ಗಜಪ್ರಸವ ಹೇಗಿರುತ್ತೆ ಗೊತ್ತ! ತನ್ನ ಹೆರಿಗೆ, ಬಾಣಂತನಕ್ಕಾಗಿ ಹೆಣ್ಣಾನೆಯೊಂದು ಹಿರಿಯಾನೆಯ ಸಹವಾಸ ಮಾಡುತ್ತೆ ಅನ್ನೋದು ಗೊತ್ತಾ!? ವನ್ಯಜೀವಿ ವಿಶೇಷತೆ! By JP

This Article Written by / Malenadu Today / ಮೇ 24, 2023

 KARNATAKA NEWS/ ONLINE / Malenadu today/ May 24, 2023 SHIVAMOGGA NEWS

Malenadu today/ ಗಜಪ್ರಸವ ಎಂಬ ಹೆಸರು ಕೇಳಿದರೆ ಮೊದಲು ನೆನಪಿಗೆ ಬರುವುದೇ ಯಾತನೆ ನೋವಿನ ಅನುಭವ. ಆದರೆ ನಿಜವಾದ ಹೆಣ್ಣಾನೆಯೊಂದು ಪ್ರಸವದ ವೇಳೆ ಎಷ್ಟೊಂದು ನೋವು ಅನುಭವಿಸುತ್ತದೆ ಎಂಬುದು ಗೊತ್ತಿದ್ಯಾ.. ಇವತ್ತದನ್ನೆ ಹೇಳಲು ಹೊರಟಿದ್ದೇವೆ..ಸಾಮಾನ್ಯವಾಗಿ ಮಹಿಳೆಯರು ತಮ್ಮ ಪ್ರಸವದ ಸಂದರ್ಭದಲ್ಲಿ ತಮ್ಮೊಂದಿಗೆ ತಮ್ಮಾಪ್ತರು ಇರಲಿ ಎಂದು ಬಯಸುತ್ತಾರೆ. ಅದೇ ರೀತಿಯಲ್ಲಿ  ಹೆಣ್ಣಾನೆಯು ಆ ಸಂದರ್ಭದಲ್ಲಿ ತನ್ನೊಂದಿಗೆ ಇನ್ನೊಂದು ಆನೆಯ ಇರುವಿಕೆಯನ್ನ ಬಯಸುತ್ತದೆ.. ಅಚ್ಚರಿ ಅನಿಸಿದರು ಇದು ಸತ್ಯ 

Malenadu Today Shivamogga

ಹದಿನೆಂಟರಿಂದ ಇಪ್ಪತ್ತು ತಿಂಗಳು ಗಜಪ್ರಸವ

ಹೆಚ್ಚು ಕಮ್ಮಿ ಮನುಷ್ಯನಂತೆ ಸೂಕ್ಷ್ಮಜೀವಿಯಾಗಿರುವ ಆನೆಗಳು ಸಂಘಜೀವಿಯು ಹೌದು, ಅದರಲ್ಲಿಯು ಹೆಣ್ಣಾನೆಯೊಂದು ತಾನು ಗರ್ಭಧರಿಸಲು ನಾಲ್ಕೈದು ತಿಂಗಳು ಇರುವಾಗಲೇ ಇನ್ನೊಂದು ಹೆಣ್ಣಾನೆಯ ಜೊತೆಯಲ್ಲಿ ಕಾಲ ಕಳೆಯಲು ಆರಂಭಿಸುತ್ತದೆ. ಇದಕ್ಕೆ ಕಾರಣ ಪ್ರಸವದ ಬಳಿಕ  ತನಗೆ ಹಾಗು ಹುಟ್ಚುವ ಮರಿಯ ಆರೈಕೆಗೆ ಆ ಹೆಣ್ಣಾನೆ ಸಹಾಯವಾಗಲೆಂದು, ಇನ್ನೊಂದು ಹೆಣ್ಣಾನೆಯ ಸಹವಾಸ ಮಾಡಿ, ಅದರ ಜೊತೆಗಿನ ಸಂಬಂಧ ಗಟ್ಟಿ ಮಾಡಿಕೊಳ್ಳುತ್ತವೆ. ಇದೆಲ್ಲಾ ತಮಾಷೆಯೆನಿಸಿದರೂ, ವನ್ಯಜೀವಿ ತಜ್ಞರು ಈ ಬಗ್ಗೆ ಅದ್ಯಯನವನ್ನೆ ಮಾಡಿದ್ದಿದೆ. 

