ಫೇಸ್​ಬುಕ್​ನಲ್ಲಿ ತೆಜೋವಧೆ ಕಾಮೆಂಟ್​​! ಚಕ್ರವರ್ತಿ ಸೂಲಿಬೆಲೆ ವಿರುದ್ದ ಪೊಲೀಸರಿಗೆ ಸೌಗಂಧಿಕಾ ಎಸ್​.ಆರ್​ ಕಂಪ್ಲೆಂಟ್​ ! ಏನಿದೆ ದೂರಿನಲ್ಲಿ?

KARNATAKA NEWS/ ONLINE / Malenadu today/ Aug 24, 2023 SHIVAMOGGA NEWS

ಸೋಶಿಯಲ್ ಮೀಡಿಯಾದಲ್ಲಿನ ಪೋಸ್ಟ್​ಗಳ ಮೇಲೆ ರಾಜ್ಯಸರ್ಕಾರ ಕಣ್ಣೀಟ್ಟಿರುವ ಬೆನ್ನಲ್ಲೆ, ವಯಕ್ತಿಕ ತೇಜೋವದೆ ಸಂಬಂಧ ಎಫ್​ಐಆರ್​ಗಳು ದಾಖಲಾಗುತ್ತಿವೆ. ಇದಕ್ಕೆ ಪೂರಕವೆಂಬಂತೆ, ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್ (Vinobanagar Police Station) ವಾಗ್ಮಿ ಚಕ್ರವರ್ತಿ ಸೂಲಿಬೆಲೆ (chakravarti sulibele ) ವಿರುದ್ಧ ದೂರೊಂದು ದಾಖಲಾಗಿದೆ. 

ಏನಿದು ಪ್ರಕರಣ? 

ಕೆಪಿಸಿಸಿ ಸೋಶಿಯಲ್ ಮೀಡಿಯಾ ವಿಭಾಗದಲ್ಲಿರುವ ಸೌಗಂಧಿಕಾ  ಎಸ್​.ಆರ್ ಎಂಬವರು ಈ ದೂರನ್ನ ನೀಡಿದ್ದಾರೆ. ಅವರು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ ವಿಚಾರ ಹೀಗಿದೆ. ಶ್ರೀಮತಿ ಸೌಗಂಧಿಕಾ ರಘುನಾಥ್ ರವರು ದಿನಾಂಕ: 23/08/2023 ರಂದು ಮಧ್ಯಾಹ್ನ ಮನೆಯಲ್ಲಿದ್ಧಾಗ,  ಅವರ ಫೇಸ್​ಬುಕ್​ ನಲ್ಲಿ ಚಕ್ರವರ್ತಿ ಸೂಲಿಬೆಲೆ ಎಂಬವರು ಸಂದೇಶವನ್ನು ಹಾಕಿದ್ದು, ಆ ಸಂದೇಶದಲ್ಲಿ ವೈಯಕ್ತಿಕವಾಗಿ ಅವಹೇಳನ ಮಾಡಲಾಗಿದೆ ಎಂದು ದೂರಲಾಗಿದೆ. ಸೌಗಂಧಿಕಾರರವರು ಚಂದ್ರಯಾನದ ಬಗ್ಗೆ ಸಂದೇಶವನ್ನು ಹಾಕಿದ್ದು ಅದರ ವಿರುದ್ಧವಾಗಿ ಅವಹೇಳನಕಾರಿಯಾಗಿ ತೇಜೋವದೆ ಮಾಡುವಂತಹ ಸಂದೇಶಗಳನ್ನು ಹಾಕಿದ್ದಾರೆ ಎಂದು ಆರೋಪಿಸಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಿ ದೂರು ನೀಡಿದ್ಧಾರೆ.   

 

ಇನ್ನಷ್ಟು ಸುದ್ದಿಗಳು

 


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

 

Leave a Comment