Theft case / ಅಡ್ರೆಸ್ ವಿಚಾರಿಸುತ್ತಾ ಚಿನ್ನದ ಸರ ಕದ್ದುಕೊಂಡು ಹೋದ ಹಿಂದಿ ಗ್ಯಾಂಗ್

Hindi gang steals gold chain after enquiring about address

Theft case / ಅಡ್ರೆಸ್ ವಿಚಾರಿಸುತ್ತಾ ಚಿನ್ನದ ಸರ ಕದ್ದುಕೊಂಡು ಹೋದ ಹಿಂದಿ ಗ್ಯಾಂಗ್

ಶಿವಮೊಗ್ಗ ನ್ಯೂಸ್​/ SHIVAMOGGA NEWS/ Malenadu today/ Apr 21, 2023/ KARNATAKA ONLINE NEWS / GOOGLE NEWS


ಶಿವಮೊಗ್ಗ/  ವಿಳಾಸ ಕೇಳುವ ನೆಪದಲ್ಲಿ ಬಂದು ಚಿನ್ನದ ಸರ ಕದ್ದು ಪರಾರಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 

ನಡೆದಿದ್ದೇನು?

ಶಿವಮೊಗ್ಗದ ಕೋಟೆ ಪೊಲೀಸ್ ಸ್ಟೇಷನ್​ (kote police station) ಲಿಮಿಟ್ಸ್​ನಲ್ಲಿ ಈ ಘಟನೆ ನಡೆದಿದೆ. 

ಅಶೋಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರನ್ನ ಅಪರಿಚಿತರು ತಡೆದು ಮಾತನಾಡಿಸಿದ್ದಾರೆ. 

ಮನೆ ಕೆಲಸ ಮುಗಿಸಿಕೊಂಢು ಹೋಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿ ಬೈಕ್​ನಲ್ಲಿ ಬಂದಿದ್ದ ಅಪರಿಚಿತರು ಮೊದಲಿಗೆ ಯಾವುದೋ ವಿಳಾಸ ಕೇಳಿದ್ದಾರೆ. ಮಹಿಳೆ ತಮಗೆ ಗೊತ್ತಿಲ್ಲ ಎಂದು ಮುಂದಕ್ಕೆ ಹೋಗುತ್ತಿದ್ದಂತೆ, ಅವರ ಕತ್ತಿಗೆ ಕೈ ಹಾಕಿ ಸರ ಕದ್ದು ಪರಾರಿಯಾಗಿದ್ಧಾರೆ. 



ಕೋಟೆ ಪೊಲೀಸರಿಗೆ ದೂರು

ಈ ಸಂಬಂಧ ಮಹಿಳೆ ಕೋಟೆ ಪೊಲೀಸರಿಗೆ ದೂರು ನೀಡಿದ್ದು 6 ಗ್ರಾಂ ಬಂಗಾರದ ಸರ ಕಳುವಾಗಿದೆ ಎಂದು ದೂರು ನೀಡಿದ್ದಾರೆ. ಇನ್ನೂ ಕೋಟೆ ಪೊಲೀಸರು ಈ ಹಿಂದಿ ಗ್ಯಾಂಗ್​ನ್ನು ಹಿಡಿಯಲು ಪ್ರಯತ್ನಿಸ್ತಿದ್ದಾರೆ. 



ವಿವಿದೆಡೆ ರೂಟ್ ಮಾರ್ಚ್​ 

ಕರ್ನಾಟಕ ರಾಜ್ಯ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ – 2023ರ ಹಿನ್ನೆಲೆಯಲ್ಲಿ, ನಿನ್ನೆ  20-04-2023 ರಂದು ಶಿವಮೊಗ್ಗ ಪೊಲೀಸರು ವಿವಿದ ತಾಲ್ಲೂಕುಗಳಲ್ಲಿ ರೂಟ್​ ಮಾರ್ಚ್​ ನಡೆಸಿದ್ದಾರೆ. 



ಶಿಕಾರಿಪುರದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು CISF ನ ಅಧಿಕಾರಿ ಮತ್ತು ಸಿಬ್ಬಂಧಿಗಳು ಹಾಗೂ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂಧಿಗಳು ಭಾಗವಹಿಸಿದ್ದರು.



ಇನ್ನೂ ಸೊರಬದಲ್ಲಿ ನಡೆದ ಪಥಸಂಚಲನದಲ್ಲ ಸೊರಬ ಪೊಲೀಸ್ ಠಾಣೆ ಮತ್ತು CRPF (ಕೇಂದ್ರ ಮೀಸಲು ಪೊಲೀಸ್ ಪಡೆ) ನ ಅಧಿಕಾರಿ ಮತ್ತು ಸಿಬ್ಬಂಧಿಗಳು ಹಾಗೂ ಸೊರಬ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂಧಿಗಳು ಭಾಗವಹಿಸಿದ್ದರು.



ಅತ್ತ ಸಾಗರದಲ್ಲಿ ನಡೆದ ರೂಟ್​ ಮಾರ್ಚ್​ನಲ್ಲಿ  ಸಾಗರ ಟೌನ್ ಮತ್ತು ‌ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರುಗಳು, CRPF (ಕೇಂದ್ರ ಮೀಸಲು ಪೊಲೀಸ್ ಪಡೆ) ನ ಅಧಿಕಾರಿ ಮತ್ತು ಸಿಬ್ಬಂಧಿಗಳು ಹಾಗೂ ಸಾಗರದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳು ಭಾಗವಹಿಸಿದ್ದರು



ತೀರ್ಥಹಳ್ಳಿ ಯಲ್ಲಿ ಪೇಟೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರುಗಳು ಮತ್ತು ಶ್ರೀ ಡಿ ಕೆ ಸಿಂಗ್, ಪೊಲೀಸ್ ಉಪ ನಿರೀಕ್ಷಕರು, ಸಿಆರ್.ಪಿಎಫ್ ಮತ್ತು ಗುರುಪ್ರೀತ್  ಸಿಂಗ್ ಎಎಸ್ಐ ಸಿಆರ್.ಪಿಎಫ್, ಮತ್ತು CRPF (ಕೇಂದ್ರ ಮೀಸಲು ಪೊಲೀಸ್ ಪಡೆ) ನ ಅಧಿಕಾರಿ ಮತ್ತು ಸಿಬ್ಬಂಧಿಗಳು ಹಾಗೂ ತೀರ್ಥಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂಧಿಗಳು ಭಾಗವಹಿಸಿದ್ದರು



ಭದ್ರಾವತಿಯಲ್ಲಿ  CRPF (ಕೇಂದ್ರ ಮೀಸಲು ಪೊಲೀಸ್ ಪಡೆ) ನ ಅಧಿಕಾರಿ ಮತ್ತು ಸಿಬ್ಬಂಧಿಗಳು ಹಾಗೂ ಪೇಫರ್ ಟೌನ್ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂಧಿಗಳು ಭಾಗವಹಿಸಿದ್ದರು.

MUST READ /

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere, firstnews,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga, #ShivamoggaNews ,#Shimoga, #MalnadNews #LocalNews,#KannadaNewsWebsite ,#LatestNewsKannada ,#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್,  #Kannada_News,  #karnatakaassemblyelection2023,  #KarnatakaPolitics ,#KarnatakaLatestnews, #Karanataka, #election2023 ,#karnatakaelections2023 #BJPGovernment, #bjpkarnatakanews, #bjpvscongress, #BYVijayendra, #BasavarajBommai #Lakshmansavadi, #JagadishShettar, #Modi, #AmitShah, #JPNadda,