MALENADUTODAY.COM/ SHIVAMOGGA / KARNATAKA WEB NEWS
ಶಿವಮೊಗ್ಗ ನಗರದ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಕ್ರೆಬೈಲ್ ಆನೆ ಬಿಡಾರದ ವೈದ್ಯ ಡಾ.ವಿನಯ್ಯವರ ಆರೋಗ್ಯದಲ್ಲಿ ಕೊಂಚ ಮಟ್ಟಿನ ಸುಧಾರಣೆ ಕಂಡು ಬಂದಿದೆ. ಈ ನಡುವೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗುತ್ತಿದೆ. ವಿಶೇಷ ಆ್ಯಂಬುಲೆನ್ಸ್ನಲ್ಲಿ ಬೆಂಗಳೂರಿಗೆ ಅವರನ್ನು ಜೀರೋ ಟ್ರಾಫಿಕ್ನಲ್ಲಿ ಕರೆದೊಯ್ಯಲಾಗುತ್ತಿದೆ.
ಏರ್ಲಿಫ್ಟ್ಗೆ ನಡೆದಿತ್ತು ಸಿದ್ಧತೆ
ಈ ಮೊದಲು ಅವರನ್ನು ಬೆಂಗಳೂರಿಗೆ ಏರ್ಲಿಫ್ಟ್ ಮಾಡಲು ಸಿದ್ಧತೆ ನಡೆಸಲಾಗಿತ್ತು. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಇದಕ್ಕಾಗಿ ಸಕಲ ತಯಾರಿ ನಡೆಸಿ ಅರಣ್ಯ ಭವನದಿಂದಲೇ ಅನುಮತಿ ಪಡೆದಿದ್ದರು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಏರ್ಲಿಫ್ಟ್ ಪ್ಲಾನ್ ವಿಫಲವಾಗಿದೆ.
ಜೀರೋ ಟ್ರಾಫಿಕ್ನಲ್ಲಿ ಬೆಂಗಳೂರಿಗೆ
ಇದೀಗ ಬಂದ ಮಾಹಿತಿಯ ಪ್ರಕಾರ, ಬೆಂಗಳೂರಿನ ಮಣಿಪಾಲ್ ಹಾಸ್ಟಿಟಲ್ನಿಂದ ವಿಶೇಷ ರೆಸ್ಕ್ಯೂ ಟೀಂ, ಸ್ಪೆಷಲ್ ಆ್ಯಂಬುಲೆನ್ಸ್ ನಲ್ಲಿ ಶಿವಮೊಗ್ಗಕ್ಕೆ ಬರುತ್ತಿದ್ದು, ಕೆಲವೇ ಹೊತ್ತಿನಲ್ಲಿ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯನ್ನು ತಲುಪಲಿದೆ. ಆ್ಯಂಬುಲೆನ್ಸ್ ತಲುಪುತ್ತಲೆ ಡಾ.ವಿನಯ್ರನ್ನು ಬೆಂಗಳೂರಿಗೆ ಜೀರೋ ಟ್ರಾಫಿಕ್ನಲ್ಲಿ ಶಿಫ್ಟ್ ಮಾಡಲಾಗುತ್ತದೆ.
ಸುಮಾರು ಮೂರುವರೆ ನಾಲ್ಕು ಗಂಟೆಗಳಲ್ಲಿ ಆ್ಯಂಬುಲೆನ್ಸ್ ರಾಜಧಾನಿ ತಲುಪಲಿದ್ದು, ಅಲ್ಲಿನ ಮಣಿಪಾಲ್ ಆಸ್ಪತ್ರೆ ಯಲ್ಲಿ ಡಾ.ವಿನಯ್ರವರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಆನೆ ದಾಳಿಯಿಂದ ಗಾಯಗೊಂಡಿದ್ದ ವಿನಯ್
ಚನ್ನಗಿರಿಯ ಸೂಳೆಕೆರೆಯ ಬಳಿಯಲ್ಲಿ ಅಪ್ರಾಪ್ತೆಯೊಬ್ಬರನ್ನು ತುಳಿದು ಸಾಯಿಸಿದ್ದ ಕಾಡಾನೆಯನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಡಾ.ವಿನಯ್ ಪಾಲ್ಗೊಂಡಿದ್ದರು. ಹೊನ್ನಾಳಿಯ ಜೀನಹಳ್ಳಿಯ ಬಳಿ ಕಾರ್ಯಾಚರಣೆಯನ್ನು ಲೀಡ್ ಮಾಡುತ್ತಿದ್ದ ಡಾ.ವಿನಯ್ ಆನೆಗೆ ಡಾರ್ಟ್ ಮಾಡಿದ್ದರು. ಈ ವೇಳೆ ಆನೆ ಅವರ ಮೇಲೆಯೇ ದಾಳಿ ಮಾಡಿತ್ತು. ಘಟನೆಯಲ್ಲಿ ಆನೆ ದಾಳಿಗೆ ತುತ್ತಾದ ಡಾ.