋಪಿಗಳಿಗೆ ಹಣ ಎಲ್ಲಿಂದ ಬರುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಮಟ್ಟಿಗಿನ ಹಣವನ್ನು ವ್ಯಯಿಸುವ ವ್ಯಕ್ತಿಗಳು ಯಾರು? ಎಂಬುದನ್ನ ಸೂಕ್ಷ್ಮವಾಗಿ ಗಮನಿಸಬೇಕು ಎಂದು ತಮ್ಮ ವಾದ ಮಂಡಿಸಿದ್ದಾರೆ. ಈ ಬಗ್ಗೆ ಪ್ರಜಾವಾಣಿ ಪತ್ರಿಕೆ ವರದಿಯನ್ನು ಸಹ ಮಾಡಿದೆ!

ಹರ್ಷ ಮರ್ಡರ್ ಕೇಸ್​ ಮತ್ತು ನಿಗೂಢ ಕೈಗಳು

ಇನ್ನೂ ಹರ್ಷನ ಕೊಲೆ ವಿಚಾರಕ್ಕೆ ಬರೋಣ! ನಡೆದ ಮರ್ಡರ್​ ಹಾಗೂ ನಂತರದ ಘಟನೆಗಳು ಮತ್ತು ಅದಕ್ಕೂ ಮೊದಲು ನಡೆದ ಮತೀಯ ಹತ್ಯೆಗಳು ಜೊತೆಯಲ್ಲಿ ಆರೋಪಿಗಳು ಬಂಧನವಾಗುವ ಮೊದಲು ನಡೆದಿದ್ದ ಸೇಫ್​ಗಾರ್ಡ್​ನ ಪ್ರಯತ್ನಗಳು ಹಾಗೂ ಅದರ ಹಿಂದಿರೋ ನಿಗೂಢ ಮುಖಗಳ ಬಗ್ಗೆ ಮಲೆನಾಡು ಟುಡೇ ಕಳೆದ ಏಪ್ರಿಲ್​ 30 ರಂದು ವರದಿ ಮಾಡಿತ್ತು. ಅಲ್ಲಿ ಜೆಪಿ ಎಕ್ಸ್​ಕ್ಲ್ಯೂಸಿವ್ ಆಗಿ ಕಾಣದ ಕೈಗಳ ಕೈವಾಡ ಹಾಗೂ ವ್ಯವಸ್ಥಿತ ಪ್ರಯತ್ನಗಳ ಬಗ್ಗೆ ತಿಳಿಸಿದ್ದರು. ಅಷ್ಟೆಅಲ್ಲದೆ, ಎನ್​ಐಎ ಕೇಸ್​ ಹಸ್ತಾಂತರಿಸಿಕೊಂಡು ಘಟನೆ ನಡೆದಿದ್ದು ಭಯ ಸೃಷ್ಟಿಸುವ ಸಂಘಟಿತ ಸಂಚು ಎಂದು ಆರೋಪಿಸಿತ್ತು.

ಸದ್ಯ ಟುಡೇ ತಂಡ, ಮಾಡಿದ್ದ ವರದಿಯಂತೆ, ಎನ್​ಐಎ ಇನ್ನೊಂದು ಪ್ರಕರಣದಲ್ಲಿ ಆತಂಕ ವ್ಯಕ್ತಪಡಿಸಿದೆ. ಆದರೆ ಹರ್ಷ & ಜೀವನ್​ ಮರ್ಡರ್​ ಪ್ರಕರಣದಲ್ಲಿ ಕೆಲಸ ಮಾಡಿದೆ ಎನ್ನಲಾದ ಕಾಣದ ಕೈ ಹಾಗೂ ಕಣ್ಮರೆಯ ಜಗತ್ತಿನಿಂದ ಬರುತ್ತಿರುವ ಫಂಡ್​ ನ ಮೂಲ ಪೊಲೀಸ್​ ಇಲಾಖೆ ಇದುವರೆಗೂ ಶೋಧಿಸುವ ಪ್ರಯತ್ನಕ್ಕೆ ಕೈ ಹಾಕಿಲ್ಲ.

ಜಾಮೀನಿಗಾಗಿ ನಡೆಯುತ್ತಿದೆ ಪ್ರಯತ್ನಗಳು

ಈಗಲೂ ಹರ್ಷ ಕೊಲೆ ಪ್ರಕರಣದ ಆರೋಪಿಗಳು ಜಾಮೀನಿಗಾಗಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಉಪ ಕಾಯ್ದೆ ಅನ್ವಯವಾಗದಿದ್ದರೇ ಇಷ್ಟೊತ್ತಿಗೆ ಜಾಮೀನು ಸಹ ಸಿಗುತ್ತಿತ್ತೇನೋ ಎಂದು ಹೆಸರು ಹೇಳಲಿಚ್ಚಿಸದ ಅಪರಾಧ ಲೋಕದ ಇಂಟರ್​ನಲ್ ಮಾಹಿತಿ ತಿಳಿದವರೊಬ್ಬರು ಹೇಳುತ್ತಾರೆ. ಅಲ್ಲದೆ ವ್ಯವಸ್ಥಿತ ಟೀಂವೊಂದು ಆರೋಪಿಗಳಿಗೆ ಬೇಲ್​ ಕೊಡಿಸುವ ಪ್ರಯತ್ನದಲ್ಲಿದೆ ಎಂಬ ಮಾಹಿತಿಯು ಇದೆ.

