ಶಿವಮೊಗ್ಗ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಮತ್ತು ನಾಲ್ಕನೇ ‘ಪ್ರಬಲ’ ಅಭ್ಯರ್ಥಿ ಯಾರು?

MALENADUTODAY.COM/ SHIVAMOGGA / KARNATAKA WEB NEWS  

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು? ಗೊತ್ತಿಲ್ಲ! ಕಾಂಗ್ರೆಸ್ ಅಭ್ಯರ್ಥಿ ಯಾರು ಗೊತ್ತಿಲ್ಲ? ಜೆಡಿಎಸ್​ ಅಭ್ಯರ್ಥಿಯಾರು ? ಗೊತ್ತಿಲ್ಲ. ಹಾಗಾದರೆ ಎಲೆಕ್ಷನ್​ಗೆ ನಿಲ್ಲೋರು ಯಾರು? ಆಯನೂರು ಮಂಜುನಾಥ್​  (aynauru manjunath)ನಿಲ್ತಾರೆ ಉಳಿದವರು ಯಾರು ಗೊತ್ತಿಲ್ಲ! ಯಾರನ್ನೆ ಕೇಳಿದ್ರೂ ಸದ್ಯ  ಶಿವಮೊಗ್ಗದಲ್ಲಿ ಸಿಗುತ್ತಿರುವ ಉತ್ತರ ಇದು

Malenadu Today Shivamogga

ಹಾಗಾದ್ರೆ ಯಾರು ಕ್ಯಾಂಡಿಡೇಟ್​

ಮೊದಲು ಬಿಜೆಪಿ ಕಚೇರಿಯಲ್ಲಿ ಇಣುಕಿ ನೋಡೋದಾಯ್ತು ಎಂದರೆ, ಇದೇ 15 ಕ್ಕೆ ಅಬ್ಬರದ ಮೆರವಣಿಗೆಯಲ್ಲಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದರಂತೆ ಕೆ.ಎಸ್​.ಈಶ್ವರಪ್ಪ ನವರು. ಆದರೆ ಹೈಕಮಾಂಡ್ ಅವರನ್ನ ಈ  ಇಳಿ ವಯಸ್ಸಿನಲ್ಲಿ ಚಿವುಟಿದೆ. ಹಾಗಾದ್ರೆ ಅಭ್ಯರ್ಥಿಯಾರು? ಜ್ಯೋತಿಪ್ರಕಾಶ್ ಸರ್​ ಅಂತಾ ಕೆಲವರು ಹೇಳಿದ್ರೆ, ಇಲ್ಲಾ ಸಾರ್​ ಭಾನುಪ್ರಕಾಶ್​ರ ಮಗ ಹರೀಕೃಷ್ಣ (Hari Krishna M B) ಸರ್​ ಅಂತಿದ್ಧಾರೆ ಮತ್ತೆ ಕೆಲವರು, ಕೆಲವರು, ಮಿಕ್ಕಿದವರು, ಉಳಿದವರು, ತಿಳಿದವರು, ಡಾ.ಧನಂಜಯ್​ ಸರ್ಜಿ,  ಕೆ.ಇ.ಕಾಂತೇಶ್​,, ರುದ್ರೇಗೌಡರು ಸೇರಿದಂತೆ ಹಲವು ಹೆಸರುಗಳನ್ನ ಹೇಳುತ್ತಿದ್ದಾರೆ. ಹಾಗಿದ್ದೂ ನಿಜನಾ ಇಂತಹವರಿಗೇನಾ ಟಿಕೆಟ್ ಅಂತಾ ಕೇಳಿದ್ರೆ, ಇಲ್ಲಾ ಸಾರ್ ಹೈಕಮಾಂಡ್​ ಬಗ್ಗೆ ಗೊತ್ತಲ್ಲ, ಏನ್​ ಬೇಕಾದರೂ ಆಗಬಹುದು ಎನ್ನುತ್ತಿದ್ದಾರೆ ಕಾರ್ಯಕರ್ತರು! 

