Evm machine : ಸ್ಥಳೀಯ ಚುನಾವಣೆಯಲ್ಲಿ ಇವಿಎಂ (EVM) ಯಂತ್ರಗಳನ್ನು ಬಳಸದಂತೆ ಸರ್ಕಾರ ನಿಷೇಧಿಸಿದ್ದು, ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಸಹ ಒಪ್ಪಿದ್ದಾರೆ. ಆದರೆ, ಖರ್ಗೆಯವರ ಮಗ ಕೂಡ ಇವಿಎಂ ಯಂತ್ರದಿಂದಗೆದ್ದಿರುವುದನ್ನು ಅವರು ಅರಿತುಕೊಳ್ಳಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ್ ಖರ್ಗೆ ಅವರು ಕಳೆದ ಚುನಾವಣೆಯಲ್ಲಿ ಸೋತ ಕಾರಣ ಇವಿಎಂನಲ್ಲಿ ದೋಷವಿದೆ ಎಂದು ಹೇಳುತ್ತಿದ್ದಾರೆ. ಆದರೆ, ಅದಕ್ಕಿಂತ ಹಿಂದಿನ ಚುನಾವಣೆಯಲ್ಲಿ ಅವರು ಗೆದ್ದಿದ್ದರು. ಅದರ ಬಗ್ಗೆ ಏನು ಹೇಳುತ್ತಾರೆ ಎಂದು ಈಶ್ವರಪ್ಪ ಪ್ರಶ್ನಿಸಿದರು. ಅಲ್ಲದೆ, ಖರ್ಗೆಯವರ ಮಗ ಸಹ ಇವಿಎಂ ಯಂತ್ರದಿಂದಲೇ ಗೆದ್ದಿರುವುದನ್ನು ಅವರು ತಿಳಿದುಕೊಳ್ಳಬೇಕು ಎಂದರು.
ಹಾಗೆಯೇ, ಇದು ಕಾಂಗ್ರೆಸ್ನವರ ಕುತಂತ್ರ ರಾಜಕಾರಣ ಎಂದು ಆರೋಪಿಸಿದ ಅವರು, ರಾಜ್ಯದ ಜನರು ಈಗ ಜಾಗೃತರಾಗಿದ್ದಾರೆ ಎಂದರು. ದೇಶದಲ್ಲಿ ನರೇಂದ್ರ ಮೋದಿ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಇದನ್ನು ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ಈ ಇವಿಎಂ ಪ್ರಕರಣವನ್ನು ತಂದಿದೆ ಎಂದರು.
Evm machine : ಮದ್ದೂರಿನ ಗಲಾಟೆ ಮತ್ತು ಸರ್ಕಾರದ ವಿರುದ್ಧ ಆರೋಪ
ಮಂಡ್ಯದ ಮದ್ದೂರಿನಲ್ಲಿ ( ನಡೆದ ಗಣಪತಿ ವಿಸರ್ಜನಾ ಮೆರವಣಿಗೆಯ ವೇಳೆ ನಡೆದ ಗಲಾಟೆ ಕುರಿತು ಮಾತನಾಡಿದ ಕೆ.ಎಸ್. ಈಶ್ವರಪ್ಪ, ಈ ಘಟನೆಯ ನಂತರ ಸರ್ಕಾರವು ಹಿಂದೂಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ ಮತ್ತು ಮುಸಲ್ಮಾನರಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು. ಇತ್ತೀಚಿನ ಘಟನೆಗಳಲ್ಲಿ, ಕೆಟ್ಟ ಮನಸ್ಥಿತಿಯ ಮುಸ್ಲಿಮರಿಗೆ ‘ಸರ್ಕಾರ ನಮ್ಮದು’ ಎಂಬ ಭಾವನೆ ಮೂಡಿದೆ. ಹಿಂದೂ ಸಮಾಜ ಜಾಗೃತವಾಗದಿದ್ದರೆ ತೊಂದರೆಗೆ ಸಿಲುಕುತ್ತದೆ ಎಂದ ಅವರು, ತಾವು ಕೇವಲ ಕೆಟ್ಟ ಮನಸ್ಥಿತಿಯ ಮುಸಲ್ಮಾನರ ವಿರುದ್ಧ ಮಾತ್ರ ಮಾತನಾಡುತ್ತಿರುವುದಾಗಿ ಸ್ಪಷ್ಟಪಡಿಸಿದರು. ಮುಂದಿನ ದಿನಗಳಲ್ಲಿ ಹಿಂದೂಪರ ಸರ್ಕಾರ ಬರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ks eshwarappa
