ಪೊಲೀಸರಿಗೆ ಗುಡ್ ನ್ಯೂಸ್ : ಅಂತರ್ ಜಿಲ್ಲಾ, ಘಟಕ, ವಲಯಗಳ ನಡುವೆ ವರ್ಗಾವಣೆಗೆ ಅಸ್ತು

 MALENADUTODAY.COM | SHIVAMOGGA  | #KANNADANEWSWEB

ವರ್ಗಾವಣೆಗಾಗಿ ಪರದಾಡುತ್ತಿದ್ದ ರಾಜ್ಯದ ಪೊಲೀಸರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.ರಾಜ್ಯ ಸರ್ಕಾರದಿಂದ ಪೊಲೀಸ್ ಇಲಾಖೆಯ ಸಬ್ ಇನ್ಸ್​ಪೆಕ್ಟರ್ ಹುದ್ದೆಯಿಂದ ಕೆಳ ಹಂತದ ಅಧಿಕಾರಿ,ಆಡಳಿತ ಸಿಬ್ಬಂದಿಗಳನ್ನು ಅಂತರ್ ಜಿಲ್ಲಾ, ಘಟಕ ಮತ್ತು ವಲಯ ವರ್ಗಾವಣೆಗೆ ಒಪ್ಪಿಗೆ ಸೂಚನೆ ನೀಡಲಾಗಿದೆ.

ಅಲ್ಲದೇ ಈ ವರ್ಗಾವಣೆ ಸಂಬಂಧ ಅಧಿಸೂಚನೆಯನ್ನು ಹೊರಡಿಸಲಾಗಿದೆ. ರಾಜ್ಯ ಸರ್ಕಾರಕ್ಕೆ ಡಿಜಿ,ಐಜಿಪಿ ಪ್ರವೀಣ್ ಸೂದ್  ಪೊಲೀಸ್ ವರ್ಗಾವಣೆ ಸಂಬಂಧ ನಿಯಮ ಮರು ಜಾರಿಗೆ ಅನುಮತಿ ನೀಡುವಂತೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು.ಇದಕ್ಕೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು ಈ ಬೆನ್ನಲ್ಲೇ ಸರ್ಕಾರ ಈಗ ಅಂತರ್ ಜಿಲ್ಲೆ, ಘಟಕ ಮತ್ತು ವಲಯ ವರ್ಗಾವಣೆಗೆ ಅಧಿಸೂಚನೆ ಹೊರಡಿಸಲಾಗಿದೆ.ಸರ್ಕಾರ ಹೊರಡಿಸಿರುವಂತ ಅಧಿಸೂಚನೆಯಲ್ಲಿ ಪಿಎಸ್‌ಐ, ಎಎಸ್‌ಐ, ಹೆಡ್ ಕಾನ್ ಸ್ಟೇಬಲ್, ಕಾನ್ ಸ್ಟೇಬಲ್, ಎಫ್ ಡಿಸಿ, ಎಸ್ ಡಿಸಿ ಗಳ  ಅಂತರ್ ಜಿಲ್ಲೆ, ಘಟಕ, ಕಮಿಷನರೇಟ್ ಹಾಗೂ ವಲಯವಾರು ವರ್ಗಾವಣೆಗೆ ಆಯಾ ವಿಭಾಗದ ಮುಖ್ಯಸ್ಥರಿಗೆ ಅಧಿಕಾರವನ್ನು ನೀಡಲಾಗಿದೆ.ಈ ಮೂಲಕ ಪೊಲೀಸರ ವೈಯಕ್ತಿಕ ಸಮಸ್ಯೆ ಕಾರಣಕ್ಕೆ ವರ್ಗಾವಣೆಗೆ ಸರ್ಕಾರ ಸ್ಪಂದಿಸಿದಂತೆ ಆಗಿದೆ.

ಅಂದಹಾಗೇ ರಾಜ್ಯ ಸರ್ಕಾರ 2021ರಲ್ಲಿ 1977ರಿಂದ ಅಂತರ ಜಿಲ್ಲಾ ವರ್ಗಾವಣೆಗೆ ಇದ್ದ ನಿಯಮಕ್ಕೆ ತಿದ್ದುಪಡಿ ತಂದು ರದ್ದುಗೊಳಿಸಿತ್ತು.ಸರ್ಕಾರದ ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತವಾಗಿತ್ತು.ಈ ನಿಯಮವನ್ನು ಮರು ಜಾರಿಗೊಳಿಸುವಂತೆ ಸರ್ಕಾರಕ್ಕೆ ಡಿಜಿ-ಐಜಿಪಿ ಪ್ರಸ್ತಾವನೆಯನ್ನು ಸಲ್ಲಿಸಿದ್ದರು.

Shivamogga Malenadu Today

Leave a Comment