ರಸ್ತೆ ಪಕ್ಕ ಲಾರಿ ನಿಲ್ಲಿಸಿ ಮಲಗಿದ್ದ ಚಾಲಕ | ತಡರಾತ್ರಿ 3 ಗಂಟೆಗೆ ಕುತ್ತಿಗೆ ಮೇಲಿತ್ತು ಕತ್ತಿ | ಶಾಕಿಂಗ್ ಘಟನೆ

KARNATAKA NEWS/ ONLINE / Malenadu today/ Oct 17, 2023 SHIVAMOGGA NEWS

ಶಿವಮೊಗ್ಗದಲ್ಲಿ ಎರಡು ದಿನಗಳ ಹಿಂದೆ ಕುತ್ತಿಗೆಗೆ ಚಾಕು ಇಟ್ಟು ಹಣ ರಾಬರಿ ಮಾಡಿಕೊಂಡು ಹೋದ ಘಟನೆಯೊಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ 15 ರಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ (Shimoga Rural Police Station) ನಲ್ಲಿ ಕೇಸ್ ದಾಖಲಾಗಿದೆ. 

ಇಲ್ಲಿನ ಗುರುಪುರದಲ್ಲಿ ಈ ಘಟನೆ ನಡೆದಿದ್ದು, ಲಾರೀ ಚಾಲಕರೊಬ್ಬರು 14 ನೇ ತಾರೀಖು ರಾತ್ರಿ ತಮ್ಮ ಲಾರಿಯನ್ನು ಸೈಡ್​ಗೆ ನಿಲ್ಲಿಸಿ ಅದರಲ್ಲಿಯೇ ಮಲಗಿದ್ದರು. ಈ ವೇಳೆ ತಡರಾತ್ರಿ ಮೂರು ಗಂಟೆ ಹೊತ್ತಿಗೆ ಇಬ್ಬರು ದುಷ್ಕರ್ಮಿಗಳು ಲಾರಿ ಹತ್ತಿ ಕರ್ಟನ್​ ಸರಿಸಿ, ಚಾಲಕನ ಕುತ್ತಿಗೆ ಚಾಕು ಹಿಡಿದಿದ್ದಾರೆ.  

ಕುತ್ತಿಗೆಗೆ ಚಾಕು ಇಟ್ಟು ಪಿರ್ಯಾದಿಯವರನ್ನು ಎಬ್ಬಿಸಿ ನಿನ್ನ ಹತ್ತಿರ ಎಷ್ಟೋ ಹಣ ಇದೆ ಕೊಡು ಇಲವಾದರೆ ನಿನ್ನನ್ನು ಚಾಕುವಿನಿಂದ ಕುತ್ತಿಗೆಯನ್ನು ಕೊಯು ಸಾಯಿಸುವುದಾಗಿ ಹೆದರಿಸಿ ಚಾಲಕನ ಬಳಿ ಇದ್ದ 14,000/- ರೂ ನಗದು ಹಣ ಮತ್ತು 10,000/- ಬೆಲೆಯ ವಿವೋ ಮೊಬೈಲ್ ಅನ್ನು ಕಿತ್ತುಕೊಂಡು ತಮ್ಮೊಂದಿಗೆ ಬಂದಿದ್ದ ಇನ್ನೊಬ್ಬನ ಸ್ಕೂಟಿಯಲ್ಲಿ ಪರಾರಿಯಾಗಿದ್ದಾರೆ. 

ಈ ಸಂಬಂಧ  IPC 1860 (U/s-397 ಅಡಿಯಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್​ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸ್ತಿದ್ದಾರೆ. 


ಇನ್ನಷ್ಟು ಸುದ್ದಿಗಳು 

ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ


 

Leave a Comment