Malenadu Today Shivamogga

ಕಾಂಗ್ರೆಸ್​ನಲ್ಲಿ ಯಾರು ಕ್ಯಾಂಡಿಡೇಟ್​

ಕೆಪಿಸಿಸಿ ಅಧ್ಯಕ್ಷರು, ಎಐಸಿಸಿ ಅಧ್ಯಕ್ಷರು ಹಾಗೂ ವಿಪಕ್ಷ ನಾಯಕರಿಗೆ,  ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿರುವ  11 ಜನ ಆಕಾಂಕ್ಷಿಗಳ ಪೈಕಿ ಯಾರನ್ನ ಆಯ್ಕೆ ಮಾಡುವುದು ಎಂಬುದು ಗೊತ್ತಾಗುತ್ತಿಲ್ಲ. ಈ ಮಧ್ಯೆ 12 ನೆಯವರನ್ನಾಗಿ ಆಯನೂರು ಮಂಜುನಾಥ್​ರಿಗೆ ಟಿಕೆಟ್ ಕೊಡಬೇಕು ಎಂಬ ಚರ್ಚೆಯ ಉಷ್ಣಾಂಶ ಇದೀಗ ಇಳಿದಂತಿದೆ. ಕಾರಣ ಈಶ್ವರಪ್ಪನವರ ಚುನಾವಣಾ ರಾಜಕೀಯದ ನಿವೃತ್ತಿ. ಹಾಗಾದರೆ ಅಭ್ಯರ್ಥಿ ಯಾರಾಗಬಹುದು ಎನ್ನುವುದಕ್ಕೆ ಹೆಚ್​.ಸಿ. ಯೋಗೀಶ್​, ಹೆಚ್​.ಸುಂದರೇಶ್​, ಸತ್ಯನಾರಾಯಣ್ ರಾವ್ ಮತ್ತು ಕೆ.ಬಿ. ಪ್ರಸನ್ನಕುಮಾರ್​ರವರ ಹೆಸರುಗಳು ಪದೇ ಪದೇ ಕೇಳಿಬರುತ್ತಿದೆ. ಅದಕ್ಕಿಂತ ಹೆಚ್ಚಾಗಿ ಸೋಶಿಯಲ್​ ಮೀಡಿಯಾಗಳಲ್ಲಿ ಪ್ರೆಶರ್​ ಫುಲ್​ ಆಗಿ ರನ್​ ಆಗುತ್ತಿವೆ. ಇವು ಆರ್ಗಾನಿಕ್​ ಸರ್ಕ್ಯುಲೇಷನ್ನಾ ಅಥವಾ ರೆಫರೆಲ್ಲಾ ಅನ್ನೋದಕ್ಕೆ ಕೈಪಾಳಯದಲ್ಲಿಯೇ ಉತ್ತರ ಸಿಗಬೇಕು. ಅಂತಿಮವಾಗಿ ಅಭ್ಯರ್ಥಿ ಯಾರು? ಎಂಬ ಪ್ರಶ್ನೆಗೆ ಸಿಗುವ ಉತ್ತರ ನಾಳೆ ಗೊತ್ತಾಗುತ್ತೆ

Malenadu Today Shivamogga

ಜೆಡಿಎಸ್ ಅಭ್ಯರ್ಥಿ ಯಾರು

ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ ಮತ್ತು ತೀರ್ಥಹಳ್ಳಿ ಕ್ಷೇತ್ರ ಬಿಟ್ಟರೆ, ಉಳಿದ ಕ್ಷೆತ್ರಗಳ ಬಗ್ಗೆ ಜೆಡಿಎಸ್​ನ ಮಾಜಿ ಸಿಎಂ ಕುಮಾರಸ್ವಾಮಿ  ಒಲವು ತೋರಿರಲಿಲ್ಲ. ಆದರೆ ಇದೀಗ ಸನ್ನಿವೇಶ ಬದಲಾಗಿದೆ ..ಜೆಡಿಎಸ್​ನಿಂದಲೂ ಅಭ್ಯರ್ಥಿ ಅಖಾಡಕ್ಕೆ ಇಳಿಯುವ ಲಕ್ಷಣ ಕಾಣುತ್ತಿದೆ. ಅಭ್ಯರ್ಥಿಯೇ ಇಲ್ಲದೇ ಪ್ರಚಾರ ಆರಂಭಿಸಿರೋದು ಅದೆ ಕಾರಣಕ್ಕಾಗಿಯಂತೆ. ಹಾಗಾದರೆ ಕಣಕ್ಕಿಳಿಯೋದು ಯಾರು ಅಂದರೆ, ಎಂ.ಶ್ರೀಕಾಂತ್​  ಅಂತಾರೆ ಜೆಡಿಎಸ್​ ಕಾರ್ಯಕರ್ತರು. ಜೆಡಿಎಸ್​ನಲ್ಲಿ ಅವರನ್ನ ಬಿಟ್ಟರೆ ಬೇರೆ ಆಯ್ಕೆಗಳಿಲ್ಲ ಎಂಬುದು ವರಿಷ್ಟರಿಗೂ, ಪಕ್ಷದ ಕಾರ್ಯಕರ್ತರಿಗೂ ಸ್ಪಷ್ಟವಾಗಿದೆ. ಕಾರ್ಯಕರ್ತರ ಸಭೆಯಲ್ಲಿ ಅಭ್ಯರ್ಥಿ ಫೈನಲ್​ ಮಾಡುವುದಕ್ಕೂ ಮೊದಲು,  ನಾಲ್ಕೂ ಮೂಲೆಯ ಸ್ಪರ್ಧೆಯನ್ನು ಜೆಡಿಎಸ್​ ಎದುರು ನೋಡುತ್ತಿದೆ. 