ಹಿರಿಯ ಹೆಣ್ಣಾನೆ ಲೀಡರ್

ಗುಂಪಾಗಿ ಇರುವ ಆನೆಗಳಲ್ಲಿ ಹಿರಿಯ ಹೆಣ್ಣಾನೆಯು ಮನೆ ಯಜಮಾನಿಯಾಗಿರುತ್ತದೆ. ಇದು ಕಾಡಿನ  ನಿಯಮ. ಗುಂಪಿನ ಹೆಣ್ಣಾನೆಗಳು ಗರ್ಭ ಕಟ್ಟುವ ವೇಳೆಗೆ  ಹಿರಿಯ ಹೆಣ್ಣಾನೆಯನ್ನೇ ಆಂಟಿ ಎಲಿಂಫೆಂಟ್ ಆಗಿ ನಿಂತು ಬಿಟ್ಟಿರುತ್ತವೆ. ಅಲ್ಲಿಂದ ಆ ಆನೆಯ ದೇಖಾರೇಖಿ ಹಿರಿಯ ಹೆಣ್ಣಾನೆಯದ್ದೇ ಆಗಿರುತ್ತದೆ.  ಸೂಲಗಿತ್ತಿಯಾಗಿ ಕೆಲಸ ಮಾಡುವ ಹಿರಿಯಾನೆ, ಪ್ರಸವದ ವೇಳೆ ವಿಶೇಷ ಕಾಳಜಿ ವಹಿಸುತ್ತವೆ.

ರಾತ್ರಿ ವೇಳೆ ನಡೆಯುತ್ತವೆ ಹೆರಿಗೆ  

ಸಾಮಾನ್ಯವಾಗಿ ಹೆಣ್ಣಾ ನೆಗಳು ಮಧ್ಯರಾತ್ರಿ ಇಲ್ಲವೇ ಬೆಳಗಿನ ಜಾವದಲ್ಲಿ ಮರಿಯನ್ನು ಹಾಕುತ್ತವೆ  ಆನೆಗಳು ಕಾಡಿನ ಪರಿಸರದಲ್ಲಿ ಏಕಾಂತದಲ್ಲಿರಲು ಬಯಸುತ್ತದೆ .ಸಂಗಾತಿ ಆನೆಯನ್ನು ಹೊರತು ಪಡಿಸಿ ಬೇರೆ ಯಾರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ. ಯಾರು ಇರದ ಪರಿಸರದಲ್ಲಿ  ಮರಿಗೆ ಜನ್ಮ  ನೀಡುತ್ತದೆ. 

ಚೊಚ್ಚಲ ಹೆರಿಗೆಯಾದ್ರೆ ಅಂತಹ ತಾಯಿ ಆನೆಗೆ  ತನ್ನ ಮರಿಗೆ ಹಾಲುಣಿಸುವಷ್ಟು ಜ್ಞಾನವನ್ನು ಹೊಂದಿರುವುದಿಲ್ಲ. ಆಗ ಸೂಲಗಿತ್ತಿಯಂತಿರುವ ಸಂಗಾತಿ ಆನೆ ಎಲ್ಲಾ ಜ್ಞಾನವನ್ನು ಧಾರೆ ಎರೆಯುತ್ತದೆ. ತಾಯಿ ಮರಿಗೆ  ರಕ್ಷಣಾತ್ಮಕವಾಗಿ ನಿಂತು ಅದರ ಬಾಣಂತನ ಮಾಡುತ್ತದೆ. ಬಿಡಾರದ ಆನೆಯಾದ್ರೆ ಮಾವುತರೇ ಮರಿಯಾನೆಗೆ  ಹಾಲುಣಿಸುತ್ತಾರೆ.

