Shimoga | ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಪುಷ್ಯ/ಮಾಘ ಮಾಸ. ಕೃಷ್ಣ ಪಕ್ಷದ ಚತುರ್ದಶಿ ತಿಥಿ ಇಂದು ರಾತ್ರಿವರೆಗೂ ಇರಲಿದೆ. ಇಂದು ರಾತ್ರಿ 12:06 ರ ನಂತರ ಅಮಾವಾಸ್ಯೆ ಆರಂಭವಾಗಲಿದೆ. ಬೆಳಿಗ್ಗೆ 08:12 ರವರೆಗೆ ಮೂಲಾ ನಕ್ಷತ್ರವಿದ್ದು, ತದನಂತರ ಪೂರ್ವಾಷಾಢ ನಕ್ಷತ್ರವಿರಲಿದೆ. ರಾಹುಕಾಲ ಬೆಳಿಗ್ಗೆ 09:00 ರಿಂದ 10:30 ರವರೆಗೆ ಇರಲಿದ್ದು, ಗುಳಿಕ ಕಾಲ ಬೆಳಿಗ್ಗೆ 06:00 ರಿಂದ 07:30 ರವರೆಗೆ ಮತ್ತು ಯಮಗಂಡ ಕಾಲ ಮಧ್ಯಾಹ್ನ 01:30 ರಿಂದ 03:00 ರವರೆಗೆ ಇರಲಿದೆ.
Daily Horoscope

ಜಗಳ ಬಿಡಿಸಲು ಹೋದವರ ಜೀವ ಹೋದ ಕಥೆ, ಭದ್ರಾವತಿಯಲ್ಲಿ ನಿಜಕ್ಕೂ ನಡೆದಿದ್ದೇನು, ಜೆಪಿ ಬರೆಯುತ್ತಾರೆ
ಇಂದಿನ ರಾಶಿಫಲ
ಮೇಷ | ಈ ದಿನ ಸವಾಲಿನಿಂದ ಕೂಡಿರಲಿದೆ. ಕೈಗೆತ್ತಿಕೊಂಡ ಕೆಲಸ ಕಾರ್ಯಗಳಲ್ಲಿ ಅನಗತ್ಯ ಅಡೆತಡೆ. ವಿಶೇಷವಾಗಿ ಬೆಲೆಬಾಳುವ ವಸ್ತುಗಳ ವಿಚಾರದಲ್ಲಿ ಜಾಗರೂಕತೆ ವಹಿಸುವುದು ಅವಶ್ಯಕ. ನಿರೀಕ್ಷಿತ ಫಲ ಸಿಗದೆ ನಿರಾಸೆ. ಬಂಧುಗಳು ಹಾಗೂ ಸ್ನೇಹಿತರೊಂದಿಗೆ ಮನಸ್ತಾಪ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಏರಿಳಿತ
ವೃಷಭ | ಈ ದಿನ ಆರ್ಥಿಕವಾಗಿ ಸ್ವಲ್ಪ ಒತ್ತಡದಿಂದ ಕೂಡಿರಲಿದೆ. ಗಳಿಕೆಗಿಂತ ಖರ್ಚು ಹೆಚ್ಚಾಗುವ ಸಂಭವ, ಬಂಧುವರ್ಗದವರೊಂದಿಗೆ ಭಿನ್ನಾಭಿಪ್ರಾಯ. ಮನಸ್ಸು ಚಂಚಲ, ನಿರ್ಧಾರಕ್ಕೆ ಬರುವುದು ಕಷ್ಟವಾಗಬಹುದು. ಲೆಕ್ಕಾಚಾರಗಳು ತಪ್ಪಾಗುವ ಸಾಧ್ಯತೆ, ಉದ್ಯೋಗ ಮತ್ತು ವೃತ್ತಿಜೀವನದಲ್ಲಿ ನಿರುತ್ಸಾಹದ ವಾತಾವರಣ
ಮಿಥುನ |ಉತ್ಸಾಹದಾಯಕ ದಿನ. ಹೊಸ ಕೆಲಸ ಆರಂಭಿಸಲು ಇದು ಸೂಕ್ತ ಸಮಯ. ಬಹಳ ದಿನಗಳಿಂದ ನೋಡದ ಬಾಲ್ಯದ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ. ಮನೆಯಲ್ಲಿ ಶುಭ ಸಮಾರಂಭ. ಮನಸ್ಸಿನಲ್ಲಿರುವ ಯೋಜನೆಗಳು ಕಾರ್ಯರೂಪಕ್ಕೆ ಬರಲಿದ್ದು, ಉದ್ಯೋಗ ಮತ್ತು ವ್ಯಾಪಾರದಲ್ಲಿ ಉತ್ತಮ ಪ್ರಗತಿ ಇರಲಿದೆ.
ಕರ್ಕಾಟಕ |ಯಶಸ್ಸಿನ ದಿನವಾಗಲಿದೆ. ಸಮಾಜದಲ್ಲಿ ಗೌರವ ಮತ್ತು ವರ್ಚಸ್ಸು ಹೆಚ್ಚಾಗಲಿದೆ. ಸ್ನೇಹಿತರೊಂದಿಗೆ ಇದ್ದ ಹಳೆಯ ಮನಸ್ತಾಪ ಬಗೆಹರಿಯಲಿವೆ. ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಲಾಭ. ಅಂದುಕೊಂಡ ಕೆಲಸ ನೆರವೇರಲಿವೆ. ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ.