Malenadu Today Shivamogga

ಆಯನೂರು ಮಂಜುನಾಥ್ ಯಾವ ಪಕ್ಷ?

ಸದ್ಯ ಮುಖ್ಯವಾಗಿ ಡೌಟ್ ಇರೋದು ಇದೆ.ಆಯನೂರು ಮಂಜುನಾಥ್​ ರನ್ನೆ ಕೇಳಿದರೆ, ಸದ್ಯದಲ್ಲಿಯೇ ಹೇಳ್ತೀನಿ ಯಾವ ಬಸ್ ಹತ್ತುತ್ತೇನೆ ಅಂತಾ! ಬೇಸ್​ ವಾಯ್ಸ್​ನಲ್ಲಿ ಕೌಂಟರ್ ಕೊಡ್ತಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್ ನಿರೀಕ್ಷಿಸ್ತಿರುವ ಅವರಿಗೆ ಅಲ್ಲಿ ಅದು ಕೈಗೆಟುಕದ ದ್ರಾಕ್ಷಿ ಅನ್ನುವುದು ಗೊತ್ತಿದೆ..ಬಿಜೆಪಿ ಅಭ್ಯರ್ಥಿ ಘೋಷಣೆ ನಂತರ ನಮ್ಮ ಕ್ಯಾಂಡಿಡೇಟ್ ಅಖಾಡಕ್ಕೆ ಇಳಿತಾರೆ ಅನ್ನುವ ಕಾಂಗ್ರೆಸ್​ನ ಮನಸ್ಸಲ್ಲಿ ಆಯನೂರು ಮಂಜುನಾಥ್​ ಇದ್ದಾರೆ. ಆದರೆ ಕಾಂಗ್ರೆಸ್​ನ ತಲೆಯೊಳಗೆ ಬೇರೆ ಬೇರೆ ಲೆಕ್ಕಗಳಿವೆ. ಇನ್ನೂ ಜೆಡಿಎಸ್​ ಹಾಲಿ ವಿಧಾನಪರಿಷತ್ ಸದಸ್ಯರ ಮೂರನೇ ಆಯ್ಕೆ.ಪಕ್ಷೇತರ ಅಭ್ಯರ್ಥಿ ಅನ್ನುವುದು ಸಂದರ್ಭ ಸಹಿತವಾಗಿ ಸಿಗಲಿರುವ ಉತ್ತರವಾಗಬಹುದು. 

Malenadu Today Shivamogga

ಬೆಳಕು ಕಾಣ್ತದಾ

ಕೆ.ಎಸ್​.ಈಶ್ವರಪ್ಪನವರೇ ಗೆಲ್ಲೋದು ಬಿಡಿ ಸಾರ್, ಎಲ್ಲಾ ಗೊತ್ತಿರೋದೆ ಅಂದರ್​ ಕೀ ಬಾತ್​ ಅಂತಾ ಶಿವಮೊಗ್ಗ ನಗರ ಕ್ಷೇತ್ರದ ಬಗ್ಗೆ ಕಾಮನ್​ ಮ್ಯಾನ್​ ಹೇಳುತ್ತಿದ್ದ.ಡಾ.ಧನಂಜಯ್​ ಸರ್ಜಿಯವರ ಜೀವಪರ ಎಂಟ್ರಿಯ ಕತ್ತು ಹಿಸುಕಿದ ಮೇಲಂತೂ ಮಾಜಿ ಸಚಿವರ ಗೆಲುವು ನಿಕ್ಕಿಯಾಗಿತ್ತು. ಅಷ್ಟರಲ್ಲಿ ಹರಕು ಬಾಯಿಗೆ ಹೊಲಿಗೆ ಬೀಳಲಿ ಎಂದು ಬಂದ ಆಯನೂರು ಮಂಜುನಾಥ್​ರ ರಂಗಪ್ರವೇಶ, ಶಿವಮೊಗ್ಗ ನಗರ ಕ್ಷೇತ್ರದಲ್ಲಿ ‘ಬೆಳಕು‘ ಕಾಣ್ತದಾ ಎಂದು ಕೇಳುವಂತೆ ಮಾಡಿದೆ. ಅಲ್ಲಿಂದ ಇಲ್ಲಿವರೆಗೂ ಅಭ್ಯರ್ಥಿಗಳು ಯಾರು ಎನ್ನುವ ಗೊಂದಲ್ಲಿಯೇ ಟಿವಿಗಳಿಗೆ ಟಿಆರ್​ಪಿ ತಂದುಕೊಂಡುತ್ತಿರುವ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಇನ್ನೂ ಹಲವು ಆಟಗಳು ಚುನಾವಣಾ ಚದುರಂಗಕ್ಕೆ ಬರಲಿದೆ… 

