divya vasantha anand guruji ಜ್ಯೋತಿಷಿ ಆನಂದ್ ಗುರೂಜಿಗೆ ಬ್ಲ್ಯಾಕ್‌ಮೇಲ್ ಹಾಗೂ ಕೊಲೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಟಿವಿ ಆಂಕರ್ ದಿವ್ಯಾ ವಸಂತ್ ಹಾಗೂ ಯುಟ್ಯೂಬ್ ಚಾನಲ್‌ವೊಂದರ ನಿರ್ವಾಹಕ ಕೃಷ್ಣಮೂರ್ತಿ ವಿರುದ್ಧ ಬೆಂಗಳೂರಿನ ಪೊಲೀಸ್ ಠಾಣೆಯೊಂದರಲ್ಲಿ ಎಫ್‌ಐಆರ್ ದಾಖಲಾಗಿದೆ.ಆನಂದ್ ಗುರೂಜಿ ನೀಡಿರುವ ದೂರು ಆಧರಿಸಿ ಚಿಕ್ಕಜಾಲ ಪೊಲೀಸ್ ಠಾಣೆಯ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ 2008 ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 126(2), 351(3), 352 ರಂತೆ fir ದಾಖಲಿಸಿದ್ದಾರೆ. ಈ ಸಂಬಂಧ ವಿಚಾರಣೆ ನಡೆಸಿರುವ ಪೊಲೀಸರು ಕೃಷ್ಣಮೂರ್ತಿಯನ್ನು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದ್ದರು. ಅಲ್ಲಿ ಅವರು ಜಾಮೀನಿನ ಮೇಲೆ ರಿಲೀಸ್ ಆಗಿದ್ದಾರೆ.
divya vasantha anand guruji ಎಫ್‌ಐಆರ್‌ನಲ್ಲಿ ಏನಿದೆ?
ಎಫ್‌ಐಆರ್‌ನಲ್ಲಿ ಏನಿದೆ?: ಆನಂದ ಗುರೂಜಿಯವರು ನೀಡಿರುವ ದೂರಿನಂತೆ ದಾಖಲಾಗಿರುವ ಎಫ್‌ಐಆರ್ ನಲ್ಲಿ ಅವರು, ಕಳೆದ ಆಗಸ್ಟ್ 26ರಂದು ಕಾರ್ಯಕ್ರಮ ಮುಗಿಸಿ ಆಶ್ರಮಕ್ಕೆ ಬರುತ್ತಿದ್ದಾಗ ಅಪರಿಚಿತರು ಕಾರು ಅಡ್ಡಗಟ್ಟಿ ಏಕವಚನದಲ್ಲಿ ನಿಂದಿಸಿ, ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಿದ್ದರು. ಅಲ್ಲದೆ ತಮ್ಮ ಬಳಿಕ ಅಶ್ಲೀಲ ವಿಡಿಯೊಗಳಿದ್ದು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಸಿ ಅಪರಿಚಿತರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡಲು ಒಪ್ಪದೇ ಇರುವ ಕಾರಣಕ್ಕೆ ಕೊಲೆ ಬೆದರಿಕೆ ಹಾಕಿದ್ದರು.

divya vasantha anand guruji

ಈ ಘಟನೆ ಬಳಿಕ ಕೃಷ್ಣಮೂರ್ತಿ ಎಂಬಾತ ಆಶ್ರಮಕ್ಕೆ ಬಂದು ವಿಡಿಯೊಗಳನ್ನು ಚಿತ್ರೀಕರಿಸಿದ್ದರು. ಅಲ್ಲದೆ ತಮ್ಮ ವಿರುದ್ಧ ಯುಟ್ಯೂಬ್ ಹಾಗೂ ಸಾಮ್ರಾಟ್ ಟಿ.ವಿಯಲ್ಲಿ ವಿಡಿಯೊ ಪ್ರಸಾರ ಮಾಡಿದ್ದರು. ನ್ಯಾಯಾಲಯದಿಂದ ತಡೆಯಾಜ್ಞೆ ತಂದರೂ ಕೃಷ್ಣಮೂರ್ತಿ ಹಾಗೂ ದಿವ್ಯಾ ವಸಂತ್ ಅವರು ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸಾಮ್ರಾಟ್ ಟಿ.ವಿ ಹಾಗೂ ಮುಖವಾಡ ಒ ಲೈವ್ ಎಂಬ ವಾಹಿನಿ ಯಲ್ಲಿ ಅಶ್ಲೀಲ ಪದ ಬಳಸಿ ವಿಡಿಯೊ ಪ್ರಸಾರ ಮಾಡಿದ್ದರು. ಮೂರನೇ ವ್ಯಕ್ತಿಯಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿದ್ದಾರೆ.
ಇನ್ನೂ ದಿವ್ಯಾ ವಸಂತ್ ವಿರುದ್ಧ ಸ್ಪಾಗಳಲ್ಲಿ ಸುಲಿಗೆ ನಡೆಸಿದ್ದ ಆರೋಪ ಕೇಳಿಬಂದಿತ್ತು. ಅವರನ್ನು ಜೆ.ಬಿ.ನಗರ ಠಾಣೆ ಪೊಲೀಸರು 2024ರ ಜುಲೈ 11ರಂದು ಕೇರಳದಲ್ಲಿ ಬಂಧಿಸಿದ್ದರು.