ಹೀಗಾಗಿ ಶಿವಮೊಗ್ಗ ಪೊಲೀಸ್​ ಇಲಾಖೆ ಹಾಗೂ ಗುಪ್ತಚರ ಇಲಾಖೆಗಳು ಈ ನಿಟ್ಟಿನಲ್ಲಿ ಗಂಭೀರವಾಗಿ ದೃಷ್ಟಿಹರಿಸಬೇಕಿದೆ. ಅದರಲ್ಲೂ ಗುಪ್ತಚರ ಇಲಾಖೆ ಪೆನ್ನು, ಪೇಪರ್​ಗೆ ಸೀಮಿತವಾಗದೇ, ಶಿವಮೊಗ್ಗದ ಅಂತರಾಳದಲ್ಲಿ ಕೋಮುಗಲಭೆಯಂತಹ ಘಟನೆಗಳನ್ನು ಸೃಷ್ಟಿಸಲು ಹುನ್ನಾರ ರೂಪಿಸುವ ಹಾಗೂ ಆತಂಕಮೂಡಿಸುವ ಕೆಲಸಕ್ಕೆ ದಾರಾಳವಾಗಿ ಫಂಡ್​ ಮಾಡುವ ಹಾಗೂ ಇಂತಹ ಕೆಲಸಕ್ಕೆ ಮಧ್ಯವರ್ತಿಗಳಾಗಿ ಕೆಲಸ ಮಾಡುವ ಓಲ್ಡ್​ ರೌಡಿಶೀಟರ್ಸ್​ಗಳ ಬೆನ್ನತ್ತಬೇಕಿದೆ.

ಒಂದಾನೊಂದು ಕಾಲದಲ್ಲಿ!

ಶಿವಮೊಗ್ಗದಲ್ಲಿ ಒಂದು ಸಮಯದಲ್ಲಿ ಗುಪ್ತಚರ ಇಲಾಖೆ ಅದೆಷ್ಟು ಸ್ಟ್ರಾಂಗ್​ ಆಗಿತ್ತು ಎಂದರೆ, ಅದರ ಸ್ಕ್ಯಾನಿಂಗ್​ ಕಣ್ಣುಗಳಿಂದ ಕ್ರೈಂ ಲೋಕ ತಪ್ಪಿಸಿಕೊಳ್ಳುವುದು ಅಸಾಧ್ಯವೇ ಆಗಿತ್ತು. ನಕ್ಸಲ್​ ವಿಚಾರವಾಗಿ ದೊಡ್ಡ ದೊಡ್ಡ ಕಾರ್ಯಾಚರಣೆಗಳು ನಡೆದ ಸಂದರ್ಭದಲ್ಲಿ ಅದರ ಹಿಂದೇ ಪೊಲೀಸ್​ ಸಿಬ್ಬಂದಿ ಮಾರುವೇಷದಲ್ಲಿ ಗೌಪ್ಯ ಮಾಹಿತಿಗಳನ್ನ ಸಂಗ್ರಹಿಸಿದ ದಂತಕಥೆಗಳಿವೆ. ಈಗಲೂ ಈ ಹಿಂದಿ ಗೌಪ್ಯ ಕಾರ್ಯಾಚರಣೆ ತಂತ್ರಗಳ ಅಗತ್ಯವಿದೆ.

ಇನ್ನೂ ಪೊಲೀಸ್​ ಇಲಾಖೆ, ಮತೀಯ ಶಕ್ತಿಗಳನ್ನು ಮಟ್ಟಹಾಕದಿದ್ದರೇ, ಸದ್ಯ ಕೋಮುಸೂಕ್ಷ್ಮ ಪ್ರದೇಶಗಳ ಮೇಲೆ ಕಣ್ಣಿಡಲು ಪತ್ತೆದಾರಿ ಸಿಸಿ ಕ್ಯಾಮರಾಗಳು ಸಹ ಉಪಯೋಗಕ್ಕೆ ಬಾರದಂತಾಗುತ್ತವೆ. ಖಡಕ್​ ಆಫಿಸರ್​ಗಳು ಶಿವಮೊಗ್ಗದಲ್ಲಿ ಇದ್ದು, ಗೃಹಸಚಿವರೇ ಇಲ್ಲಿಯವರಾಗಿದ್ದು, ಇಂತಹ ವಿಚಾರಗಳಲ್ಲಿ ನಿರ್ಲಕ್ಷ್ಯ ವ್ಯಕ್ತವಾಗಲಾರದು ಎಂಬುದೊಂದು ನಂಬಿಕೆ. ಇದು ಸುಳ್ಳಲಾಗದಿರಲಿ!

ಲಾಸ್ಟ್​ ಬೈಟ್​

ಅಟ್​ ಲಾಸ್ಟ್​ ಬಟ್ ನಾಟ್​ ಇನ್​ ಲಿಸ್ಟ್ ಎಂಬಂತೆ ಒಂದು ಮಾತು, ಶಿವಮೊಗ್ಗ ಪೊಲೀಸ್​ ಇಲಾಖೆಯ ಅಧಿಕಾರಿಗಳಿಗೂ ನೈತಿಕ ಬೆಂಬಲ ನೀಡುವುದು ಮೇಲ್ಪಂಕ್ತಿಯ ಆಡಳಿತ ವ್ಯವಸ್ಥೆಯ ಕೆಲಸ, ಯಾವುದೋ ಫೋನ್​ ಕಾಲ್​ ಶಿಫಾರಸ್ಸುಗಳಿಗೆ ಮಣೆ ಹಾಕಿ, ಡಿಪಾರ್ಟ್​ಮೆಂಟ್​ ಅಧಿಕಾರಿಗಳ ಸ್ಥೈರ್ಯ ಕುಗ್ಗಿಸಿದರೆ, ಅವರುಗಳ ಕೆಲಸಕ್ಕೆ ಪ್ರಾಮಾಣಿಕ ನ್ಯಾಯ ಒದಗಿಸದೇ ಹೋದರೆ, ಅದು ಇಲಾಖೆಗೇ ಆಗುವ ನಷ್ಟ!

Leave a Comment