ವಿಶೇಷ ಅಂದರೆ ಹೆಣ್ಣಾನೆಯೊಂದು ತಾನು ಮರಿ ಹಾಕುವ ಸಂದರ್ಭದಲ್ಲಿ ಯಾರಾದ್ರೂ ಕಂಡು ಬಂದ್ರೆ ಅದು ಮರಿ ಹಾಕಲು ಹಿಂದೇಟು ಹಾಕುತ್ತದೆ. ಮೊದಲ ಗರ್ಭಾವಸ್ಥೆಯ ಸಂದರ್ಭದಲ್ಲಿ ಹೆಣ್ಣಾನೆ ಸಾಕಷ್ಟು ನೋವನ್ನು ಅನುಭವಿಸಿರುತ್ತದೆ. ತನ್ನ ನೋವನ್ನು ಹೊರಜಗತ್ತಿಗೆ ತೋರಿಸಿಕೊಳ್ಳದೆ, ಮೌನದಲ್ಲಿ ಘೀಳಿಡುವಾಗ ಅದರ ವೇದನೆ ಅರಣ್ಯ ರೋಧನವಾಗಿರುತ್ತದೆ.ಈ ಸಂದರ್ಭದಲ್ಲಿ ಆನೆಗೆ ಗಾಯಗಳಾಗುವುದು ಸಹಜ. ಬೀಡಾರದಲ್ಲಿನ ಆನೆಗಳಾದ್ರೆ ವೈದ್ಯರು ಚಿಕಿತ್ಸೆ ನೀಡುತ್ತಾರೆ. ಕಾಡಿನಲ್ಲಾಗುವ ಗಜಪ್ರಸವದ ನೋವು ಊಹೆಗೆ ಸಿಲುಕುವುದಿಲ್ಲ.

 

ಸಾಮಾನ್ಯವಾಗಿ  18ರಿಂದ 20 ತಿಂಗಳು ಆನೆ ಗರ್ಭಾವಸ್ಥೆಯಲ್ಲಿರುತ್ತದೆ. ಅದಕ್ಕಾಗಿಯೇ ಗಜಪ್ರಸವ ಎಂದು ಹೇಳಲಾಗುತ್ತದೆ. ವಿಶೇಷ ಅಂದರೆ, ಆನೆ ಬಿಡಾರಗಳ ಒಬ್ಬ ಅನುಭವಿ ಮಾವುತ ಕಾವಾಡಿ ಒಂದು ಹೆಣ್ಣಾನೆ  ಗರ್ಭಾವಸ್ಥೆಯಲ್ಲಿ ಇರುವ ಸಂದರ್ಭದಲ್ಲಿ ಅದು ಎಷ್ಟು ತಿಂಗಳು ಎಂದು ಹೇಳಬಲ್ಲ. ಪೂರ್ಣ ಗರ್ಭದ ಸ್ಥಿತಿಯಲ್ಲಿ ಆನೆಯ ಹೊಟ್ಟೆ ಒಳಗೆ ಮರಿಯಾನೆ ಓಡಾಡುವುದು ಒದ್ದಾಡುವುದು ಎಲ್ಲವನ್ನು ಕೂಡ ಅರಿಯಬಲ್ಲ ಇಂತಹದ್ದೇ ಸಮಯಕ್ಕೆ ಆನೆ ಮರಿ ಹಾಕಬಲ್ಲದು ಎಂದು ಹೇಳಬಲ್ಲ ಅನುಭವವನ್ನು ಮಾವುತ ಹೊಂದಿರುತ್ತಾನೆ.. 

 

ಓದುಗರೆ, ವನ್ಯಜೀವಿಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಈ ಅಂಕಣವನ್ನು ಬರೆಯುತ್ತಿದ್ದೇವೆ.ಈ ಬರಹಗಳು ಇಷ್ಟವಾದಲ್ಲಿ ಮಲೆನಾಡು ಟುಡೆ ಪ್ರಯತ್ನ ಸಾರ್ಥಕ! 

 

 

 

ಮುಂದಿನ ಸುದ್ದಿ ಒದಿ

Leave a Comment