ಸಿಂಹ | ಮಿಶ್ರ ಫಲ. ಆದಾಯ ಸಾಧಾರಣ ಮಟ್ಟದಲ್ಲಿರಲಿದೆ. ಆಪ್ತರೊಂದಿಗೆ ವೈಮನಸ್ಸು. ಆರೋಗ್ಯದ ಕಡೆಗೆ ಮತ್ತು ಕೌಟುಂಬಿಕ ಸಮಸ್ಯೆಗಳ ಕಡೆಗೆ ಗಮನ ಹರಿಸಬೇಕಾಗುತ್ತದೆ. ಕೆಲಸಗಳಲ್ಲಿ ವಿಘ್ನ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಕಿರಿಕಿರಿ
ಕನ್ಯಾ | ಅನಗತ್ಯ ಪ್ರಯಾಣ. ಕೆಲಸ ಕಾರ್ಯಗಳಲ್ಲಿ ಅಡಚಣೆ ಉಂಟಾಗಲಿವೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಸಾಲ ಮಾಡಬೇಕಾದ ಪರಿಸ್ಥಿತಿ. ಕುಟುಂಬದ ಸದಸ್ಯರೊಂದಿಗೆ ಕಲಹ. ಆರೋಗ್ಯದಲ್ಲಿ ಏರುಪೇರಾಗುವ ಲಕ್ಷಣಗಳಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಂಕಷ್ಟ ಎದುರಾಗಬಹುದು.
ತೀರ್ಥಹಳ್ಳಿಯಲ್ಲಿ ಹೆಚ್ಚಿದ ದನ ಕಳ್ಳತನ! ಅಧಿಕಾರಿಗಳ ವಿರುದ್ಧವೇ ಕ್ರಮಕ್ಕೆ ಆಗ್ರಹ! ಏನಿದು
ತುಲಾ |ಶುಭದಾಯಕ ದಿನ. ಉದ್ಯೋಗಕ್ಕಾಗಿ ನಡೆಸುತ್ತಿರುವ ಪ್ರಯತ್ನ ಫಲ ನೀಡಲಿವೆ. ಬೆಲೆಬಾಳುವ ವಸ್ತು ಖರೀದಿ ಮಾಡುವ ಯೋಗ. ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವಿರಿ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಇದ್ದ ಅನಿಶ್ಚಿತತೆ ಅಥವಾ ಏರಿಳಿತಗಳು ದೂರವಾಗಲಿವೆ.
ವೃಶ್ಚಿಕ | ಆರ್ಥಿಕವಾಗಿ ಸ್ವಲ್ಪ ಹಿನ್ನಡೆ. ಆದಾಯವು ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ. ಅನಾವಶ್ಯಕ ಖರ್ಚು. ಸ್ನೇಹಿತರೊಂದಿಗೆ ಜಗಳ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ಸಾಹ ಕಡಿಮೆ ಇರಲಿದೆ.