ವಿನಯ್ರವರ ಕೈಗೆ ಹಾಗು ಬೆನ್ನಿನ ಹುರಿಗೆ ತೀವ್ರವಾದ ಗಾಯಗಳಾಗಿದ್ದವು. ಅಂದು ಅವರನ್ನ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. , ಅಲ್ಲಿಂದ ಇಲ್ಲಿಯವರೆಗೂ ಎಂಐಸಿಯುನಲ್ಲಿ ಡಾ.ವಿನಯ್ರನ್ನು ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.ಈ ಮಧ್ಯೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಅವರನ್ನು ಶಿಫ್ಟ್ ಮಾಡಲು ತಜ್ಞ ವೈದ್ಯರ ತಂಡ ನಿರ್ಧರಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ :BREAKING NEWS/ ಚನ್ನಗಿರಿಯಲ್ಲಿ ಸಕ್ರೆಬೈಲ್ ಆನೆ ಬಿಡಾರದ ವೈದ್ಯ ಡಾ.ವಿನಯ್ ಮೇಲೆ ದಾಳಿ
ಇದನ್ನು ಸಹ ಓದಿ
Read /ಅಪ್ಪನ ನಿವೃತ್ತಿ ಬಗ್ಗೆ ಪುತ್ರ ಕೆ.ಇ.ಕಾಂತೇಶ್ ಹೇಳಿದ್ದೇನು?
Read /KS Eshwarappa/ ನಿವೃತ್ತಿ ನಿರ್ಧಾರದ ಹಿಂದೇ ಬಿಎಸ್ ಯಡಿಯೂರಪ್ಪ & ಬಸವರಾಜ ಬೊಮ್ಮಾಯಿಯವರ ಆಟ ಕಾರಣವಾ? ಹೀಗಂದಿದ್ದು ಯಾರು?
Read / BREAKING NEWS/ ಸಿಕ್ಕಿಬಿದ್ದ ಕಾಡಾನೆ/ ಆಪರೇಷನ್ ದಾವಣಗೆರೆ ಎಲಿಫೆಂಟ್ ಸಕ್ಸಸ್/ ಸೆರೆಯಾಗಿದ್ದೇಗೆ ವೈಲ್ಡ್ ಟಸ್ಕರ್!
Read / Election code of conduct/ ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿ 9.5 KG ಚಿನ್ನ ಜಪ್ತಿ! ಯಾರದ್ದು ಇಷ್ಟೊಂದು ಬಂಗಾರ?
Read / BREAKING NEWS/ ಚನ್ನಗಿರಿಯಲ್ಲಿ ಸಕ್ರೆಬೈಲ್ ಆನೆ ಬಿಡಾರದ ವೈದ್ಯ ಡಾ.ವಿನಯ್ ಮೇಲೆ ದಾಳಿ
Read / ಶಿವಮೊಗ್ಗದ ಹೋಟೆಲ್ ವಿರುದ್ಧ ಕೇಸ್ ಗೆದ್ದ ಬೆಂಗಳೂರು ಗಾಂಧಿ ಬಜಾರ್ನ ವಿದ್ಯಾರ್ಥಿ ಭವನ
Read / ಬಿ.ವೈ.ವಿಜಯೇಂದ್ರರಿಗೆ ಶಿಕಾರಿಪುರ, ಭದ್ರಾವತಿಗೆ ಮಂಗೋಟೆ ರುದ್ರೇಶ್ !ಶಿವಮೊಗ್ಗ ನಗರ ಮಾತ್ರವೇ ಸಸ್ಪೆನ್ಸ್? ಬಿಜೆಪಿ ಲಿಸ್ಟ್ನಲ್ಲಿ ಶಿವಮೊಗ್ಗ ಜಿಲ್ಲೆ ವಿವರ ಇಲ್ಲಿದೆ
ನಮ್ಮ ಸೋಶೀಯಲ್ ಮೀಡಿಯಾ ಲಿಂಕ್ಗಳು ಕ್ಲಿಕ್ ಮಾಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS/
kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt, firstnews kannada, Shivamogga today, shivamogga news, shivamogga live, shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #Kannada_News