 ಇದನ್ನು ಸಹ ಓದಿ

Read /ಅಪ್ಪನ ನಿವೃತ್ತಿ ಬಗ್ಗೆ ಪುತ್ರ ಕೆ.ಇ.ಕಾಂತೇಶ್ ಹೇಳಿದ್ದೇನು?

Read /KS Eshwarappa/  ನಿವೃತ್ತಿ ನಿರ್ಧಾರದ ಹಿಂದೇ ಬಿಎಸ್​ ಯಡಿಯೂರಪ್ಪ & ಬಸವರಾಜ ಬೊಮ್ಮಾಯಿಯವರ ಆಟ ಕಾರಣವಾ? ಹೀಗಂದಿದ್ದು ಯಾರು?

Read / KS Eshwarappa/  ನಿವೃತ್ತಿ ನಿರ್ಧಾರದ ಹಿಂದೇ ಬಿಎಸ್​ ಯಡಿಯೂರಪ್ಪ & ಬಸವರಾಜ ಬೊಮ್ಮಾಯಿಯವರ ಆಟ ಕಾರಣವಾ? ಹೀಗಂದಿದ್ದು ಯಾರು? 

Read / BREAKING NEWS/  ಸಿಕ್ಕಿಬಿದ್ದ ಕಾಡಾನೆ/ ಆಪರೇಷನ್​ ದಾವಣಗೆರೆ ಎಲಿಫೆಂಟ್ ಸಕ್ಸಸ್​/  ಸೆರೆಯಾಗಿದ್ದೇಗೆ  ವೈಲ್ಡ್ ಟಸ್ಕರ್​!

Read / Election code of conduct/ ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿ  9.5 KG  ಚಿನ್ನ ಜಪ್ತಿ! ಯಾರದ್ದು ಇಷ್ಟೊಂದು ಬಂಗಾರ? 

Read / BREAKING NEWS/  ಚನ್ನಗಿರಿಯಲ್ಲಿ ಸಕ್ರೆಬೈಲ್ ಆನೆ ಬಿಡಾರದ ವೈದ್ಯ ಡಾ.ವಿನಯ್​ ಮೇಲೆ ದಾಳಿ 

Read / ಶಿವಮೊಗ್ಗದ ಹೋಟೆಲ್​ ವಿರುದ್ಧ ಕೇಸ್​ ಗೆದ್ದ ಬೆಂಗಳೂರು ಗಾಂಧಿ ಬಜಾರ್​ನ ವಿದ್ಯಾರ್ಥಿ ಭವನ 

Read / ಬಿ.ವೈ.ವಿಜಯೇಂದ್ರರಿಗೆ ಶಿಕಾರಿಪುರ, ಭದ್ರಾವತಿಗೆ ಮಂಗೋಟೆ ರುದ್ರೇಶ್​ !ಶಿವಮೊಗ್ಗ ನಗರ ಮಾತ್ರವೇ ಸಸ್ಪೆನ್ಸ್​? ಬಿಜೆಪಿ ಲಿಸ್ಟ್​ನಲ್ಲಿ ಶಿವಮೊಗ್ಗ ಜಿಲ್ಲೆ ವಿವರ ಇಲ್ಲಿದೆ 

Read/ ತಾರಾತಿಗಡಿ ವ್ಯಹಿವಾಟು ನಡೆಯುತ್ತಿದ್ಯಾ?  ಆ್ಯಪ್​ನಲ್ಲಿ ಕಂಪ್ಲೆಂಟ್ ಮಾಡಿ ಸೈಲೆಂಟ್ ಆಗ್ಬಿಡಿ! ಚುನಾವಣಾ ಅಕ್ರಮ ತಡೆಯುವ  ಸಿವಿಜಿಲ್ ಹೇಗೆ ಕೆಲಸ ಮಾಡುತ್ತೆ ಗೊತ್ತಾ? 

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News  

Leave a Comment