ಧನು | ಇಂದು ಶುಭ ಸುದ್ದಿ. ದೀರ್ಘಕಾಲದ ಆಸ್ತಿ ಸಂಬಂಧಿತ ವಿವಾದಕ್ಕೆ ಮುಕ್ತಿ ಸಿಗಲಿದೆ. ಮನೆಗೆ ನೆಂಟರ ಆಗಮನ. ವ್ಯವಹಾರಗಳಲ್ಲಿ ಜಯ. ಶುಭ ಸಮಾಚಾರ. ಹೆಚ್ಚುವರಿ ಆದಾಯದ ಮೂಲಗಳು ಗೋಚರಿಸಲಿವೆ. ಉದ್ಯೋಗ ರಂಗದಲ್ಲಿ ಆಶಾದಾಯಕ ಬೆಳವಣಿಗೆ
ಮಕರ | ವ್ಯವಹಾರಗಳಲ್ಲಿ ಕಿರಿಕಿರಿ. ದೂರ ಪ್ರಯಾಣ. ಮನಸ್ಸಿನಲ್ಲಿ ಆತಂಕ, ಕಳ್ಳತನದ ಭಯ ಅಥವಾ ವಸ್ತುಗಳನ್ನು ಕಳೆದುಕೊಳ್ಳುವ ಭೀತಿ. ಕ್ಕಾಚಾರಗಳು ಉಲ್ಟಾ ಆಗಬಹುದು. ಆರೋಗ್ಯ ಸಮಸ್ಯೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಾಮಾನ್ಯ ದಿನ

20 ಸೆಕೆಂಡ್ನಲ್ಲಿ ಕದ್ದು ಬಿಟ್ಟರು! ಮೂಕ ಪ್ರಾಣಿಯ ಕಳ್ಳತನಕ್ಕೆ ಮೌನ ಸಾಕ್ಷಿಯಾದ ಸಾಗರ!
ಕುಂಭ | ಗೆಲುವಿನ ದಿನ. ಕೈಗೊಂಡ ಕೆಲಸಗಳನ್ನು ಯಶಸ್ವಿಯಾಗಿ ಪೂರೈಸುವಿರಿ. ಎಲ್ಲರಿಂದಲೂ ಮನ್ನಣೆ ಮತ್ತು ಗೌರವ. ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸಕಾಲ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಮುನ್ನಡೆ ಸಾಧಿಸುವಿರಿ.
ಮೀನ | ಸಂಪೂರ್ಣವಾಗಿ ಅನುಕೂಲಕರವಾಗಿದೆ ಈ ದಿನ. ಬಾಲ್ಯ ಸ್ನೇಹಿತರ ಭೇಟಿ, ಮನಸ್ಸಿಗೆ ಮುದ ಸಿಗಲಿದೆ. ಗಣ್ಯ ವ್ಯಕ್ತಿಗಳ ಪರಿಚಯ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಅತ್ಯಂತ ಉತ್ಸಾಹದಿಂದ ಸಾಗಲಿವೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.

ಸಂಕ್ರಾಂತಿ ವಿಶೇಷ : ತಾಳಗುಪ್ಪ ಶಿವಮೊಗ್ಗ ಬೆಂಗಳೂರು ನಡುವೆ 2 ಸ್ಪೆಷಲ್ ಟ್ರೈನ್ ಓಡಾಟ! ವೇಳಾಪಟ್ಟಿ ಇಲ್ಲಿದೆ